ಧಾರವಾಡದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಮರಾಠ ಪ್ರೇಮ

ಧಾರವಾಡ: ಮರಾಠ ಕ್ರಾಂತಿ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮರಾಠಿ ಭಾಷಾ ಪ್ರೇಮ ಪ್ರದರ್ಶಿಸಿದ್ದಾರೆ.

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ ಖಂಡಿಸಿ ನಡೆದ ಸಭೆಯಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಶಾಸಕಿ,ಸ ಮರಾಠ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ. ಮರಾಠ ಸಮಾಜದ ಬಗ್ಗೆ ಕಾಳಜಿ ಇದ್ದರೆ 2ಎ ಮೀಸಲಾತಿ ನೀಡಲಿ. ನಾವು ಕೂಡ ಸಮಾಜದ ಮುಖಂಡರಿಂದ ಪತ್ರ ಬರೆಯುತ್ತೇವೆ. ಏಳು ದಿನಗಳ ಒಳಗೆ ಮೀಸಲಾತಿ ನಿರ್ಣಯ ಮಾಡಬೇಕು. ಮೀಸಲಾತಿ ಮಾಡಿದ್ರೆ ಮಾತ್ರ ಮತ ಹಾಕುತ್ತೇವೆ. ಇಲ್ಲದಿದ್ದರೇ ಬೆಳಗಾವಿ, ಮಸ್ಕಿ, ಗ್ರಾಪಂ, ಜಿಪಂ ಎಲ್ಲ ಎಲೆಕ್ಷನ್ ಬಹಿಷ್ಕಾರ ಹಾಕ್ತೇವಿ ಎಂದು ಶಾಸಕಿ ಅಂಜಲಿ ಎಚ್ಚರಿಸಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಷಯದಲ್ಲಿ ನಾವು ಯಡಿಯೂರಪ್ಪ ಬಳಿ ಭಿಕ್ಷೆ ಕೇಳುತ್ತಿಲ್ಲ. ನಮಗೆ ಐವತ್ತು ಕೋಟಿಯಲ್ಲ, ಐನೂರು ಕೋಟಿ ಕೊಟ್ಟರೂ ಬೇಕಾಗಿಲ್ಲ. ಲಿಂಗಾಯತ ಸಮಾಜಕ್ಕೆ ಐನೂರು ಕೋಟಿ ಕೊಟ್ಟಿದೀರಿ. ಹಾಗೆಯೇ ಚುನಾವಣಾ ಗಿಮಿಕ್ ಅಂತಾ ಯಾವ ಸಮಾಜಕ್ಕೆ ಏನೇನು ಕೊಡ್ತಿರೋ ಕೊಡಿ. ಯಾವ ಜಾತಿಗೆ ಎಷ್ಟು ಮತ ಇದೆ ಅಷ್ಟು ಪ್ರಾಧಿಕಾರ ಮಾಡುತ್ತಾ ಹೋಗಲಿ ಎಂದರು.

ಇದೇ ಸಂದರ್ಭದಲ್ಲಿ ಮರಾಠಿ ಭಾಷಾ ಪ್ರೇಮ ಪ್ರದರ್ಶಿಸಿದ ಅಂಜಲಿ, ಭಾಷಣದುದ್ದಕ್ಕೂ ಮರಾಠಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ನನ್ನ ಖಾನಾಪುರ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಮಾರವಾಡಿ, ಲಿಂಗಾಯತರ, ಬ್ರಾಹ್ಮಣ ಯಾವುದೇ ಜಾತಿ ಇದ್ದರೂ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಅಲ್ಲಿ ಕನ್ನಡ ಮಾತನಾಡಿದರೆ ಅರ್ಥ ಆಗುವುದಿಲ್ಲ. ಅದಕ್ಕೆ ನಾವು ಅಲ್ಲಿ ಮರಾಠಿ ಭಾಷೆಯನ್ನೇ ಮಾತನಾಡುತ್ತೇವೆ ಎಂದ ಅವರು, ಬೆಂಗಳೂರಿನಲ್ಲೆ ಕನ್ನಡ ನಾಡಿನಲ್ಲೇ ಹುಟ್ಟಿದ ಜನರಿಗೆ ಕನ್ನಡ ಬರೋದಿಲ್ಲ. ಅವರು ತಮಿಳು, ತೆಲುಗು ಮಾತನಾಡುತ್ತಾರೆ. ಆದರೆ ಮರಾಠ ಸಮಾಜ ಕನ್ನಡ ಭಾಷೆ ಬಗ್ಗೆ ಅಭಿಮಾನ ಹೊಂದಿದ್ದೇವೆ ಎಂದರು.

Comments

Leave a Reply

Your email address will not be published. Required fields are marked *