ನನ್ನ ದೇಶ ಕಷ್ಟದಲ್ಲಿದೆ, ವ್ಯಾಕ್ಸಿನ್‍ ಕೊಡಿ- ಭಾರತಕ್ಕಾಗಿ ಮಿಡಿದ ಪ್ರಿಯಾಂಕಾ

ವಾಷಿಂಗ್ಟನ್: ಕೊರೊನಾ 2ನೇ ಅಲೆಗೆ ಭಾರತ ತತ್ತರಿಸಿತ್ತಿದೆ. ಭಾರತಕ್ಕೆ ಆಸ್ಟ್ರಾಜೆನೆಕಾ ಲಸಿಕೆಯನ್ನು ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಧ್ವನಿ ಎತ್ತಿದ್ದಾರೆ.

ನನ್ನ ಹೃದಯ ಛಿದ್ರವಾಗುತ್ತಿದೆ. ಕೊರೊನಾದಿಂದ ಭಾರತ ಬಳಲುತ್ತಿದೆ. ಆದರೆ ಈ ಸಂದರ್ಭದಲ್ಲಿ ಅಮೆರಿಕ ತನಗೆ ಅವಶ್ಯಕತೆ ಇರುವುದಕ್ಕಿಂತಲೂ 55 ಕೋಟಿ ಹೆಚ್ಚುವರಿ ವ್ಯಾಕ್ಸಿನ್‍ಗಳನ್ನು ಪಡೆದುಕೊಂಡಿದೆ. ಜಗತ್ತಿನಾದ್ಯಂತ ಆಸ್ಟ್ರಾಜೆನೆಕಾವನ್ನು ಹಂಚಿಕೆ ಮಾಡಿದ್ದಕ್ಕೆ ಧನ್ಯವಾದಗಳು. ಆದರೆ ನನ್ನ ದೇಶ ಭಾರತಲ್ಲಿ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ತುರ್ತಾಗಿ ಭಾರತಕ್ಕೆ ವ್ಯಾಕ್ಸಿನ್ ನೀಡುತ್ತೀರಾ? ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಪ್ರಿಯಾಂಕಾ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಪ್ರಿಯಾಂಕಾ ಅವರ ಈ ಟ್ವೀಟ್‍ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಲಾಕ್‍ಡೌನ್ ಸಮಯದಲ್ಲಿ ಸ್ಟಾರ್ ಸೆಲೆಬ್ರಿಟಿಗಳು ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಪ್ರಿಯಾಂಕಾ ಪತಿಯೊಂದಿಗೆ ಅಮೆರಿಕಾದಲ್ಲಿ ವಾಸವಾಗಿದ್ದರೂ ಭಾರತದ ಮೇಲಿರುವ ಪ್ರೀತಿ ಕಡಿಮೆಯಾಗಿಲ್ಲ ಎನ್ನುವುದನ್ನು ತೋರಿಸುತ್ತದೆ.

ಭಾರತದ ಪರವಾಗಿ ಮಾತನಾಡಿ ಹಲವರ ಮೆಚ್ಚುಗೆ, ಪ್ರಶಂಸೆಗೆ ಪ್ರಿಯಾಂಕಾ ಅವರು  ಪಾತ್ರರಾಗಿದ್ದಾರೆ.

Comments

Leave a Reply

Your email address will not be published. Required fields are marked *