ನಡೆದು ಹೋಗ್ತಿದ್ದ 6 ವಲಸೆ ಕಾರ್ಮಿಕರ ಮೇಲೆ ಹರಿದ ಬಸ್ – ಎರಡು ಪ್ರತ್ಯೇಕ ಅಪಘಾತದಲ್ಲಿ 14 ಮಂದಿ ಸಾವು

– ಲಾರಿ, ಬಸ್ ನಡುವೆ ಡಿಕ್ಕಿ 8 ಸಾವು, 50 ಮಂದಿಗೆ ಗಾಯ

ಲಕ್ನೋ: ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಒಟ್ಟು 14 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ, 50 ಮಂದಿ ಗಾಯಗೊಂಡಿದ್ದಾರೆ.

ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಮಿಕರು ತಮ್ಮ ಊರಿಗೆ ಹೋಗಿ ಅಲ್ಲಿಯಾದರೂ ಬದುಕೋಣ ಎಂದು ಹೊರಟಿದ್ದರು. ಬಸ್ ಅಥವಾ ಯಾವುದೇ ಸಾರಿಗೆ ವ್ಯವಸ್ಥೆ ಸಿಗದ ಕಾಣರಕ್ಕೆ ನಡೆದುಕೊಂಡು ಊರಿನತ್ತ ಪ್ರಯಣ ಬೆಳೆಸಿದ್ದರು. ಉತ್ತರ ಪ್ರದೇಶ ಮುಜಾಫರ್‍ನಗರ-ಸಹರನ್ಪುರ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಘಲೌಲಿ ಚೆಕ್‍ಪೋಸ್ಟ್ ಬಳಿ 6 ಮಂದಿ ವಲಸೆ ಕಾರ್ಮಿಕರು ನಡೆದು ಬರುತ್ತಿದ್ದರು. ಈ ವೇಳೆ ಚೆಕ್‍ಪೋಸ್ಟ್ ಬಳಿ ವೇಗವಾಗಿ ಬರುತ್ತಿದ್ದ ಬಸ್ಸೊಂದು ಕಾರ್ಮಿಕರ ಮೇಲೆ ಹರಿದು ಹೋಗಿದೆ. ಪರಿಣಾಮ 6 ಮಂದಿ ಸಾವನ್ನಪ್ಪಿದ್ದಾರೆ.

ಇತ್ತ ಮಧ್ಯಪ್ರದೇಶದ ಗುಣದಲ್ಲಿ ಬುಧವಾರ ರಾತ್ರಿ ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಲಾರಿ ಹಾಗೂ ಬಸ್ಸೊಂದರ ನಡುವೆ ಡಿಕ್ಕಿ ಆಗಿ ಅಪಘಾತಕ್ಕಿಡಾಗಿದೆ. ಈ ಅಪಘಾತದಲ್ಲಿ 8 ಮಂದಿ ಕಾರ್ಮಿಕರು ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ 8 ಮಂದಿ ಉತ್ತರ ಪ್ರದೇಶದವರಾಗಿದ್ದು, ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಬಂದಿದ್ದರು. ಆದರೆ ಲಾಕ್‍ಡೌನ್ ಪರಿಣಾಮ ಕೆಲಸವಿಲ್ಲದೆ ಕಷ್ಟದಲ್ಲಿದ್ದ ಕಾರ್ಮಿಕರು ತಮ್ಮೂರಿಗೆ ವಾಪಸ್ ತೆರೆಳುತ್ತಿದ್ದರು. ಈ ವೇಳೆ ಗುಣದಲ್ಲಿ ಈ ದುರಂತ ಸಂಭವಿಸಿದೆ.

Comments

Leave a Reply

Your email address will not be published. Required fields are marked *