ಧಾರವಾಡ ಕೆಎಮ್‍ಎಫ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ- ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷ ಸಾಧ್ಯತೆ

ಧಾರವಾಡ: ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಧಾರವಾಡ ಕೆಎಮ್‍ಎಫ್ ಅಧ್ಯಕ್ಷರಾಗಿದ್ದ ಬಸವರಾಜ ಅರಬಗೊಂಡ ವಿರುದ್ಧ ಅವಿಶ್ವಾಸ ಮಂಡನೆಯಾಗಿದೆ.

ಒಟ್ಟು 12 ನಿರ್ದೇಶಕರಲ್ಲಿ ಇಂದು ನಡೆದ ಮತಯಾಚನೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಬಸವರಾಜ ಅರಬಗೊಂಡ ಪರವಾಗಿ 2 ಮತಗಳು ಚಲಾವಣೆಯಾದರೆ, ವಿರುದ್ಧವಾಗಿ 10 ಜನರು ಮತ ಚಲಾವಣೆ ಮಾಡಿದ್ದಾರೆ. ಅಧ್ಯಕ್ಷ ಸ್ಥಾನದಲ್ಲಿದ್ದ ಬಸವರಾಜ ಅರಬಗೊಂಡರನ್ನು ಅಂತಿಮವಾಗಿ ಅವಿಶ್ವಾಸದ ಮೂಲಕ ಕೆಳಗಿಸಲಾಯಿತು.

ಬಸವರಾಜ್ ಅರಬಗೊಂಡ ಕೈ ಪಕ್ಷದ ಬೆಂಬಲಿತರಾಗಿದ್ದರು. ಸದ್ಯ ಬಿಜೆಪಿ ಬೆಂಬಲಿತ ಶಂಕರ್ ಮುಗದ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಹದಿನೈದು ದಿನಗಳ ನಂತರ ಅಧ್ಯಕ್ಷರ ಚುನಾವಣೆ ನಡೆಯಲಿದೆ.

Comments

Leave a Reply

Your email address will not be published. Required fields are marked *