ಬೆಂಗಳೂರು: ದೇಶದಲ್ಲಿ ಕೊರೊನಾ ಪ್ರಕರಣಗಳು ಈ ಪರಿ ಪ್ರಮಾಣದಲ್ಲಿ ಸ್ಫೋಟಗೊಳ್ಳಲು ಡಬಲ್ ಮ್ಯೂಟೆಂಟ್ ಕೊರೊನಾ ವೈರಸ್ ಎನ್ನಲಾಗಿತ್ತು. ಇದೀಗ ಕೊರೊನಾ ಮತ್ತೊಂದು ಹೊಸ ಅವತಾರ ಎತ್ತಿದೆ. ಡಬಲ್ ಮ್ಯೂಟೆಂಟ್ ವೈರಸ್ ಜೊತೆ ಜೊತೆಗೆ ಈಗ ಟ್ರಿಪಲ್ ಮ್ಯೂಟೆಂಟ್ ವೈರಸ್ ಕಂಡು ಬಂದಿದೆ.
ಟ್ರಿಪಲ್ ಮ್ಯೂಟೆಂಟ್ ಅಂದ್ರೆ ಮೂರು ರೂಪಾಂತರ ಹೊಂದಿದ ವೈರಸ್ ಎಂದರ್ಥ. ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳದಲ್ಲಿ ಹೊಸ ಕೇಸ್‍ಗಳ ಮಹಾ ಸ್ಫೋಟಕ್ಕೆ ಈ ಹೊಸ ರೂಪಾಂತರಿ ತಳಿಯೇ ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ರೂಪಾಂತರಿ ವೈರಸ್‍ಗಳ ವಿರುದ್ಧ ಹೋರಾಡಲು ಕೊರೋನಾ ಲಸಿಕೆಗಳಲ್ಲಿ ಆಗಿಂದಾಗ್ಗೇ ಬದಲಾವಣೆಗಳನ್ನು ಮಾಡಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಮಧ್ಯೆ ಡಬಲ್ ಮ್ಯೂಟೆಂಟ್ ಕೊರೊನಾ ವೈರಸ್ ಅನ್ನು ಕೊವ್ಯಾಕ್ಸಿನ್ ಸಮರ್ಥವಾಗಿ ತಡೆಯುತ್ತೆ ಎಂದು ಐಸಿಎಂಆರ್ ಪ್ರಕಟಿಸಿದೆ. ಬ್ರಿಟನ್, ಬ್ರೆಜಿಲ್, ದಕ್ಷಿಣ ಆಫ್ರಿಕಾ ಕೊರೋನಾ ವೈರಸ್‍ಗಳನ್ನು ಬಂಧಿಸಿ, ಸಂಯೋಜಿಸಿ ಲಸಿಕೆ ರೂಪಿಸಲಾಗಿದೆ. ಹೀಗಾಗಿ ಕೊವ್ಯಾಕ್ಸಿನ್ ಡಬಲ್ ಮ್ಯೂಟೆಂಟ್ ವೈರಸ್ ವಿರುದ್ಧ ಕೂಡ ಸಮರ್ಥವಾಗಿ ಕೆಲಸ ಮಾಡುತ್ತದೆ ಎಂದು ಐಸಿಎಂಆರ್ ತಿಳಿಸಿದೆ.

Leave a Reply