– ವ್ಯಕ್ತಿಯ ಮುಗ್ಧತೆಗೆ ನೆಟ್ಟಿಗರು ಫಿದಾ
ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ದೇಶಾದ್ಯಂತ ಭಾರೀ ಅಲೆ ಎಬ್ಬಿಸಿದ್ದು, ಜನ ಮಾಸ್ಕ್ ಇಲ್ಲದೆ ಹೊರಗಡೆ ತೆರಳುವಂತಿಲ್ಲ. ಆದರೆ ಇತ್ತ ವ್ಯಕ್ತಿಯೊಬ್ಬ ತನ್ನ ಶ್ವಾನಕ್ಕೆ ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗಿದ್ದಾರೆ.
ಹೌದು. ನಾನು ಸತ್ತರೂ ಚಿಂತೆಯಲ್ಲ. ಆದರೆ ನನ್ನ ಮಗುವಿನಂತೆ ಇರುವ ಶ್ವಾನಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು. ಹೀಗಾಗಿ ನಾನು ಮಾಸ್ಕ್ ಹಾಕಿಕೊಳ್ಳದೆ ನನ್ನ ಶ್ವಾನಕ್ಕೆ ಧರಿಸಿದ್ದೇನೆ ಎಂದು ವ್ಯಕ್ತಿ ಹೇಳಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ವ್ಯಕ್ತಿಗೆ ಶ್ವಾನದ ಮೇಲಿರುವ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ವೀಡಿಯೋದಲ್ಲೇನಿದೆ..?
ರಸ್ತೆಯಲ್ಲಿ ವ್ಯಕ್ತಿಯೊಬ್ಬ ಹೆಗಲ ಮೇಲೆ ಶ್ವಾನವನ್ನು ಹೊತ್ತು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ವ್ಯಕ್ತಿಯನ್ನು ನೋಡಿ ಸ್ಥಳೀಯರೊಬ್ಬರು ವೀಡಿಯೋ ಮಾಡುತ್ತಾ ಅವರನ್ನು ಪ್ರಶ್ನಿಸಿದ್ದಾರೆ. ಶ್ವಾನಕ್ಕೆ ಮಾಸ್ಕ್ ಧರಿಸಿದ್ದೀಯಾ, ಆದರೆ ನೀನ್ಯಾಕೆ ಮಾಸ್ಕ್ ಹಾಕಿಕೊಂಡಿಲ್ಲ ಎಂದು ಕೇಳಿದ್ದಾರೆ.

ಇದಕ್ಕುತ್ತರಿಸಿದ ವ್ಯಕ್ತಿ, ನನಗೆ ಏನಾದರೂ ಪರವಾಗಿಲ್ಲ. ಆದರೆ ನನ್ನ ಶ್ವಾನಕ್ಕೆ ಏನೂ ಆಗಬಾರದು. ಇದು ನನಗೆ ಮಗುವಿದ್ದಂತೆ. ಒಂದು ವೇಳೆ ನಾನು ಸತ್ತರೂ ನನ್ನ ಶ್ವಾನಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು. ಹೀಗಾಗಿ ನಾನು ಮಾಸ್ಕ್ ಧರಿಸದೆ ಶ್ವಾನಕ್ಕೆ ಹಾಕಿದ್ದೇನೆ ಎಂದು ಮನಬಿಚ್ಚಿ ಮಾತಾಡಿದ್ದಾರೆ.
ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ವ್ಯಕ್ತಿಯ ಮುಗ್ಧ ಮನಸ್ಸಿಗೆ ಜನ ಮಾರು ಹೋಗಿದ್ದಾರೆ. ಅಲ್ಲದೆ ಈ ವೀಡಿಯೋವನ್ನು ಶ್ವಾನಪ್ರಿಯರು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ವೀಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಇದು ಯಾವ ಪ್ರದೇಶದ ವೀಡಿಯೋ ಹಾಗೂ ವ್ಯಕ್ತಿ ಯಾರು ಎಂಬುದು ತಿಳಿದುಬಂದಿಲ್ಲ.
View this post on Instagram

Leave a Reply