ನಮ್ಮ ಮಾದರಿಯನ್ನ ಕೇಂದ್ರ ಹಾಗೂ ಅನೇಕ ರಾಜ್ಯಗಳು ಅನುಸರಿಸಿವೆ – ಸಿಎಂ ಬಿಎಸ್‍ವೈ

– ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಕ್ರಮ
– ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣ

ಬೆಂಗಳೂರು: ಅಭಿವೃದ್ಧಿಯೇ ಆಡಳಿತ ಮಂತ್ರ. ಕಲ್ಯಾಣ ರಾಜ್ಯ ಕಟ್ಟೋದು ನಮ್ಮ ಗುರಿಯಾಗಿದೆ. ಕೊರೊನಾ ವಿರುದ್ಧ ನಮ್ಮ ಹೋರಾಟ. ಕೊರೊನಾ ಜಾಗತಿಕ ಪಿಡುಗು ನಮಗೆ ಕಾಡುತ್ತಿದೆ. ಕೇವಲ ಆರೋಗ್ಯ ಕ್ಷೇತ್ರ ಮಾತ್ರವಲ್ಲದೆ ಎಲ್ಲ ಕ್ಷೇತ್ರವನ್ನು ಬಾಧಿಸಿದ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೊರೊನಾ ಮಧ್ಯೆ ಎಸ್‍ಎಸ್‍ಎಲ್‍ಸಿ ಯಶಸ್ವಿಯಾಗಿ ನಡೆಸಲಾಗಿದೆ. ನಮ್ಮ ಮಾದರಿಯನ್ನ ಕೇಂದ್ರ ಹಾಗೂ ಅನೇಕ ರಾಜ್ಯಗಳು ಅನುಸರಿಸಿವೆ. ಸಿಇಟಿ ಪರೀಕ್ಷೆಯಲ್ಲಿ ಕೊರೊನಾ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ ನೀಡಲು ಅಗತ್ಯ ಕ್ರಮವಹಿಸಿದೆ. ಜೊತೆಗೆ ವಿದ್ಯಾಗಮ ವಿಶೇಷ ಕಾರ್ಯಕ್ರಮ ಜಾರಿ ಮಾಡಿದೆ ಎಂದರು.

ಲಾಕ್‍ಡೌನ್ ಮುಕ್ತಾಯದಿಂದ ಜನರ ಜೀವನ ಇಂದು ಚೇತರಿಸಿಕೊಂಡಿದೆ. ನಾನು ಕೊರೊನಾ ಪಾಸಿಟಿವ್ ತುತ್ತಾಗಿದ್ದೆ. ಈಗ ಗುಣ ಮುಖನಾಗಿದ್ದೇನೆ. ಕೊರೊನಾದಿಂದ ಯಾರೂ ಆತಂಕ ಆಗೋದು ಬೇಡ. ಜಾಗರೂಕತೆಯಿಂದ ಜೀವನ ನಡೆಸಬೇಕು ಅಷ್ಟೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಅಗತ್ಯ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು.

ಸಚಿವರ ಕಾರ್ಯ ಪಡೆ, ಪರಿಣಿತ ವೈದ್ಯರ ಪಡೆ, ಅಧಿಕಾರಿಗಳ ಕಾರ್ಯ ಪಡೆ ರಚನೆ ಮಾಡಲಾಗಿದೆ. ಅಲ್ಲದೇ ಎಲ್ಲಾ ಜಿಲ್ಲೆಯಲ್ಲಿ ಕೇರ್ ಸೆಂಟರ್ ಸ್ಥಾಪನೆ, ಫೀವರ್ ಕ್ಲೀನಿಕ್ ಸ್ಥಾಪನೆ ಮಾಡಲಾಗಿದೆ. ಕ್ವಾರಂಟೈನ್ ವ್ಯವಸ್ಥೆ ಮಾಡಿದ್ದೇವೆ. ಆಯುಷ್ಮಾನ್ ಭಾರತ್ ಅಡಿ 1.31 ಕೋಟಿ ಜನರಿಗೆ ಕಾರ್ಡ್ ವಿತರಿಸಲಾಗಿದೆ. 1,694 ಕೋಟಿ ವೆಚ್ಚದಲ್ಲಿ 8.5 ಲಕ್ಷ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಕಾರ್ಮಿಕರು, ಕ್ಷೌರಿಕ, ಆಟೋ ಚಾಲಕರು ಸೇರಿದಂತೆ ದುರ್ಬಲ ವರ್ಗದವರಿಗೆ 3,187 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೊರೊನಾ ವಾರಿಯರ್ಸ್ ಮತ್ತು ಸರ್ಕಾರೇತರ ಸಂಸ್ಥೆಗಳು, ಉದ್ಯಮಿಗಳನ್ನ ಸಿಎಂ ನೆನಪಿಸಿಕೊಂಡರು.

