ದೇಶದಲ್ಲಿ 3,26,098 ಹೊಸ ಪ್ರಕರಣ, 3,890 ಸಾವು- 3,53,299 ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,26,098 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 3,890 ಜನ ಸಾವನ್ನಪ್ಪಿದ್ದಾರೆ. ಖುಷಿಯ ವಿಚಾರವೆಂದರೆ 3,53,299 ಜನ ಗುಣುಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸೋಂಕಿತರ ಪ್ರಮಾಣ ನಿಧಾನಗತಿಯಲ್ಲಿ ಕಡಿಮೆಯಾಗುತ್ತಿದ್ದು, ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಸಷ್ಟೇ ನಿಧಾನವಾಗಿ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 3,26,098 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. 3,890 ಜನ ಸಾವನ್ನಪ್ಪಿದ್ದು, ಸಾವಿನ ಪ್ರಮಾಣ ಶೇ.1.09ರಷ್ಟಿದೆ. 3,53,299 ಜನ ಗುಣುಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,43,72,907ಕ್ಕೆ ಏರಿಕೆಯಾಗಿದೆ. ಈ ವರೆಗೆ 2,66,207 ಜನರನ್ನು ಕೊರೊನಾ ಬಲಿ ಪಡೆದಿದೆ. ಒಟ್ಟು 2,04,32,898 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 36,73,802 ಸಕ್ರಿಯ ಪ್ರಕರಣಗಳಿವೆ.

ಈ ವರೆಗೆ ಒಟ್ಟು 18,04,57,579 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಅಲ್ಲದೆ ಕಳೆದ 24 ಗಂಟೆಯಲ್ಲಿ 16,93,093 ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈ ವರೆಗೆ ದೇಶದಲ್ಲಿ 31,30,17,193 ಪರೀಕ್ಷೆ ನಡೆಸಲಾಗಿದೆ.

Comments

Leave a Reply

Your email address will not be published. Required fields are marked *