ನಾನು ಈ ಮೂರು ವಸ್ತುಗಳನ್ನು ಮರೆಯುತ್ತೇನೆ: ರಮ್ಯಾ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ವೇಳೆ ಅಭಿಮಾನಿಗಳ ಪ್ರಶ್ನೆಗೆ ಸ್ಮಾರ್ಟ್ ಆಗಿ ಉತ್ತರಿಸುವ ಪ್ರಯತ್ಮವನ್ನು ಮಾಡಿದ್ದಾರೆ. ಇದೀಗ ಲೈವ್‍ನಲ್ಲಿ ಹೇಳಿಕೊಂಡಿರುವ ವಿಚಾರಗಳು ಸಖತ್ ಸುದ್ದಿ ಮಾಡುತ್ತಿವೆ. ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆಗೆ ಹಲವು ವಿಚಾರಗಳನ್ನು ಅವರು ಲೈವ್‍ನಲ್ಲಿ ಹೇಳಿಕೊಂಡಿದ್ದಾರೆ.

 

 

View this post on Instagram

 

A post shared by Sonu Venugopal (@sonuvenugopaal)

ನಾನು ಆಗಾಗ ಮೊಬೈಲ್, ಕನ್ನಡಕ ಮತ್ತು ಟೀತ್ ಐಲೈನರನ್ನು ಮರೆತು ಹೋಗುತ್ತೇನೆ ಎಂದು ತಾವು ಹೆಚ್ಚಾಗಿ ಮರೆತು ಹೋಗುವ ವಸ್ತುಗಳ ಕುರಿತಾಗಿ ಹೇಳಿಕೊಂಡಿದ್ದಾರೆ. ಸಿನಿಮಾಕ್ಕೆ ಮತ್ತೆ ಯಾವಾಗ ಮರಳುತ್ತೀರಿ ಎಂದು ಕೇಳಿದಾಗ, ಸದ್ಯ ಇಲ್ಲ ಅಂತ ಹೇಳಿ ಸರಿಯಾಗಿ ಉತ್ತರ ನೀಡದೇ ಜಾರಿಕೊಂಡಿದ್ದಾರೆ.  ಇದನ್ನೂ ಓದಿ:
ನನ್ನ ಮದುವೆಗೆ ಯಾರೂ ಬರಲ್ಲ ಅಂತೆ: ರಮ್ಯಾ

ನಾನು ಅಷ್ಟೊಂದು ಚೆನ್ನಾಗಿ ಇದೀನಿ ಅಂತ ಅಂದುಕೊಳ್ಳೋದಿಲ್ಲ. ನಾನು ಎವರೇಜ್ ಗರ್ಲ್. ಸಿನಿಮಾ ಮಾಡುವಾಗ ಆರೋಗ್ಯದ ಬಗ್ಗೆ ಸಿಕ್ಕಾಪಟ್ಟೆ ಗಮನ ಕೊಡುತ್ತಿದ್ದೆ. ಆಗ ಡಯೆಟ್, ವ್ಯಾಯಾಮ ಮಾಡುತ್ತಿದ್ದೆ. ಈಗ ಮನಸ್ಸಿಗೆ ಬಂದಿದ್ದನ್ನೆಲ್ಲ ತಿನ್ನುತ್ತೇನೆ, ಆದಾಗ ವ್ಯಾಯಾಮ ಮಾಡುತ್ತೇನೆ ಎಂದು ತಮ್ಮ ಸೌಂದರ್ಯದ ಗುಟ್ಟನ್ನು ಹೇಳಿಕೊಂಡಿದ್ದಾರೆ.

ನನಗೆ ಸೀರೆ ಅಂದ್ರೆ ತುಂಬಾ ಇಷ್ಟ. ಆದ್ರೆ ನಾನು ಎಲ್ಲಿಗೂ ಹೋಗುವುದಿಲ್ಲ. ಹೀಗಾಗಿ ನಾನು ಸೀರೆ ಹಾಕುವುದು ಕಡಿಮೆಯಾಗಿದೆ. ನಾನು ಯಾರ ಮದುವೆ ಸಮಾರಂಭಗಳಿಗೆ ಹೋಗುವುದಿಲ್ಲ. ನನ್ನ ಮದುವೆಗೂ ಯಾರೂ ಬರುವುದಿಲ್ಲ ಎಂದು ನನ್ನ ಅಮ್ಮ ಹೇಳುತ್ತಾರೆ. ಆಗ ನಾನು ಅವರಿಗೆ ಒಳ್ಳೆಯದು ಎಂದು ಹೇಳುತ್ತಿರುತ್ತೇನೆ ಎಂದಿದ್ದಾರೆ.

ನನಗೆ ಉತ್ತರಕರ್ನಾಟಕ ಬದನೆಕಾಯಿ ರೊಟ್ಟಿ ಎಂದರೆ ತುಂಬಾ ಇಷ್ಟ. ಐಸ್ ಕ್ರೀಮ್ ತುಂಬಾ ಇಷ್ಟ ಪಟ್ಟು ತಿನ್ನುತ್ತೇನೆ. ನಾನು ಸಸ್ಯಹಾರಿ ಮಾಂಸವನ್ನು ಸೇವಿಸುವುದಿಲ್ಲ. ಮೊಟ್ಟೆಯಿಂದ ಮಾಡಿರಿವ ಕೇಕ್, ಮಶ್ರೂಮ್ ತಿನ್ನುತ್ತೇನೆ ಎಂದು ಹೇಳುವ ಮೂಲಕವಾಗಿ ತಮ್ಮ ಆಹಾರ ಪದ್ಧತಿಯ ಕುರಿತಾಗಿ ಹೇಳಿಕೊಂಡಿದ್ದಾರೆ.

ನಾನು ಅಮೆರಿಕಾದ ವ್ಯಾಕ್ಸಿನ್‍ಗೆ ಕಾಯುತ್ತಿದ್ದೇನೆ. ವ್ಯಾಕ್ಸಿನ್ ತೆಗೆದುಕೊಂಡಿಲ್ಲ, ಮೊಡೆರ್ನಾಗೆ ಕಾಯುತ್ತಿದ್ದೇನೆ. ಫೈಜರ್ ವ್ಯಾಕ್ಸಿನ್‍ನ್ನು ಮೂರು ಡೋಸ್ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ವ್ಯಾಕ್ಸಿನ್ ವಿಚಾರದಲ್ಲಿ ಸಿಕ್ಕಾಪಟ್ಟೆ ಗೊಂದಲ ಶುರುವಾಗಿದೆ. ಮೊಡೆರ್ನಾಗೆ ಸದ್ಯ ಅನುಮತಿ ಸಿಕ್ಕಿದೆ ನನಗೆ ಅದು ಖುಷಿಯ ವಿಚಾರವಾಗಿದೆ ಎಂದಿದ್ದಾರೆ.

ಇನ್‍ಸ್ಟಾಗ್ರಾಮ್ ಲೈವ್ ಬರುವೆ ಎಂದು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಂತೆ ಅಭಿಮಾನಿಗಳು ಸಿಕ್ಕಾಪಟ್ಟೆ ಕುತೂಹಲದಿಂದಿದ್ದರು. ರಮ್ಯಾ ಇನ್‍ಸ್ಟಾಗ್ರಾಮ್ ಲೈವ್ ಬರೋದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಹಲವು ವರ್ಷಗಳಿಂದ ಚಿತ್ರರಂಗ, ಅಭಿಮಾನಿಗಳು, ರಾಜಕೀಯದಿಂದ ದೂರವಾಗಿರುವ ರಮ್ಯಾ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಲೈವ್ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *