ದೊಡ್ಮನೆಯಿಂದ ಹೊರ ಹೋದ ಅರವಿಂದ್‍ಗೆ ಬಂದ ಪ್ರಪೋಸಲ್ಸ್ ಎಷ್ಟು ಗೊತ್ತಾ?

ಬೆಂಗಳೂರು: ಲಾಕ್‍ಡೌನ್ ಬಳಿಕ ಮತ್ತೆ ಬಿಗ್‍ಬಾಸ್ ಸೀಸನ್-8 ಕಾರ್ಯಕ್ರಮ ಆರಂಭವಾಗಿದೆ. ಸದ್ಯ ಕಾರ್ಯಕ್ರಮವನ್ನು ಕಂಟಿನ್ಯೂ ಮಾಡಿರುವ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಮತ್ತೆ ದೊಡ್ಮನೆಗೆ ಬರಮಾಡಿಕೊಳ್ಳುತ್ತಾ, ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಮಧ್ಯೆ ದೊಡ್ಮನೆಯಿಂದ ಹೊರ ಹೋದ ಕೆ.ಪಿ ಅರವಿಂದ್‍ರವರಿಗೆ ಎಷ್ಟು ಮದುವೆ ಪ್ರಪೋಸಲ್ಸ್ ಗಳು ಬಂದಿದೆ ಎಂಬ ವಿಚಾರ ವೇದಿಕೆ ಮೇಲೆ ಬಹಿರಂಗವಾಗಿದೆ.

ಹೌದು, ಬಿಗ್‍ಬಾಸ್ ಮನೆಯಿಂದ ಹೊರಗಡೆ ಹೋದ ಮೇಲೆ ಸಿನಿಮಾ ಆಫರ್‌ಗಳು ಜಾಸ್ತಿ ಬಂತಾ, ಮದುವೆ ಆಫರ್‌ಗಳು ಜಾಸ್ತಿ ಬಂತಾ, ರೇಸ್ ಸರ್ಕಲ್‍ಗಳಿಂದ ಆಫರ್ ಜಾಸ್ತಿ ಬಂತಾ ಏನೇನು ಬಂತು ಎಂದು ಕಿಚ್ಚ ಸುದೀಪ್ ಅರವಿಂದ್‍ರವರಿಗೆ ಪ್ರಶ್ನೆ ಕೇಳಿದ್ದಾರೆ.

ಆಗ ಅರವಿಂದ್ ಕೋವಿಡ್ ಇರುವ ಕಾರಣ ರೇಸ್ ಸರ್ಕಲ್‍ನಿಂದ ಜಾಸ್ತಿ ಆಫರ್‌ಗಳು ಬಂದಿಲ್ಲ. ಸದ್ಯಕ್ಕೆ ಸಿನಿಮಾ ಆಫರ್‌ಗಳು ಬಂದಿಲ್ಲ. ಆದರೆ ಮದುವೆ ಆಫರ್‌ಗಳು ಒಂದೆರಡು-ಮೂರು ಬಂದಿದೆ ಎಂದಿದ್ದಾರೆ. ಇದಕ್ಕೆ ಕಿಚ್ಚ, ಸತ್ಯ ಮಾತಾಡುತ್ತೇನೆ ಸತ್ಯ ಬಿಟ್ಟು ಬೇರೆನೂ ಮಾತನಾಡುವುದಿಲ್ಲ ಎಂದು ಈ ನೆಲ ಮುಟ್ಟಿ ಹೇಳಿ ಎಂದು ಕೇಳಿದಾಗ ಇದಕ್ಕೆ ನಗುತ್ತಾ ಅರವಿಂದ್, ನೆಲ ಮುಟ್ಟಿ ಸತ್ಯ ಮಾತನಾಡುತ್ತಿದ್ದೇನೆ ಸರ್, ಒಂದೆರಡು ಮೂರು ಪ್ರಪೋಸಲ್ಸ್ ಓದಿದ್ದೇನೆ. ಆದರೆ 1000ಕ್ಕೂ ಅಧಿಕ ಮೆಸೇಜ್‍ಗಳು ಬಂದಿದೆ ಎಂದು ಬಾಯ್ಬಿಟ್ಟಿದ್ದಾರೆ.

ಅದರಲ್ಲಿ ಬಹಳಷ್ಟು ಇಂಟ್ರೆಸ್ಟಿಂಗ್ ಯಾವುದು ಎಂದು ಕೇಳಿದಾಗ, ಸ್ಟ್ರೆಟ್ ಆಗಿ ಮ್ಯಾರಿ ಮೀ ಎಂದು ಕಳುಹಿಸಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ ಶುರು

Comments

Leave a Reply

Your email address will not be published. Required fields are marked *