ನಮ್ಮಲ್ಲಿ ಪರ, ವಿರೋಧಿ ಬಣಗಳಿಲ್ಲ, ಸಂಪುಟ ರಚನೆ ವೇಳೆ ಅಸಮಾಧಾನ ಸಹಜ- ನಳಿನ್

ಬೆಂಗಳೂರು: ನಮ್ಮಲ್ಲಿ ಯಾವುದೇ ಪರ, ವಿರೋಧ ಬಣಗಳಿಲ್ಲ. ಸಚಿವ ಸಂಪುಟ ರಚನೆ ವೇಳೆ ಈ ರೀತಿಯ ಅಸಮಾಧಾನಗಳು ಸಹಜ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಗದರ್ಶನ, ಸಿಎಂ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ಹೊಸದಾಗಿ ಸಚಿವ ಸಂಪುಟ ರಚನೆ ಮಾಡಲಾಗಿದೆ. ಪ್ರಾದೇಶಿಕ ಮತ್ತು ಭೋಗೋಳಿಕ ಅಧಾರದ ಮೇಲೆ ಸ್ಥಾನಗಳನ್ನು ನೀಡಲಾಗಿದೆ. ಸಚಿವ ಸ್ಥಾನ ವಂಚಿತರು ಯಾರೂ ಪಕ್ಷ ಬಿಡುವುದಿಲ್ಲ. ಯಾವುದೇ ಸರ್ಕಾರ ಹೊಸದಾಗಿ ಸಚಿವ ಸಂಪುಟ ರಚನೆ ಮಾಡಿದ ವೇಳೆ ಈ ರೀತಿ ಅಸಮಾಧನಗಳು ಆಗೋದು ಸಹಜ ಎಂದರು.

ಕೆಲ ಹಿರಿಯರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ಮುಂದಿನ ಚುನಾವಣೆಗೆ ಅವರ ಅವಶ್ಯಕತೆ ಇರುವ ದೃಷ್ಟಿಯಿಂದ ಕೆಲವರನ್ನು ಕೈಬಿಡಲಾಗಿದೆ. ಯಾವುದೇ ಬಣ ರಾಜಕೀಯ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಚಿವ ಸಂಪುಟ ರಚನೆ ಕಸರತ್ತು ಕೊನೆಗೂ ಮುಗಿದಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಸಿಎಂ ಬಸರಾಜ ಬೊಮ್ಮಯಿ ಕಸರತ್ತು ನಡೆಸಿದ್ದರು. ಪಟ್ಟಿ ಬಿಡುಗಡೆಯ ನಂತರ ಕೆಲವರು ಖುಷಿಪಟ್ಟರೆ, ಮತ್ತಷ್ಟು ಜನ ತೀವ್ರ ಅಸಮಾಧನ ವ್ಯಕ್ತಪಡಿಸಿದರು. ಪ್ರಮುಖವಾಗಿ ಶಾಸಕ ರಾಜೂಗೌಡ, ರೇಣುಕಾಚಾರ್ಯ, ಸೇರಿದಂತೆ ಕೆಲವರು ತಮ್ಮ ಅಸಮಾಧನ ಹೊರ ಹಾಕಿದರು.

Comments

Leave a Reply

Your email address will not be published. Required fields are marked *