ಕಿಸಾನ್ ಸಮ್ಮಾನ್ ಯೋಜನೆಗೆ 6 ಸಾವಿರದ ಜೊತೆ ರಾಜ್ಯ ಸರ್ಕಾರ 4 ಸಾವಿರ ನೀಡುತ್ತಿದೆ. ಮೊದಲ ಕಂತು 2 ಸಾವಿರ ಈಗಾಗಲೇ ಬಿಡುಗಡೆ ಮಾಡಿದೆ. 50 ಲಕ್ಷ ರೈತರಿಗೆ ಹಣ ತಲುಪಿದೆ. ಇನ್ನೂ 10 ಲಕ್ಷ ರೈತರಿಗೆ 6,500 ಕೋಟಿ ಬೆಳೆ ಸಾಲ ನೀಡಲಾಗಿದೆ. 2020-21 ನೇ ಸಾಲಿಗೆ 14.50 ಸಾವಿರ ಕೋಟಿ ಬೆಳೆ ಸಾಲ ನೀಡುವ ಗುರಿ ಸರ್ಕಾರ ಹೊಂದಿದೆ. ಹೆಸರುಕಾಳು, ತೊಗರಿ, ಶೆಂಗಾ, ಕಡಲೇಕಾಳು, ಕೊಬ್ಬರಿಗೆ ಸೇರಿದಂತೆ ಹಲವು ಬೆಳೆಗೆ 3,175 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಕ್ರಮವಹಿಸಲಾಗಿದೆ. ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ವಿವಿಧ ಕ್ರಮ ತೆಗೆದುಕೊಂಡು ಅಪರಾಧ ನಿಯಂತ್ರಣ ಮಾಡಲಾಗಿದೆ. ಸೈಬರ್ ಅಪರಾಧ ತಡೆಗೆ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಕಾನೂನು ವ್ಯವಸ್ಥೆಯ ಬಗ್ಗೆ ಮಾತನಾಡಿದರು.

ಸಿಎಂ ಯಡಿಯೂರಪ್ಪ ಕೊರೊನಾದಿಂದ ಗುಣಮುಖರಾದ ಬಳಿಕ ಮೊದಲ ಕಾರ್ಯಕ್ರಮ ಇದಾಗಿದ್ದು, ಸಿಎಂಗಾಗಿ ವಿಶೇಷವಾಗಿ ವೇದಿಕೆ ಸಿದ್ಧತೆ ಮಾಡಲಾಗಿತ್ತು. ವೇದಿಕೆಗೆ ಸೋಂಕು ತಡೆ ಪರದೆ(ಫೇಸ್ ಶೀಲ್ಡ್ ಪರದೆ) ಅಳವಡಿಕೆ ಮಾಡಲಾಗಿತ್ತು. ಸಿಎಂ ಆಗಮನದಿಂದ ಧ್ವಜಾರೋಹಣ ಮಾಡೋವರೆಗೂ ಪರದೆ ಅಳವಡಿಕೆ ಮಾಡಲಾಗಿತ್ತು. ಅಲ್ಲದೇ ವೇದಿಕೆ ಮೇಲೆ ಮೂವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ಪ್ರತ್ಯೇಕ ಆಸನ ವ್ಯವಸ್ಥೆ ಹಾಗೂ ಪ್ರತಿ ಆಸನಕ್ಕೆ ಫೇಸ್‍ಶೀಲ್ಡ್ ಪರದೆಯನ್ನು ಅಳವಡಿಕೆ ಮಾಡಲಾಗಿತ್ತು.

ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತದೆ ಎಂದು ಸಿಎಂ ಘೋಷಣೆ ಮಾಡಿದರು.

Comments

Leave a Reply

Your email address will not be published. Required fields are marked *