ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ನಿಧನ

ಮುಂಬೈ: ಬಾಲಿವುಡ್ ಖ್ಯಾತ ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿರ್ದೇಶಕ ಓನರಿ ಅವರು ರಾಕ್ ಕೌಶಲ್ ನಿಧನವನ್ನು ಖಚಿತಪಡಿಸಿದ್ದು, ಬಿಟೌನ್ ಸ್ಟಾರ್ ಗಳು ಸಂತಾಪ ಸೂಚಿಸುತ್ತಿದ್ದಾರೆ.

ಇಷ್ಟು ಬೇಗ ಹೋದೆಯಾ? ಇಂದು ಬೆಳಗ್ಗೆ ನಿರ್ಮಾಪಕ ಮತ್ತು ಫಿಲಂ ಮೇಕರ್ ರಾಜ್ ಕೌಶಲ್ ಅವರನ್ನ ಕಳೆದುಕೊಂಡಿದ್ದೇವೆ. ನನ್ನ ಮೊದಲ ಚಿತ್ರ ‘ಮೈ ಬ್ರದರ್ ನಿಖಿಲ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅವರ ನಿಧನದ ಸುದ್ದಿ ತಿಳಿಸಲು ದುಃಖವಾಗ್ತಿದೆ. ಎಲ್ಲರಿಗೂ ಆಪ್ತರಾಗಿದ್ದ ರಾಜ್ ಕೌಶಲ್, ನಮ್ಮೊಳಗಿನ ಕಲೆ ಗುರುತಿಸಿ ಬೆಂಬಲ ನೀಡುತ್ತಿದ್ದರು ಎಂದು ನಿರ್ದೇಶಕ ಓನಿರ್ ಕಂಬನಿ ಮಿಡಿದಿದ್ದಾರೆ.

ರಾಜ್ ಕೌಶಲ್ ಸ್ಕ್ರಿಪ್ಟ್ ರೈಟರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ನಿರ್ದೇಶನಕ್ಕೆ ಕಾಲಿಟ್ಟ ರಾಜ್ ಕೌಶಲ್, ಆಂಥೋನಿ ಕೌನ್ ಹೈ, ಶಾದಿ ಕಾ ಲಡ್ಡು, ಪ್ಯಾರ್ ಮೇ ಕಭೀ ಕಭೀ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು. ಅದೇ ರೀತಿ ನಿಖಿಲ್, ಶಾದಿ ಕಾ ಲಡ್ಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

1999ರಲ್ಲಿ ರಾಜ್ ಕೌಶಲ್ ಮತ್ತು ಮಂದಿರಾ ಬೇಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೂನ್ 19, 2011ರಂದು ಮಂದಿರಾ ಬೇಡಿ ಮಗ ವೀರ್ ಗೆ ಜನ್ಮ ನೀಡಿದ್ದರು. 2020ರಲ್ಲಿ ದಂಪತಿ ನಾಲ್ಕು ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದರು.

Comments

Leave a Reply

Your email address will not be published. Required fields are marked *