ನಕಲಿ ಆಡಿಯೋ ಇದಾಗಿದ್ದು, ಕಟೀಲ್ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ: ರೇಣುಕಾಚಾರ್ಯ

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ನಕಲಿಯಾಗಿದ್ದು, ಇದರ ಹಿಂದೆ ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರಿಗೆ ನಾನು ಬೆಳಗ್ಗೆ ಕರೆ ಮಾಡಿ ಮಾತನಾಡಿದ್ದೇನೆ. ಕಟೀಲ್ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ, ಇದು ನನ್ನ ಧ್ವನಿ ಅಲ್ಲ. ನನ್ನ ಹೆಸರಿಗೆ ಕಳಂಕ ತರಲು ಈ ರೀತಿ ಷ್ಯಡ್ಯಂತ್ರ ರೂಪಿಸಿದ್ದಾರೆ ಎಂದಿದ್ದಾರೆ. ಅಲ್ಲದೆ ಕಟೀಲ್ ಅವರೇ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಕೇಂದ್ರದ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ನೀವೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೀರಿ ಎಂದು ಹೇಳಿದ್ದಾರೆ. ಆದರೆ ಅಧ್ಯಕ್ಷರು ಮಾತನಾಡಿದ್ದಾರೆ ಎನ್ನುವ ಅಡಿಯೋ ನಕಲಿ ಅಡಿಯೋ. ಅವರ ವಿರುದ್ಧ ಕಾಂಗ್ರೆಸ್ ಷ್ಯಡ್ಯಂತ್ರ ರೂಪಿಸಿದೆ ಎಂದು ಶಾಸಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Exclusive ಸಿಎಂ ಬದಲಾವಣೆ ಫಿಕ್ಸ್ – ಕಟೀಲ್ ಆಡಿಯೋ ವೈರಲ್

ನಾನು ಕೂಡ ಆಡಿಯೋವನ್ನು ಕೇಳಿದ್ದೇನೆ. ಆ ಧ್ವನಿ ಅವರದ್ದಲ್ಲ. ಎಲ್ಲೋ ಒಂದು ಕಡೆ ಮಿಕ್ಸಿಂಗ್ ಮಾಡಿ, ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ, ಪಕ್ಷ ಅಧಿಕಾರಕ್ಕೆ ಬರೋದಿಲ್ಲ ಎನ್ನುವ ಮನವರಿಕೆಯಾಗಿದೆ. ಅದ್ದರಿಂದ ಕಾಂಗ್ರೆಸ್ಸಿನವರ ಕುತಂತ್ರದಿಂದ ಈ ಆಡಿಯೋ ಬಂದಿದೆ. ಆಡಿಯೋ ಕಾಂಗ್ರೆಸ್ ನವರ ಕುತಂತ್ರ. ತನಿಖೆ ನಡೆಸಲು ನಾವು ಕೂಡ ಒತ್ತಾಯ ಮಾಡುತ್ತೇವೆ ಎಂದರು. ಇದನ್ನೂ ಓದಿ: Exclusive: ಜುಲೈ 26ಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ಸಾಧ್ಯತೆ – ರಾಜಾಹುಲಿಗೆ ಹೈಕಮಾಂಡ್ ಸೂಚನೆ!

ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಸೂಚಿಸುತ್ತಾರೆ. ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಅವರೇ ಸೂಚಿಸಿದ್ದರು. ರಾಜ್ಯದಲ್ಲಿ ಅವರ ವರ್ಚಸ್ಸು ಚೆನ್ನಾಗಿದೆ ಎಂದು ಕಟೀಲ್ ಅವರೇ ಹೇಳಿದ್ರು. ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಯಿತು, ಸಿಎಂ ಆಗಿ ಯಡಿಯೂರಪ್ಪ, ಅಧ್ಯಕ್ಷರಾಗಿ ಕಟೀಲ್ ಅವರನ್ನು ಸೂಚಿಸಿದರು ಎಂದರು.

ಸೌಜನ್ಯದ ವ್ಯಕ್ತಿ, ಸಂಘಟನೆಗೆ ಸಾಕಷ್ಟು ಆಸಕ್ತಿ ವಹಿಸಿದ್ದಾರೆ. ಪಕ್ಷದ ವಿರುದ್ಧ ಮಾತನಾಡಿದವರಿಗೆ ಅಧ್ಯಕ್ಷರೇ ನೋಟೀಸ್ ನೀಡಿದ್ದಾರೆ.

Comments

Leave a Reply

Your email address will not be published. Required fields are marked *