ನನ್ನ ಜೊತೆ ಮಗನ ಪತ್ನಿ ಚೆನ್ನಾಗಿದ್ರೆ 20 ಕ್ಯಾರೆಟ್ ವಜ್ರ ಕೊಡ್ತೀನಿ: ಶಿಲ್ಪಾ ಶೆಟ್ಟಿ

– ಷರತ್ತು ಹಾಕಿ ವಜ್ರ ನೀಡಲಿರುವ ಮಂಗಳೂರು ಸುಂದ್ರಿ

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಭಾವಿ ಸೊಸೆಗೆ 20 ಕ್ಯಾರೆಟ್ ವಜ್ರವನ್ನು ನೀಡುವ ಯೋಜನೆ ಹಾಕಿದ್ದಾರೆ.

ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಮಂಗಳೂರು ಸುಂದರಿ, 20 ಕ್ಯಾರೆಟ್ ವಜ್ರವನ್ನು ನನ್ನ ಮಗ ವಿಯಾನ್ ರಾಜ್ ಕುಂದ್ರಾ ಹೆಂಡತಿಗೆ ಉಡುಗೊರೆಯಾಗಿ ನೀಡುತ್ತೇನೆ. ಆದರೆ ಒಂದು ಷರತ್ತಿನ ಮೇರೆಗೆ ಎಂದು ಹೇಳಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಸಂಗ್ರಹದಲ್ಲಿ ಸಾಕಷ್ಟು ಉತ್ತಮ ಆಭರಣಗಳಿವೆ. ಸೂಪರ್‍ಫಿಟ್ ಮಮ್ಮಿ ತನ್ನ ಮಗ ವಿಯಾನ್ ರಾಜ್ ಕುಂದ್ರಾ ಅವರ ಭಾವಿ ಪತ್ನಿ ಮತ್ತು ಅವರ ಭಾವಿ ಅಳಿಯ ಬಗ್ಗೆ ಸಂತೋಷದಿಂದ ಮಾತನಾಡಿದ್ದಾರೆ. ಸೊಸೆ ನನ್ನ ಜೊತೆ ಒಳ್ಳೆಯ ರೀತಿಯಲ್ಲಿ ನಡೆದುಕೊಂಡರೆ ಆಕೆ ನನ್ನ ಬಳಿಯಿಂದ 20 ಕ್ಯಾರೆಟ್ ವಜ್ರವನ್ನು ಪಡೆಯಬಹುದು ಎಂದು ನಾನು ಯಾವಾಗಲೂ ನನ್ನ ಮಗನಿಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ನೀವು ನನ್ನ ಇನ್‍ಸ್ಟಾಗ್ರಾಮ್ ನೋಡಿದರೆ ಅರ್ಥವಾಗುತ್ತದೆ ನಾನು ನನ್ನ ಮೊದಲು ನನ್ನ ತಾಯಿ ಕುರಿತಾಗಿ ಹೇಳುತ್ತೇನೆ. ಏಕೆಂದರೆ ಅವರು ಯಾವಾಗಲೂ ನನ್ನ ಮೊದಲ ಆದ್ಯತೆಯಾಗಿದ್ದಾರೆ. ಆಭರಣಗಳನ್ನು ಖರೀದಿಸುತ್ತಾರೆ. ಅವುಗಳು ನಮಗೆ ಮುಂದೊಂದು ದಿನ ಅಮೂಲ್ಯ ಆಸ್ತಿಗಳು ಆಗಬಹುದು ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

2009 ರಲ್ಲಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿರುವ ಶಿಲ್ಪಾ ಶೆಟ್ಟಿಗೆ ವಯಾನ್ ಮತ್ತು ಮಗಳು ಸಮಿಷಾ ಎಂಬ ಮಕ್ಕಳಿದ್ದಾರೆ. ಪತಿ ರಾಜ್, ಶಿಲ್ಪಾ ಅವರಿಗೆ 5 ಕ್ಯಾರೆಟ್ ವಜ್ರದ ಉಂಗುರ ಹಿಡಿದು ಮದುವೆಯ ಪ್ರಸ್ತಾಪವನ್ನು ಹೇಗೆ ಮಾಡಿದ್ದರು ಎಂಬುದನ್ನು ಈ ಹಿಂದೆ ಶಿಲ್ಪಾ ವಿಡಿಯೋ ಮೂಲಕವಾಗಿ ವಿವರಿಸಿದ್ದರು.

11 ವರ್ಷಗಳ ಹಿಂದೆ ಮದುವೆ ಪ್ರಸ್ತಾಪ ಇಟ್ಟಾಗ ಪ್ಯಾರಿಸ್‍ನ ಲೆ ಗ್ರ್ಯಾಂಡ್ ಹೋಟೆಲ್ ಔತಣಕೂಟವನ್ನು ಏರ್ಪಡಿಸಿರುವುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಎಲ್ಲ ಸ್ನೇಹಿತರ ಸಮ್ಮುಖದಲ್ಲಿ ರಿಂಗ್ ನೊಂದಿಗೆ ನನ್ನನ್ನು ಆಶ್ಚರ್ಯಗೊಳಿಸಿದ್ದರು. ನಾನು ಹೊಟೇಲ್ ಪ್ರವೇಶಿಸಿದಾಗ ಲೈವ್ ಸಂಗೀತಗಾರರು, ಸೆಟ್ಟಿಂಗ್, ಪ್ಯಾರಿಸ್ ಊಫ್!! ಆ ಪ್ರೇಮ ನಿವೇದನೆ ಸಂದರ್ಭ ನನ್ನ ಕನಸಿನಿಂದ ನೇರವಾಗಿ ಹೊರಬಂದಂತೆ ಇತ್ತು. ನೀವು ಅಂದಿನಿಂದ ನನ್ನ ಎಲ್ಲಾ ಕನಸುಗಳನ್ನು ನೆರವೆರಿಸುತ್ತಾ ಬಂದಿದ್ದಿರಾ ಎಂದು ಶಿಲ್ಪಾ ಶೆಟ್ಟಿ ತಮ್ಮ ಮದುವೆಯ ಮೊದಲ ದಿನಗಳನ್ನು ನೆನಪಿಸಿಕೊಂಡು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *