ನಡು ರಸ್ತೆಯಲ್ಲಿ ಕ್ಯಾಬ್ ಡ್ರೈವರ್​​​ಗೆ ಹಿಗ್ಗಾಮುಗ್ಗ ಥಳಿಸಿದ ಯುವತಿ

ಲಕ್ನೋ: ಲಕ್ನೋ ನಗರದ ಅವಧ್ ಸಿಗ್ನಲ್‍ನಲ್ಲಿ ರಸ್ತೆ ಮಧ್ಯೆ ಯುವತಿಯೊಬ್ಬಳು ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವೀಡಿಯೋವನ್ನು ಮೇಘ್ ಅಪ್‍ಡೇಟ್ಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಯುವತಿ ಕ್ಯಾಬ್ ಡ್ರೈವರ್​​​ಗೆ ನಿರಂತರವಾಗಿ ಹೊಡೆದಿದ್ದಾರೆ. ಈ ವೇಳೆ ಗಲಾಟೆ ಮಧ್ಯೆ ಕ್ಯಾಬ್ ಡ್ರೈವರ್‌ನನ್ನು ರಕ್ಷಿಸಲು ಬಂದ ವ್ಯಕ್ತಿ ಕೂಡ ಯುವತಿಯಿಂದ ಹಲ್ಲೆಗೊಳಗಾಗಿದ್ದಾರೆ. ಜೊತೆಗೆ ಯುವತಿಗೆ ಕಾರು ಗುದ್ದಿರುವುದಾಗಿ ಹೇಳುತ್ತಿರುವುದನ್ನು ಕೇಳಬಹುದಾಗಿದೆ.

ವೀಡಿಯೋದಲ್ಲಿ ಮಹಿಳೆ ಜೀಬ್ರಾ ಕ್ರಾಸಿಂಗ್ ಮಧ್ಯೆ ನಿಂತು ಕ್ಯಾಬ್ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿ ಟ್ರಾಫಿಕ್ ಜಾಮ್ ಆಗಿದೆ. ಈ ವಿಚಾರವಾಗಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಜಗಳವನ್ನು ತಪ್ಪಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೂ ಮಹಿಳೆ ಬಿಡದೇ ಚಾಲಕನನ್ನು ಎಳೆದಾಡಿಕೊಂಡು ಕಪಾಳಕ್ಕೆ ಹೊಡೆಯುತ್ತಲೇ ಇರುತ್ತಾರೆ. ಈ ವೇಳೆ ಚಾಲಕ ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡುವಂತೆ ಸ್ಥಳೀಯರಿಗೆ ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ:ಇಲ್ಲಿ ಕಿಸ್ ಮಾಡುವಂತಿಲ್ಲ – ಜೋಡಿಗಳ ಚುಂಬನದಿಂದ ಬೇಸತ್ತ ಸೊಸೈಟಿ

Comments

Leave a Reply

Your email address will not be published. Required fields are marked *