ನಟನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲತೆ ಪ್ರದರ್ಶಿಸಿದ ವ್ಯಕ್ತಿ ಅರೆಸ್ಟ್

ಮುಂಬೈ: ನಟನರೊಬ್ಬರ ಹೆಂಡತಿಗೆ ವೀಡಿಯೋ ಕರೆ ಮಾಡಿ ಅಶ್ಲೀಲತೆ ಪ್ರದರ್ಶನ ಮಾಡಿದ್ದಕ್ಕಾಗಿ ಜೈಪುರದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಆರೋಪಿ ಪೂಜಾ ಜೈನ್ (32) ಜೈಪುರ ಮೂಲದವ ಎಂದು ತಿಳಿದುಬಂದಿದೆ. ನಟರೊಬ್ಬರ ಪತ್ನಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲತೆ ಪ್ರದರ್ಶಿಸಿದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.

ಮಹಿಳೆಗೆ ಕೆಲವು ದಿನಗಳ ಹಿಂದೆ ಆರೋಪಿ ಪೂಜಾ ಜೈನ್‍ನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಮಹಿಳೆ ಯಾರೋ ಸಂಬಂಧಿ ಎಂದು ತಿಳಿದು ರಿಕ್ವೆಸ್ಟ್ ಸ್ವೀಕರಿಸಿದ್ದಾಳೆ. ನಂತರ ಆರೋಪಿಯಿಂದ ಸಂದೇಶಗಳು ಬರಲು ಪ್ರಾರಂಭಿಸಿದವು. ನವೆಂಬರ್ 25 ರಂದು ಮಹಿಳೆಗೆ ಪೂಜಾ ಜೈನ್ ನಿಂದ ವಿಡಿಯೋ ಕರೆ ಒಂದು ಬಂದಿದೆ. ಅಲ್ಲಿ ಆರೋಪಿಗಳು ಅಶ್ಲೀಲ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿರುವುದು ಕಂಡಿದೆ.

ಮಹಿಳೆ ಈ ವಿಚಾರವನ್ನು ತನ್ನ ಪತಿಗೆ ಹೇಳಿದ್ದಾಳೆ. ಆರೋಪಿಯಿಂದ ಮತ್ತೆ ಕರೆ ಬರುವವರೆಗೂ ಈ ದಂಪತಿ ಕಾದಿದ್ದಾರೆ. ಒಂದು ದಿನ ಮತ್ತೆ ಅದೇ ವ್ಯಕ್ತಿಯಿಂದ ಕೆರೆ ಬಂದಿದೆ. ಆಗ ಅದನ್ನು ಯುವತಿಯ ಪತಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಈ ವಿಚಾರವಾಗಿ ಯುವತಿಯ ಪತಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು.

ಡಿ ಬಿ ಮಾರ್ಗ್ ಪೊಲೀಸರು ಜೈಪುರಕ್ಕೆ ಐಪಿ ಅಡ್ರೆಸ್‍ನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಗುರುತಿಸಿದೆವು. ಆರೋಪಿ ರಾಹುಲ್ ಜೈನ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಾನೆ. ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಅವರು ನಿರುದ್ಯೋಗಿಗಳಾಗಿದ್ದರು. ಆಗ ಇಂತಹ ಕೆಲಸವನ್ನು ಮಾಡಿದ್ದಾರೆ. ಈ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರೆ ಮಾಡಿದವರು ಅಪ್ಲಿಕೇಶನ್ ಬಳಸಿ ವೀಡಿಯೋ ಕರೆ ಮಾಡಿದ ಕಾರಣ ಮೊಬೈಲ್ ಸಂಖ್ಯೆ ಇರಲಿಲ್ಲ. ನಾವು ಅಪ್ಲಿಕೇಶನ್‍ನ ಕಚೇರಿಯನ್ನು ಸಂಪರ್ಕಿಸಿ ಐಪಿ ವಿಳಾಸವನ್ನು ತೆಗೆದುಕೊಂಡೆವು. ನಂತರ ಇಂಟರ್ನೆಟ್ ಸೇವೆ ಒದಗಿಸುವವರನ್ನು ಸಂಪರ್ಕಿಸಿ ಜೈಪುರದ ವ್ಯಕ್ತಿಯ ವಿಳಾಸವನ್ನು ಪಡೆದು ಆರೋಪಿಗಳನ್ನು ಪತ್ತೆ ಹಚ್ಚಿದೆವು ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *