ದೇವಸ್ಥಾನಕ್ಕೆ ಬಂದ ಮುಸ್ಲಿಂ ಬಾಲಕ – ಬಲಗೈ ತಿರುಚಿ ಹಲ್ಲೆ

– ನೀರು ಕುಡಿಯಲು ದೇವಸ್ಥಾನಕ್ಕೆ ಬಂದಿದ್ದ ಬಾಲಕ

ನವದೆಹಲಿ: ದೇವಸ್ಥಾನಕ್ಕೆ ನೀರು ಕುಡಿಯಲು ಬಂದ ಮುಸ್ಲಿಂ ಬಾಲಕನ ಮೇಲೆ ಹಲ್ಲೆ ಮಾಡಿದ್ದವನನ್ನು ಘಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ನಂದನ್ ಯಾದವ್ ಆಗಿದ್ದಾನೆ. ನಂದನ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಮೂಲತಃ ಬಿಹಾರದ ಭಾಗಲ್‍ಪುರ್‍ದವನಾಗಿದ್ದಾನೆ. ಸಮಾಜ ವಿರೋಧಿ ಕೃತ್ಯದಲ್ಲಿ ತೊಡಗುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಘಾಜಿಯಾಬಾದ್ ಎಸ್‍ಪಿ ಕಲಾನಿಧಿ ನೈಥಾನಿ ಹೇಳಿದ್ದಾರೆ.

14 ವರ್ಷದ ಮುಸ್ಲಿಂ ಹುಡುಗನೊಬ್ಬ ಬಾಯಾರಿಕೆಯೆಂದು ನೀರು ಕುಡಿಯಲು ದೇವಸ್ಥಾನದ ಒಳಗೆ ಬಂದಿದ್ದ. ನೀನು ಯಾರು? ನಿನ್ನ ಹೆಸರೇನು? ದೇವಸ್ಥಾನದ ಒಳಗೆ ಯಾಕೆ ಬಂದೆ ಎಂದು ಕೇಳಿದ್ದಾನೆ. ಹುಡುಗನ ಬಲಗೈ ತಿರುಚಿ ಹಲ್ಲೆ ಮಾಡಿದ್ದಾನೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುವುದರ ಜೊತೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ತಕ್ಷಣ ಎಚ್ಚರಿತುಕೊಂಡ ಪೊಲೀಸ್ ಹಲ್ಲೆ ಮಾಡಿದ ಯುವಕನನ್ನು ಬಂಧಿಸಿದ್ದಾರೆ.

ನಂದನ್ ಯಾದವ್ ಹಲವು ತಿಂಗಳುಗಳಿಂದ ದೇವಸ್ಥಾನದಲ್ಲಿಯೇ ಉಳಿದುಕೊಂಡಿದ್ದ. ಈತ ನೀರಿದ್ಯೋಗಿ ಎಂದು ಸ್ಥಳೀಯರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *