ನನಗೆ ಯಾರು ಸ್ನೇಹಿತರಿಲ್ಲ ಎಂದ ದಿವ್ಯ

ನಾವು ಬೇರೆ ಪ್ರಪಂಚದಲ್ಲೇ ಇದ್ದೇವೆ. ಯಾವುದೇ ಚಿಂತೆ ಇಲ್ಲದೇ ಇರಬೇಕೆಂದು ಮಂಜು ಹೇಳಿದ್ದಾರೆ. ಆದರೆ ನನಗೆ ಮನೆಯ ಯೋಚನೆ ಆಗುತ್ತಿದೆ. ಅಣ್ಣ, ಅಮ್ಮ ಹೇಗೆ ಇದ್ದಾರೆ. ಹೇಗೆ ಬಂದು ನನಗೆ ಪ್ರತಿವಾರ ಬಟ್ಟೆಯನ್ನು ಕೊಡುತ್ತಾರೆ ಎಂದು ನನಗೆ ಯೋಚನೆ ಆಗುತ್ತಿದೆ ಎಂದು ದಿವ್ಯಾ ಸುರೇಶ್ ಮನೆಯ ನೆನಪು ಮಾಡಿಕೊಂಡಿದ್ದಾರೆ.

ಕಣ್ಣೀರಿಟ್ಟ ದಿವ್ಯ ಸುರೇಶ್!

ನಿನ್ನ ಪರ್ಸನಲ್ ಯಾರು ಮ್ಯಾನೇಜ್ ಮಾಡುತ್ತಾರೆ ಎಂದು ಮಂಜು ಕೇಳಿದ್ದಾರೆ. ಆಗ ದಿವ್ಯ ಕಣ್ಣಿರು ಹಾಕುತ್ತಾ ನನಗೆ ಯಾರು ಅಂತ ಸ್ನೇಹಿತರು ಎಂದು ಇಲ್ಲ. ಅಮ್ಮ, ಅಣ್ಣನೇ ನನ್ನ ಎಲ್ಲಾ ವಿಚಾರಗಳನ್ನು ಅವರೇ ನೋಡಿಕೊಳ್ಳುತ್ತಾರೆ ಎಂದು ಹೇಳುತ್ತಾ ಮನೆಮಂದಿಯನ್ನು ನೆನೆಪು ಮಾಡಿಕೊಂಡು ದಿವ್ಯಾ ಕಣ್ಣೀರಿಟ್ಟಿದ್ದಾರೆ.

ಇಬ್ರು ಮಜಾ ಮಾಡನಾ!

ಕಣ್ಣೀರಿಗೆ ಬೆಲೆ ಇದೆ ಕಣ್ಣೀರು ಹಾಕಬೇಡ. ನೀನು ನನ್ನ ಹತ್ರ ಏನ್ ಬೇಕಾದರೂ ಹೇಳಿಕೊ ನಿನಗಾಗಿ ಇನ್ನು ಮಂದೆ ನಾನು ಇದ್ದೇನೆ. ಸ್ನೇಹಿತರಾಗಿ ಇಬ್ರು ಮಜಾ ಮಾಡುವ ಎಂದು ಹೇಳಿ ದಿವ್ಯಾ ಸುರೇಶ್‍ಗೆ ಸಮಾಧಾನ ಮಾಡಿದ್ದಾರೆ.

ಬಿಗ್‍ಮನೆಯಲ್ಲಿ ಹೆಚ್ಚಾಗಿ ಕಣ್ಣೀರು ಹಾಕುವ ಸದಸ್ಯೆ ಎಂದರೆ ದಿವ್ಯಾ ಸುರೇಶ್. ಅವರಿಗೆ ಕೊಂಚ ಬೇಸರವಾದರೂ ಮೊದಲು ಕಣ್ಣೀರು ಬರುತ್ತದೆ. ಆದರೆ 2 ನೇ ವಾರಕ್ಕೆ ದಿವ್ಯಾಗೆ ಮನೆ ನೆನಪು ಕಾಡುತ್ತಿದೆ. ಮನೆಯಲ್ಲಿ ಜಗಳ, ಸದಸ್ಯರು ಹೊಂದಿಕೊಳ್ಳುತ್ತಿಲ್ಲ, ಮನೆ ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಾರೆ. ಆದರೆ ದಿವ್ಯಾ ಸುರೇಶ್ ನನಗೆ ಎಲ್ಲಾ ಅಮ್ಮ, ಅಣ್ಣನೇ ಎಂದು ಹೇಳುವಾಗ ಅವರು ಒಂಟಿ ಎಂದು ಭಾವಿಸುತ್ತಿದ್ದಾರೆ ಎಂದು ಅವರ ಮಾತಿನ ದಾಟಿಯಲ್ಲಿಯೇ ಅರ್ಥವಾಗುತ್ತಿತ್ತು.

ವಾರಾಂತ್ಯದ ಕಟ್ಟೆ ಪಂಚಾಯತ್ತಿಯಲ್ಲಿ ಕಾಯುತ್ತಿರುವ ಬಿಗ್‍ಬಾಸ್ ಅಭಿಮಾನಿಗಳಿಗೆ ಮನೆ ಮಂದಿ ಕಣ್ಣೀರು, ಹೈಡ್ರಾಮಾ, ಜಗಳ. ಮಾತು ಎಲ್ಲಾ ಸಹಜವಾಗಿದೆ. ಈ ವಾರ ಯಾರು ಮನೆಯಿಂದ ಆಚೆ ಹೋಗುತ್ತಾರೆ ಎನ್ನುವ ಕೂತುಹೊಲ ಇದೆ. ಏನೇ ಆಗಲಿ ಬಿಗ್ ಮನೆಯ ಸದಸ್ಯರ ಡ್ರಾಮಾ ಹಿಂದೆ ನಿಂತು ಸೂತ್ರದ ಗೊಂಬೆಯಂತೆ ಆಡಿಸುತ್ತಿರುವವನು ಬಿಗ್‍ಬಾಸ್.

Comments

Leave a Reply

Your email address will not be published. Required fields are marked *