ನನ್ನ ಹುಡುಗ ರೊಮ್ಯಾಂಟಿಕ್ ಅಲ್ಲಾ ಎಂದ ಶುಭಾ

ಬಿಗ್‍ಬಾಸ್ ಮನೆಯ ವಾರಾಂತ್ಯದ ಕಟ್ಟೆ ಪಂಚಾಯತಿಯಲ್ಲಿ ಈರುಳ್ಳಿ ಬೆಳ್ಳುಳ್ಳಿ ಕಥೆ ಮೂಲಕವಾಗಿ ಆರಂಭವಾಗಿದೆ. ಈ ವೇಳೆ ಸುದೀಪ್ ಶುಭಾ ಪೂಂಜಾ ಅವರ ಹುಡುಗ ಅವರ ಕನಸಿನಲ್ಲಿ ಬಂದಿರುವ ವಿಚಾರವನ್ನು ಕೇಳಿದ್ದಾರೆ.

ನಿಮ್ಮ ಹುಡುಗ ಕನಸಲ್ಲಿ ಬಂದು ಏನು ಮಾಡಿದ್ದಾರೆ ಎಂದು ಸುದೀಪ್ ಅವರು ಕೇಳಿದ್ದಾರೆ. ಈ ವೇಳೆ ಶುಭಾ ನನ್ನ ಹುಡಗ ಸಣ್ಣ ಆಗಿ ಕಣ್ಣ ತುಂಬಾ ಡಾರ್ಕ್ ಸರ್ಕಲ್ ಆಗಿದೆ ಆಗ ನಾನು ಅನ್ಕೊಂಡೆ ಅವನು ನನ್ನ ಮಿಸ್ ಮಾಡಿಕೊಳ್ಳುತ್ತಿದ್ದಾನೆ ಅಂತಾ ಹೀಗೆ ನಾಲ್ಕು ದಿನ ಕನಸಲ್ಲಿ ಬಂದಿದ್ದಾನೆ. ಅವನು ಸ್ವಲ್ಪ ರೊಮ್ಯಾಂಟಿಕ್ ಅಲ್ಲ ಎಂದು ಮುದ್ದಮುದ್ದಾಗಿ ಹೇಳಿದ್ದಾರೆ.

ನನ್ನ ಹುಡುಗನನ್ನು ಎಲ್ಲಾದರೂ ನೋಡಿದ್ರಾ?

ನನ್ನ ಹುಡುಗ ನನ್ನನ್ನು ಮಿಸ್ ಮಾಡಿಕೊಳ್ಳುತ್ತಾನೆ ಎಂದು ಹೇಳಿದ್ದಾರೆ. ಆಗ ಸುದೀಪ್ ಓ.. ಭ್ರಮೆ ಎಂದು ಹೆಳಿದ್ದಾರೆ. ಹೊರಗೆ ಏನೇ ನಡೆದರು ನಿಮಗೆ ಹೇಳಲ್ಲ ನಿಮ್ಮ ನಂಬಿಕೆ ಹುಸಿ ಮಾಡಬಾರದು ಎಂದು ಸುದೀಪ್ ಶುಭ ಪೂಂಜಾ ಅವರಿಗೆ ತಮಾಷೆ ಮಾಡಿದ್ದಾರೆ. ಈ ವೇಳೆ ಶುಭಾ ಅವನನ್ನ ಎಲ್ಲಾದರೂ ನೋಡಿದ್ರಾ? ಯಾವುದಾದರೂ ಹುಡುಗಿನ ಬೈಕ್, ಕಾರ್‍ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ರಾ? ಎಂದು ಮುಗ್ಧತೆಯಿಂದ ಕೇಳಿದ್ದಾರೆ. ಈ ವೇಳೆ ಸುದೀಪ್ ಅವರದ್ದೇ ಶೈಲಿಯಲ್ಲಿ ಎಲ್ಲಾದರೂ ನೋಡೋದು ಬಿಡಿ ಏನ್ ನೋಡಿದೆ ಅಂತಾ ಕೇಳಿ ಎಂದು ಹೇಳಿ ತಮಾಷೆ ಮಾಡಿದ್ದಾರೆ.

ಎಲ್ಲಾದ್ರೂ ನೋಡಿದ್ರೇ ಅವರಿಗೆ ಬೈದು ಬಿಡಿ ಎಂದು ಶುಭಾ ಹೇಳಿದ್ದಾರೆ. ಈ ವೇಳೆ ಸುದೀಪ್ ನಾನು ಹಾಗೇ ಹೇಳುವುದಿಲ್ಲ ಎನೋ ಮಾಡುತ್ತಿದ್ದೀರಾ ಒಳ್ಳೆದು ಆಗ್ಲಿ ಎಂದು ಪ್ರೋತ್ಸಾಹ ಮಾಡುತ್ತೇನೆ. ನಾನು ಇರುವುದನ್ನು ಇದ್ದಾಗೆ ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಎಂದು ಕೇಳಿ ಶುಭಾ ಅವರಿಗೆ ಇನ್ನಷ್ಟು ತಮಾಷೆ ಮಾಡಿದ್ದಾರೆ.

ಒಟ್ಟಾರೆಯಾಗಿ ಶುಭ ಅವರು ಒಂಟಿ ಮನೆಯಲ್ಲಿ ಅವರ ಹುಡಗನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದು ಕಿಚ್ಚನ ಕಟ್ಟೆ ಪಂಚಾಯತ್ತಿಯಲ್ಲಿ ತಿಳಿದು ಬಂದಿದೆ. ಶುಭ ತನ್ನ ಮುಗ್ದತೆಯಿಂದಲೇ ಕಿಚ್ಚಾ ಅವರ ಬಳಿ ತಮ್ಮ ಹುಡುಗನ ಕುರಿತಾಗಿ ವಿಚಾರಿಸಿದ್ದಾರೆ. ಆದರೆ ಶುಭ ಅವರು ಹುಡುಗನ ಕುರಿತಾಗಿ ವಿಚಾರಣೆ ಮಾಡುತ್ತಿರುವುದನ್ನು ಕಂಡ ಮನೆ ಸದಸ್ಯರು ನಕ್ಕಿದ್ದಾರೆ. ಸುಪರ್ ಸಂಡೆ ವಿತ್ ಸುದೀಪ್‍ನಲ್ಲಿ ಶುಭ ಅವರ ಹುಡುಗನ ವಿಚಾರ ಹೈಲೆಟ್ ಆಗಿ ಕಂಡು ಬಂದಿದೆ.

Comments

Leave a Reply

Your email address will not be published. Required fields are marked *