ದೊಡ್ಮನೆಯಲ್ಲಿ ಮತ್ತೊಮ್ಮೆ ಅರವಿಂದ್‍ಗೆ ಸಿಕ್ತು ಬಿಗ್‍ಬಾಸ್ ಪಟ್ಟ

ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಕಾರ್ಯಕ್ರಮದಲ್ಲಿ ಭಾನುವಾರ ಮನೆಯ ಸ್ಪರ್ಧಿಗಳ ನಡುವೆಯೇ ಈ ಬಾರಿ ಯಾರು ಫೈನಲ್‍ನಲ್ಲಿ ಇರುತ್ತಾರೆ ಎಂಬ ವಿಚಾರ ಕುರಿತಂತೆ ವೋಟಿಂಗ್ ಸೆಷನ್ ನಡೆದಿದೆ.

ಈ ವೇಳೆ ಪ್ರಶಾಂತ್, ಶುಭಾ, ಚಕ್ರವರ್ತಿ ಹೊರತು ಪಡಿಸಿ ವೈಷ್ಣವಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಮಂಜು, ಶಮಂತ್ ಎಲ್ಲರೂ ಅರವಿಂದ್ ಬಿಗ್‍ಬಾಸ್ ಮನೆಯಲ್ಲಿ ಮೊದಲ ದಿನದಿಂದ ಇಲ್ಲಿಯವರೆಗೂ ಒಂದೇ ರೀತಿಯಲ್ಲಿ ಆಟ ಆಡಿಕೊಂಡು ಬಂದಿದ್ದಾರೆ. ಹಾಗಾಗಿ ಅವರು ಬಿಗ್‍ಬಾಸ್ ಫಿನಾಲೆಯಲ್ಲಿರಲು ಅರ್ಹರು ಎನ್ನಿಸುತ್ತದೆ ಎಂದು ಹೇಳುವ ಮೂಲಕ ಈ ಬಾರಿ ಫಿನಾಲೆಯಲ್ಲಿ ಅರವಿಂದ್ ಇರುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ಅರವಿಂದ್ ಕೂಡ ನಾನು ಹಾಗೂ ಮಂಜು ಫಿನಾಲೆಯಲ್ಲಿರುತ್ತೇವೆ ಎಂಬ ನಂಬಿಕೆಯಿದೆ. ಬಿಗ್‍ಮನೆಯ ಮೊದಲಿನ ದಿನದಿಂದ ಇಲ್ಲಿಯವರೆಗೂ ಒಂದೇ ರೀತಿ ಆಟ ಆಡಿಕೊಂಡು ಬಂದಿದ್ದೇವೆ. ತಪ್ಪಾದಾಗ ತಿದ್ದುಕೊಂಡಿದ್ದೇವೆ. ಮನೆಯ ಎಲ್ಲಾ ಸ್ಪರ್ಧಿಗಳೊಂದಿಗೆ ನಮ್ಮ ಹೊಂದಾಣಿಕೆ ಬಹಳ ಚೆನ್ನಾಗಿದೆ, ಕೆಲಸದ ವಿಚಾರಕ್ಕೆ ಬಂದರೂ ಬಹಳ ಚೆನ್ನಾಗಿ ನಿಭಾಹಿಸಿದ್ದೇವೆ. ಹಾಗಾಗಿ ನಾವಿಬ್ಬರು ಫಿನಾಲೆಯಲ್ಲಿರುತ್ತೇವೆ ಎಂದು ಅಂದುಕೊಂಡಿದ್ದೇನೆ ಎನ್ನುತ್ತಾರೆ.

ಆಗ ಸುದೀಪ್ ನಿಮ್ಮಿಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎಂದು ಪ್ರಶ್ನಿಸಿದಾಗ ಅರವಿಂದ್ ನಾನು ಗೆಲ್ಲಬಹುದು ಅಂತ ನನ್ನ ಮನಸ್ಸಿನಲ್ಲಿದೆ ಎನ್ನುತ್ತಾರೆ. ಇದಕ್ಕೆ ಸುದೀಪ್ ಅಂತೆ-ಕಂತೆ ಬೇಡ ಯಾರು ವಿನ್ ಆಗ್ತಾರೆ ಎಂದಾಗ ಅರವಿಂದ್, ನಾನು ಗೆಲ್ಲುತ್ತೇನೆ ಎಂದಿದ್ದಾರೆ.

ಒಟ್ಟಾರೆ ವೈಷ್ಣವಿ 1, ಶುಭಾ ಪೂಂಜಾ 1, ದಿವ್ಯಾ ಉರುಡುಗ 2, ಶಮಂತ್ 3, ಪ್ರಶಾಂತ್ 1, ಮಂಜು 4 ವೋಟ್‍ಗಳನ್ನು ಪಡೆದರೆ, ಚಕ್ರವರ್ತಿ ಚಂದ್ರಚೂಡ್ ಬಿಗ್‍ಬಾಸ್ ಸೀಸನ್-8ರ ವೈಲ್ಡ್ ಕಾರ್ಡ್ ಎಂಟ್ರಿ ಆಗಿರುವುದರಿಂದ ಈ ಬಾರಿ ಫಿನಾಲೆಯ ಹಂತಕ್ಕೂ ತಲುಪುವುದಿಲ್ಲ ಎಂದು ಮನೆಯ ಸದಸ್ಯರು ಹೇಳಿದ್ದಾರೆ.

ಈ ಹಿಂದೆ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರಾಗುತ್ತಾರೆ ಎಂದು ಮನೆಯ ಸದಸ್ಯರಿಗೆ ಸೂಚಿಸಲಾಗಿತ್ತು. ಈ ಸಂದರ್ಭದಲ್ಲಿ 1 ರಿಂದ ಕ್ರಮ ಸಂಖ್ಯೆ ನೀಡಲಾಗಿತ್ತು. ಇದರಲ್ಲೂ ಅರವಿಂದ್ ನಾನು ಮೊದಲ ಸ್ಥಾನಕ್ಕೆ ಅರ್ಹ ಎಂದು ಹೇಳಿ 1 ನಂಬರ್ ಇದ್ದ ಬೋರ್ಡ್ ಮುಂದೆ ನಿಂತಿದ್ದರು. ಇದನ್ನೂ ಓದಿ : ಈಗ ನಾನು ಟ್ರೋಲ್ ಆಗುತ್ತಿರಬಹುದು – ಅರವಿಂದ್, ಚಕ್ರವರ್ತಿ ಚರ್ಚೆ

Comments

Leave a Reply

Your email address will not be published. Required fields are marked *