ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

ಪ್ರತಿ ಬಾರಿಯಂತೆ ಈ ಸಲ ಕೂಡ ಮನೆಯ ಸ್ಪರ್ಧಿಗಳನ್ನು ವಿಜಯ ಯಾತ್ರೆ ಹಾಗೂ ನಿಂಗೈತೆ ಇರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಬಿಗ್‍ಬಾಸ್ ಡಿಫರೆಂಟ್ ಟಾಸ್ಕ್ ಅನ್ನು ನೀಡಿದ್ದರು. ಅದರಂತೆ ಮೊದಲ ಟಾಸ್ಕ್‌ನಲ್ಲಿ ಗೆದ್ದ ವಿಜಯಯಾತ್ರೆ ತಂಡದವರು ಓಡಾಡಬೇಕಾದರೆ, ನಿಂಗೈತೆ ತಂಡದ ಇಬ್ಬರು ಸದಸ್ಯರು ಬಾಗಿಲನ್ನು ತೆಗೆಯಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು.

ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಶುಭಾ ಪೂಂಜಾ ಟಾಸ್ಕ್ ಗೆದ್ದ ಖುಷಿಯಲ್ಲಿ ಮಂಜುರನ್ನು ಸಿಕ್ಕಾಪಟ್ಟೆ ಸತಾಯಿಸಿದ್ದರು. ನಂತರ ‘ಹೀಗೂ ಅಂಟೆ’ ಟಾಸ್ಕ್‌ನಲ್ಲಿ ಗೆದ್ದ ಮಂಜು ಶುಭಾ ಪೂಂಜಾ ವಿರುದ್ಧ ರಿವೇಂಜ್ ತೆಗೆದುಕೊಂಡಿದ್ದಾರೆ.

ಹೀಗೂ ಅಂಟೆ ಟಾಸ್ಕ್‌ನಲ್ಲಿ ಸೋತ ವಿಜಯಯಾತ್ರೆ ತಂಡದ ಇಬ್ಬರು ಸದಸ್ಯರು ಬಿಗ್‍ಬಾಸ್ ಮುಂದಿನ ಆದೇಶದವರೆಗೂ ಅಂಬೆ ಕಾಲಿನಲ್ಲಿ ಓಡಾಡಬೇಕು ಎಂದು ತಿಳಿಸಿದ್ದಾರೆ. ಇದನ್ನು ಕೇಳಿ ಮಂಜು, ನನಗೆ ಬಹಳ ಖುಷಿಯಾಗುತ್ತಿದೆ ಅಂತ ಹೇಳಿ, ತಂಡವರೆಲ್ಲರೂ ಶುಭಾ ಪೂಂಜಾ ಹಾಗೂ ಪ್ರಶಾಂತ್‍ರವರನ್ನು ಸೂಚಿಸುತ್ತಾರೆ.

ಬಳಿಕ ಅಂಬೆ ಕಾಲಿನಲ್ಲಿ ಓಡಾಡಲು ಆರಂಭಿಸಿದ ಶುಭಾಗೆ, ಟೈಂ ಒಂದೇ ರೀತಿ ಇರುವುದಿಲ್ಲ, ಯಾವಾಗಲೂ ತಿರುಗುತ್ತಲೇ ಇರುತ್ತದೆ. ಬಿಗ್ ಬಾಸ್ ಈ ಶಿಕ್ಷೆಯನ್ನು ಎರಡು ದಿನ ತೆಗೆಯಲೇ ಬಿಡಿ, ಜಿಂಕೆ ತರ ಎಗರುತ್ತಿದ್ದೆ, ಯಾಕೆ ಕಪ್ಪೆ ತರ ಕುತಿದ್ಯಾ, ನನ್ನ ಎದುರು ಹಾಕ್ಕೊಂಡವರು ಮಂಡಿ ಬಗ್ಗಿಸಿಯೇ ನಡೆಯಬೇಕು ಎಂದು ಮಂಜು ಅಣುಕಿಸುತ್ತಾರೆ. ಈ ವೇಳೆ ನಾನು ಏನು ಮಾಡಿದೆ ನನಗೆ ಯಾಕೆ ಶಿಕ್ಷೆ ಎಂದು ಪ್ರಶಾಂತ್ ಕೇಳಿದಾಗ, ಚಕ್ರವರ್ತಿಯವರು ಬಾತ್ ರೂಂ ಬಾಗಿಲು ಕುಟ್ಟಿದ್ಯಾಲ್ಲೋ ಚಕ್ರಿ ಬಾಗಿಲು ತೆಗಿ ಅಂತ, ಅದಕ್ಕೆ ಈ ಶಿಕ್ಷೆ ಎಂದು ಚಕ್ರವರ್ತಿ ಪ್ರಶಾಂತ್‍ರವರಿಗೆ ರೇಗಿಸಿದ್ದಾರೆ.

ಒಟ್ಟಾರೆ ಮನೆ ಪೂರ್ತಿ ಅಂಬೆ ಗಾಲಿನಲ್ಲಿ ಶುಭಾ ಪೂಂಜಾ ಓಡಾಡಲು ಪರದಾಡಿದರೆ, ಚಕ್ರವರ್ತಿಯವರು ಒಂದೇ ಚೇರ್ ಮೇಲೆ ಕುಳಿತು ಡ್ರೆಸ್ ಚೇಂಜ್ ಮಾಡಲು ಆಗದೇ ಕಿಚನ್ ಬಳಿಯೇ ಕುಳಿತುಕೊಂಡು ಟಿ-ಶರ್ಟ್ ಬಿಚ್ಚಿ ಮತ್ತೊಂದು ಟಿ-ಶರ್ಟ್ ಕಿಚನ್ ಬಳಿಯೇ ತಂದು ಕೊಡುವಂತೆ ಮನೆಮಂದಿಯನ್ನು ಬೇಡುತ್ತಾ ಒದ್ದಾಡಿದ್ದಾರೆ.

Comments

Leave a Reply

Your email address will not be published. Required fields are marked *