ನನ್ನ ವೀಡಿಯೋದ ಮಾತನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ: ರಂಜನಿ ರಾಘವನ್

ಬೆಂಗಳೂರು: ನನ್ನ ವೀಡಿಯೋದ ಮಾತನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಕನ್ನಡತಿ ಸಿರಿಯಲ್ ಖ್ಯಾತಿಯ ನಟಿ ರಂಜನಿ ರಾಘವನ್ ಹೇಳಿದ್ದಾರೆ.

ಭಾನುವಾರ ಶೂಟಿಂಗ್ ಮುಗಿದ ನಂತರ ನಟಿ ರಂಜನಿ ರಾಘವನ್, ನಟ ಕಿರಣ್ ರಾಜ್ ಹಾಗೂ ಸಾರಾ ಅಣ್ಣಯ್ಯ ಗೂಡ್ಸ್ ಗಾಡಿಯೊಂದನ್ನು ಹತ್ತಿದ್ದರು. ಈ ವೇಳೆ ರಂಜನಿ ರಾಘವನ್ ಕತ್ತಲಿನಲ್ಲಿ ನೋಡುವವರಿಗೆ ನಾನು ಮೇಲ್ನೋಟಕ್ಕೆ ಹೊರಗಡೆ ನಗುತ್ತಿದ್ದೇನೆ ಆದರೆ ಒಳಗಡೆ ಭಯದಿಂದ ಒದ್ದಾಡುತ್ತಿದ್ದೇನೆ ಎಂದು ಹೇಳುತ್ತಾ, ಇದು ನೈಜ ಘಟನೆ ಆಧಾರಿತ ಥ್ರಿಲ್ಲರ್ ಕತೆ! ಇದರಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕವಲ್ಲ, ನಮ್ಮ ಅನುಭವ.. ಎಂದು ಥ್ರೀಲಿಂಗ್ ಕಥೆ ಹೇಳಿದ್ದರು. ಸದ್ಯ ಅದರ ಮುಂದುವರೆದ ಭಾಗ-2ನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ವೀಡಿಯೋದ ಮಾತನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ. ಲೈಟ್ ನೋಡಿ ಧೈರ್ಯಬರುತ್ತಿದೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ. ಜೊತೆಗೆ ಕ್ಯಾಪ್ಷನ್‍ನಲ್ಲಿ, ಕತ್ತಲೆಯಲ್ಲಿ ಸುಮಾರು ಹದಿನೈದು ನಿಮಿಷ ಎದೆಬಡಿತ ಕಿವಿಗೆ ಕೇಳುವಷ್ಟು ಟೆನ್ಶನ್ ನಲ್ಲಿ ಹೋಗ್ತಿರುವಾಗ ಮಧ್ಯೆ ಒಂದು ಕಡೆ ಗಾಡಿ ಸಡನ್ ಆಗಿ ನಿಂತಿತು. “ಬರ್ತೀನ್ ಸರ್ ಡ್ರೈವರ್ ಗೆ 200 ರುಪಾಯಿ ಕೊಟ್ಬಿಡಿ” ಆ ಗಾಡಿಗೆ ಸಂಬಂಧಪಟ್ಟ ಕನ್ನಡದೋನು, ಅದೇ.. ಕುಡುಕ, ಹೇಳಿ ಹೊರಟುಹೋದ. ಏನು ಆಗಲ್ಲ ಅನ್ನಿಸಿದ್ದು ಎಷ್ಟು ಸತ್ಯಾನೋ, ಅಕಸ್ಮಾತ್ ಆದ್ರೆ ಏನ್ ಮಾಡೋಕೂ ಪ್ರಿಪೇರ್ ಇರಲಿಲ್ಲ ಅನ್ನೋದೂ ಅಷ್ಟೇ ಸತ್ಯ!

ಮತ್ತೆ ಇನ್ನೊಂದು ಹತ್ತು ನಿಮಿಷ ಅದೇ ದಾರೀಲಿ ಹೋಗ್ತಿರುವಾಗ ಸ್ಟ್ರೀಟ್ ಲೈಟ್‍ಗಳು ಕಾಣಿಸಿ, ನನ್ನೊಳಗೂ ಲೈಟ್ ಆನ್ ಆಯ್ತು. ನಿಜವಾಗಿಯೂ, ಆ ಲಗೇಜ್ ಆಟೋ ನಮ್ಮ ಸೆಟ್ ಗೆ ದಿನಾ ಪ್ರಾಪರ್ಟಿ ಸಾಗಿಸೋ ಗಾಡಿ ಆಗಿತ್ತಂತೆ, ಆ ಕನ್ನಡದವನು ನಮ್ಮ ಸೆಟ್ ಹುಡುಗರಿಗೆ ಪರಿಚಯ, ನಾವಿಲ್ಲಿ ಶೂಟಿಂಗ್ ಮಾಡುವ ಅಷ್ಟು ದಿನ ಅವರಿಗೆ ನಮ್ಮವರ ಜೊತೆ ವ್ಯವಹಾರ ಇರುತ್ತೆ, ಹಾಗೆಲ್ಲ ನಮಗೆ ಏನೂ ತೊಂದರೆ ಮಾಡುವುದಕ್ಕೆ ಆಗುವುದಿಲ್ಲ ಅಂತ ಕಿರಣ್ ಆಮೇಲೆ ಹೇಳಿದ್ರು. ಆದ್ರೂ ಆ ಒಂಟಿ ರೋಡ್ ನಲ್ಲಿ ಹಾಗೆ ಹೋಗಿದ್ದರ ಭಯ ಮಾತ್ರ ಕೇಳ್ಬೇಡಿ. ಒಟ್ನಲ್ಲಿ ನಾವು ನಮ್ಮ ಹೋಟೆಲ್ ಸುರಕ್ಷಿತವಾಗಿ ತಲುಪಿದ್ವಿ. ಇದನ್ನು ಓದಿ: ಶೂಟಿಂಗ್ ಮುಗಿಸಿ ಬರ್ತಿದ್ದ ರಂಜನಿ ರಾಘವನ್‍ಗೆ ರಾತ್ರಿ ಏನಾಯ್ತಂತೆ ಗೊತ್ತಾ?

ಯುಫ್..! ದುಡುಕಿ ಏನನ್ನೂ ಮಾಡಬಾರದು, ರಿಸ್ಕ್ ತೆಗೆದುಕೊಂಡರೂ ಲೆಕ್ಕಚಾರ ಹಾಕಿ ರಿಸ್ಕ್ ತಗೊಬೇಕು ಅನ್ನೋದು ಈ ಕತೆಯ ನೀತಿ ಪಾಠ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *