ನಾನು ಮೈಸೂರು ಸಂಸದ ಎನ್ನುವ ಬಗ್ಗೆ ಜನರಲ್ಲಿ ಗೊಂದಲವಿಲ್ಲ- ಸುಮಲತಾಗೆ ಪ್ರತಾಪ್ ಸಿಂಹ ತಿರುಗೇಟು

ಮಡಿಕೇರಿ: ನಾನು ಮೈಸೂರು ಸಂಸದ ಎಂಬುದರ ಬಗ್ಗೆ ಜನರಲ್ಲಿ ಗೊಂದಲವಿಲ್ಲ ಎಂದು ಕೊಡಗು, ಮೈಸೂರು ಸಂಸದ ಪ್ರತಾಪ್ ಸಿಂಹ ಸಂಸದೆ ಸುಮಲತಾ ಅವರಿಗೆ ತಿರುಗೇಟು ನೀಡಿದ್ದಾರೆ.

ಪ್ರತಾಪ್ ಸಿಂಹ ಮೈಸೂರು ಸಂಸದರೋ ಅಥವಾ ಮಂಡ್ಯ ಸಂಸದರೋ ಎಂಬ ಸುಮಲತಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಮೈಸೂರಿನಲ್ಲೇ ವಾಸವಾಗಿದ್ದೇನೆ, ಕ್ಷೇತ್ರದಲ್ಲೇ ಇದ್ದು ಅಭಿವೃದ್ಧಿ ಕೆಲಸ ಮಾಡುತ್ತಿರುತ್ತೇನೆ. ಸಂಸದೆ ಬಗ್ಗೆ ಮಂಡ್ಯದವರಿಗೆ ಗೊಂದಲ ಇರುತ್ತದೆ. ಅವರಿಗೆ ಮತ ಹಾಕಿದ ಜನರಿಗೆ ಗೊಂದಲವಿರುತ್ತದೆ. ಅವರು ಮಂಡ್ಯದಲ್ಲಿ ಇದ್ದಾರೋ? ಇಲ್ಲವೋ ಎಂಬ ಗೊಂದಲವಿರುತ್ತದೆ ಎಂದರು. ಇದನ್ನೂ ಓದಿ: ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ: ಅಭಿಷೇಕ್ ಅಂಬರೀಶ್

ನೀವು ಬಿಜೆಪಿ ಸಂಸದರಾ, ಜೆಡಿಎಸ್ ಸಂಸದರಾ ಎಂಬ ಸುಮಲತಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಮಂಡ್ಯದಲ್ಲಿ ಒಂದು ಕಟ್ಟೆ ಇರಬಹುದು. ಆದರೆ ಅದಕ್ಕೆ ಕೊಡಗಿನಿಂದಲೇ ನೀರು ಹೋಗಬೇಕು, ಕೊಡಗಿನ ಉಪಕೃತ ಅಣೆಕಟ್ಟೆ ಅದು ಕೆಆರ್ ಎಸ್. ಇಡೀ ರಾಜ್ಯಕ್ಕೆ ಸಂಬಂಧಿಸಿದ ವಿಷಯವನ್ನು ನೀವು ಸುಮ್ಮನೆ ವಿಷಯಾಂತರ ಮಾಡಬೇಡಿ. ಬಿರುಕು ಬಿಟ್ಟಿದೆ ಎಂದು ಹೇಳುವ ಮೊದಲು ನೀವು ಪರಿಶೀಲನೆ ಮಾಡಿದ್ದೀರಾ? ಅದು ತಪ್ಪು ಮಾಹಿತಿಯಾಗಿದ್ದರೆ, ತಪ್ಪು ಎಂದು ಒಪ್ಪಿಕೊಳ್ಳಿ ಎಂದರು. ಇದನ್ನೂ ಓದಿ: ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಅವ್ರ ಹೆಸರು ಬಳಸ್ತಿದ್ದೀರಿ: ಸುಮಲತಾ ಕಿಡಿ

ಕೊರೊನಾ ಸಂದರ್ಭದಲ್ಲಿ ರಾಜಕಾರಣ ಮಾಡಿಕೊಂಡು ಮಹಿಳಾ ಅಧಿಕಾರಿಯನ್ನು ಅವಮಾನ ಮಾಡಿ, ಎಲ್ಲ ಸೇರಿಕೊಂಡು ವರ್ಗಾವಣೆ ಮಾಡಿದ್ದೀರಿ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಇದು ಮೈಸೂರಿನ ವಿಷಯ ಅದು ನಿಮಗ್ಯಾಕೆ ಎಂದು ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *