ನನ್ನ ಮೇಲೆ ಹಲ್ಲೆ ನಡೆದಿಲ್ಲ: ಅಜಯ್ ದೇವಗನ್ ಸ್ಪಷ್ಟನೆ

ಮುಂಬೈ: ನನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ನಟ ಅಜಯ್ ದೇವಗನ್ ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಜಯ್ ದೇವಗನ್ ಹೋಲಿಕೆಯುಳ್ಳಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆದಿರುವ ವೀಡಿಯೋ ವೈರಲ್ ಆಗಿದೆ.

ಅಜಯ್ ಸ್ಪಷ್ಟನೆ: ನನ್ನ ಹಾಗೆ ಇರೋ ವ್ಯಕ್ತಿ ಕಷ್ಟದಲ್ಲಿ ಸಿಲುಕಿರಬಹುದು. ಈ ವೀಡಿಯೋಗೆ ಸಂಬಂಧಿಸಿದಂತೆ ಹಲವರು ನನ್ನನ್ನು ಸಂಪರ್ಕಿಸಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಇನ್ನು ಕೆಲವರು ಘಟನೆ ಬಗ್ಗೆ ಸ್ಪಷ್ಟನೆ ಕೇಳುತ್ತಿದ್ದಾರೆ. ನಾನು ಯಾವುದೇ ಪ್ರವಾಸದಲ್ಲಿಲ್ಲ. ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ನಿರಾಧಾರ. ನಾನು ಚೆನ್ನಾಗಿದ್ದೇನೆ. ಹೋಳಿ ಹಬ್ಬದ ಶುಭಾಶಗಳು ಎಂದು ಬರೆದು ಸ್ಪಷ್ಟನೆ ನೀಡಿದ್ದಾರೆ.

ಅಜಯ್ ದೇವಗನ್ ಮೇಲೆ ಹಲ್ಲೆ ನಡೆದಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದೆ. ಇದೆಲ್ಲ ಅಪ್ಪಟ ಸುಳ್ಳು. ಈ ಸಂಬಂಧ ನ್ಯೂಸ್ ಏಜೆನ್ಸಿ, ಪತ್ರಕರ್ತರಿಗೂ ಮಾಹಿತಿ ನೀಡಲಾಗಿದೆ. ತಮ್ಮ ತಂಡದೊಂದಿಗೆ ಮುಂಬೈನಲ್ಲಿ ‘ಮೈದಾನ್’, ‘ಮೆಡೆ’ ಮತ್ತು ‘ಗಂಗೂಬಾಯಿ ಕಾಠಿಯಾಬಾಡಿ’ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ 14 ತಿಂಗಳಿನಿಂದ ದೆಹಲಿಗೆ ಪ್ರಯಾಣ ಬೆಳೆಸಿಲ್ಲ ಎಂದು ಅಜಯ್ ದೇವಗನ್ ಆಪ್ತ ಹೇಳಿದ್ದಾರೆ. ಇದನ್ನೂ ಓದಿ: ಅಜಯ್ ದೇವಗನ್‍ರನ್ನು ಭೇಟಿಯಾದ ಕಿಚ್ಚ – ಪತಿ ಕಾಲೆಳೆದ ಪ್ರಿಯಾ

2020 ಜನವರಿಯಲ್ಲಿ ಕೊನೆಯ ಬಾರಿ ಅಜಯ್ ದೇವಗನ್ ದೆಹಲಿಗೆ ಭೇಟಿ ನೀಡಿದ್ದರು. ಅದು ತಾನ್ಹಾಜಿ ಸಿನಿಮಾ ಪ್ರಮೋಷನ್ ಗಾಗಿ ಚಿತ್ರತಂಡದ ಜೊತೆ. ವೈರಲ್ ಆಗಿರುವ ವೀಡಿಯೋ ನಕಲಿ. ಅಲ್ಲಿರುವ ವ್ಯಕ್ತಿಯೂ ಅಜಯ್ ಅವರಿಗೂ ಹೋಲಿಕೆ ಇರಬಹುದು. ಸುದ್ದಿ ಪ್ರಸಾರಕ್ಕೂ ಮುನ್ನ ಸ್ಪಷ್ಟನೆ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಜಯ್ ದೇವಗನ್ ಕಾರು ತಡೆದು ಯುವಕ ರಂಪಾಟ – ವೀಡಿಯೋ ವೈರಲ್

Comments

Leave a Reply

Your email address will not be published. Required fields are marked *