ನಮಗೆ ಸಿಡಿ ಅಂದ್ರೆ ಏನು ಅಂತ ಗೊತ್ತಿಲ್ಲ: ಹೆಚ್.ಡಿ ರೇವಣ್ಣ

ಬೆಂಗಳೂರು: ನಮಗೆ ಸಿಡಿ ಅಂದ್ರೆ ಏನು ಅಂತ ಗೊತ್ತಿಲ್ಲ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಮಾಜಿ ಸಚಿವರ ಸಿಡಿ ವಿಚಾರವೇ ಚರ್ಚೆಯಾಗುತ್ತಿದೆ. ಈ ಸಂಬಂಧ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ರೇವಣ್ಣ ಅವರು ನಮಗೆ ಸಿಡಿ ಬಗ್ಗೆ ಗೊತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಾಗಿದ್ದು ನಮ್ಮನ್ನು ಯಾರು ಕೇಳುತ್ತಾರೆ. ಅವರ ಮೇಲೆ ಇವರು ಹೇಳ್ತಾರೆ, ಇವರ ಮೇಲೆ ಅವರು ಹೇಳ್ತಾರೆ. ಇವೆಲ್ಲವನ್ನು ಜನ ನೋಡುತ್ತಿದ್ದಾರೆ. ನಾವೇನು ಹೇಳೋಣ ಎಂದರು.

ನಿನ್ನೆ ಸದನದಲ್ಲಿ ಸಿಡಿ ಪ್ರದರ್ಶಿಸಿದ ವಿಚಾರದ ಕುರಿತು ಮಾತನಾಡಿದ ರೇವಣ್ಣ, ಒಬ್ಬ ಅಧಿಕಾರಿ ಪರಿಶಿಷ್ಟ ಜಾತಿ ಹುಡುಗನನ್ನ ಗುಂಡಿಕ್ಕಿ ಕೊಲ್ಲೋದಾಗಿ ಹೇಳಿದ್ದು, ಇನ್ನೊಂದು ಶಿವಲಿಂಗೇ ಗೌಡರನ್ನ ಅವಹೇಳನಕಾರಿಯಾಗಿ ಮಾತನಾಡಿರುವ ಸಿಡಿಯನ್ನು ಕೊಟ್ಟು ಅದನ್ನ ಸ್ಪೀಕರ್ ಗಮನಕ್ಕೆ ತಂದಿದ್ದೇವೆ. ಅವರು ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಎಸ್.ಟಿ.ಸೋಮಶೇಖರ್, ನಮ್ಮ ಜೊತೆ ಹಲವರು ಕೋರ್ಟಿಗೆ ಬರಲು ಸಿದ್ಧರಿದ್ರು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಹಿಂದೆ ಸರಿದ್ರು. ನಾನು 20 ವರ್ಷ ಕಾಂಗ್ರೆಸ್ಸಿನಲ್ಲಿದ್ದು ಬಂದಿದ್ದೇನೆ. ಇವರ ಅನೈತಿಕತೆ ಏನು ಅನ್ನೋದು ರಾಜ್ಯಕ್ಕೂ ಮತ್ತು ನನಗೂ ಗೊತ್ತು. ಅಸೆಂಬ್ಲಿಯಲ್ಲಿ ನಮ್ಮ ವಿರುದ್ಧ ಎಷ್ಟು ಮಾತನಾಡಿದ್ರೂ ಗೊತ್ತಿಲ್ವಾ? ಆದ್ರೆ ಅನೈತಿಕ ರಾಜಕಾರಣಕ್ಕೆ ಮುಂದಾಗಿದ್ದಕ್ಕೆ ಕೋರ್ಟ್ ರಕ್ಷಣೆ ಪಡೆದಿದ್ದೇವೆ. ನೂರಕ್ಕೆ ನೂರರಷ್ಟು ಈ ಮನೆಹಾಳು ಕೆಲಸವನ್ನ ಕಾಂಗ್ರೆಸ್ಸಿನವರೇ ಮಾಡಿದ್ದಾರೆ ಎಂದು ಆರೋಪಿಸಿದ್ದರು.

Comments

Leave a Reply

Your email address will not be published. Required fields are marked *