ನಾಲ್ಕನೇ ದಿನವೂ ಮುಂದುವರಿದ ಬಸ್ ಮುಷ್ಕರ – ಇವತ್ತೂ ಸಿಗಲ್ಲ KSRTC, BMTC ಬಸ್

ಬೆಂಗಳೂರು: ಕೆಎಸ್‍ಆರ್ ಟಿಸಿ, ಬಿಎಂಟಿಸಿ ನೌಕರರು ನಡೆಸ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇವತ್ತೂ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ಸಂಚಾರ ಮಾಡಲ್ಲ. ಇವತ್ತಿನಿಂದ ಸಾಲು ಸಾಲು ರಜೆ, ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಮುಷ್ಕರದ ಬಿಸಿ ತಟ್ಟಿದ್ದು, ಪ್ರಯಾಣಿಕರು ಪರದಾಡ್ತಿದ್ದಾರೆ.

ಏಪ್ರಿಲ್ 12ರಂದು ಸಾರಿಗೆ ನೌಕರರು ತಟ್ಟೆ-ಲೋಟ ಚಳುವಳಿಗೆ ನಿರ್ಧರಿಸಿದ್ದಾರೆ. ಅಂದರೆ ಅಲ್ಲಿವರೆಗೂ ಮುಷ್ಕರ ಕೊನೆ ಆಗುವ ಲಕ್ಷಣಗಳಿಲ್ಲ. ಈ ನಡುವೆ ಮುಷ್ಕರ ನಿರತ ಬಿಎಂಟಿಸಿಯ 120 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಮುಷ್ಕರ ನೇತೃತ್ವ ವಹಿಸಿರುವ ನೌಕರರು ಸೇರಿದಂತೆ ಕೆಎಸ್‍ಆರ್‍ಟಿಸಿ 287 ನೌಕರರನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ಶಿಕ್ಷೆ ನೀಡಲಾಗಿದೆ.

ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗದ ವರದಿಯಂತೆ ವೇತನ ಹೆಚ್ಚಳ ಸಾಧ್ಯವಿಲ್ಲ ಎಂದಿರುವ ಸಿಎಂ ಯಡಿಯೂರಪ್ಪ ಯಾರೊಂದಿಗೂ ಮಾತುಕತೆ ನಡೆಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸದ್ಯಕ್ಕಂತ ಸಾರಿಗೆ ಮುಷ್ಕರ ಕೊನೆ ಆಗುವ ಸಾಧ್ಯತೆ ಇಲ್ಲ.

Comments

Leave a Reply

Your email address will not be published. Required fields are marked *