ನಂದಿಗ್ರಾಮದಲ್ಲಿ ರಾಕೇಶ್ ಟಿಕಾಯತ್ ಮಹಾ ಪಂಚಾಯತ್

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಕಣಕ್ಕೆ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಎಂಟ್ರಿ ನೀಡಿದ್ದು, ಇಂದು ನಂದಿಗ್ರಾಮದಲ್ಲಿ ಮಹಾಪಂಚಾಯತ್ ಸಭೆ ನಡೆಸಲಿದ್ದಾರೆ. ಇಂದು ಸಂಜೆ 4 ಗಂಟೆಗೆ ರೈತರನ್ನು ಉದ್ದೇಶಿಸಿ ಮಾತನಾಡಲಿರುವ ಟಿಕಾಯತ್, ಬಿಜೆಪಿಗೆ ಮತ ನೀಡದಂತೆ ಮನವಿ ಮಾಡಿಕೊಳ್ಳಲಿದ್ದಾರೆ.

ಈ ಬಾರಿ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧೆಗಿಳಿದಿದ್ದು, ದೀದಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸುವೇಂದು ಅಧಿಕಾರಿ ನಿಂತಿದ್ದಾರೆ. ಪಂಚ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ಬಿಜೆಪಿ ವಿರುದ್ಧ ಅಭಿಯಾನ ನಡೆಸಲು ನಿರ್ಧರಿಸಿದೆ. ಎಸ್‍ಕೆಂ ಭಾಗವಾಗಿ ಪಶ್ಚಿಮ ಬಂಗಾಳದಲ್ಲಿ ಪ್ರವಾಸ ಕೈಗೊಂಡಿರುವ ಟಿಕಾಯತ್, ಕೋಲ್ಕತ್ತಾದ, ನಂದಿಗ್ರಾಮ್, ಸಿಂಗೂರ್ ಮತ್ತು ಅಸನ್ಸೋಲ್ ನಲ್ಲಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಪಶ್ಚಿಮ ಬಂಗಾಳದ 294 ಕ್ಷೇತ್ರಗಳಲ್ಲಿ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಲಿದ್ದಾರೆ. ರ್ಯಾಲಿಗಳಲ್ಲಿ ಬಿಜೆಪಿಯನ್ನ ಬಹಿಷ್ಕರಿಸುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಇಂದು ಕೋಲ್ಕತ್ತಾದಲ್ಲಿ 11 ಗಂಟೆಗೆ ಕೃಷಿ ಕಾನೂನುಗಳ ಕುರಿತು ಟಿಕಾಯತ್ ಮಾತನಾಡಲಿದ್ದಾರೆ.

Comments

Leave a Reply

Your email address will not be published. Required fields are marked *