ನಡುರಸ್ತೆಯಲ್ಲೇ ಬಿಯರ್ ಬಾಟ್ಲಿಯಲ್ಲಿ ಅಣ್ಣನ ತಲೆಗೆ ಹೊಡೆದ ತಂಗಿ!

– ಸಹೋದರಿಯ ಹಲ್ಲೆಯಿಂದ ವ್ಯಕ್ತಿ ಗಂಭೀರ ಗಾಯ

ಹುಬ್ಬಳ್ಳಿ: ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಸಹೋದರನಿಂದ ಬೇಸತ್ತ ತಂಗಿಯೊಬ್ಬಳು, ನಡು ರಸ್ತೆಯಲ್ಲಿಯೇ ಆತನಿಗೆ ಬಿಯರ್ ಬಾಟ್ಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾಳೆ.

ಹುಬ್ಬಳ್ಳಿಯ ಬಸವೇಶ್ವರ ಪಾರ್ಕನ್ ಪ್ರಿಯದರ್ಶಿನಿ ಪಾಟೀಲ್ ತನ್ನ ಸಹೋದರ ಸಿದ್ಧಲಿಂಗಯ್ಯನ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಘಟನೆ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿ ನಡೆದಿದೆ. ಹಲ್ಲೆಯ ಪರಿಣಾಮ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲದೇ ರಸ್ತೆಯಲ್ಲಿಯೇ ಬಿದ್ದು ನರಳಾಡುತ್ತಿದ್ದನು. ಇದನ್ನು ಗಮನಿಸಿದ ಸ್ಥಳೀಯರು ಮಹಿಳೆಯನ್ನು ತಡೆದಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆ ಘಟನೆ ನಡೆದಿದೆ ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸೂಕ್ತ ಕಾರಣ ಪೊಲೀಸ್ ತನಿಖೆಯಿಂದಲೇ ಗೊತ್ತಾಗಬೇಕಿದೆ. ಸ್ಥಳಕ್ಕೆ 112 ಸಹಾಯವಾಣಿಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Comments

Leave a Reply

Your email address will not be published. Required fields are marked *