ದೇವರಕೊಂಡ ಜೊತೆಗಿರುವ ಫೇವರಿಟ್ ಫೋಟೋ ಶೇರ್ ಮಾಡಿದ ರಶ್ಮಿಕಾ

ಮುಂಬೈ: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ರೌಡಿ ನಟ ವಿಜಯ್ ದೇವರಕೊಂಡ ಜೊತೆಗಿರುವ ತಮ್ಮ ಮೆಚ್ಚಿನ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವ ರಶ್ಮಿಕಾ ಮಂದಣ್ಣ, ಶೂಟಿಂಗ್ ಮಧ್ಯೆ ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಂವಹನ ನಡೆಸಿದ್ದಾರೆ.

ರಶ್ಮಿಕಾ ಮಂದಣ್ಣರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ನೀವು, ವಿಜಯ್ ದೇವರಕೊಂಡ ಜೊತೆ ಕ್ಲಿಕ್ಕಿಸಿಕೊಂಡ ಫೇವರೇಟ್ ಫೋಟೋವನ್ನು ಶೇರ್ ಮಾಡುವಂತೆ ಕೇಳಿದ್ದಾರೆ. ಆಗ ರಶ್ಮಿಕಾ ಮಂದಣ್ಣ ಒಂದು ಚೂರು ಸಮಯವಕಾಶ ತೆಗೆದುಕೊಳ್ಳದೇ ಇಬ್ಬರು ಒಟ್ಟಿಗಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಕೊಚ್ಚಿಯಲ್ಲಿ ಡಿಯರ್ ಕಾಮ್ರೇಡ್ ಸಿನಿಮಾದ ಮ್ಯೂಸಿಕಲ್ ಫೆಸ್ಟ್ ನಡೆಯುತ್ತಿದ್ದ ವೇಳೆ ಈ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರಿಗೂ ಅಪಾರ ಅಭಿಮಾನಿ ಬಳಗವಿದ್ದು, ಗೀತಾ ಗೋವಿದಂ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ನಂತರ ಇಬ್ಬರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ನಂತರ ನಮ್ಮಿಬ್ಬರು ಉತ್ತಮ ಸ್ನೇಹಿತರು ಎಂದು ಹೇಳುವ ಮೂಲಕ ಗಾಳಿ ಸುದ್ದಿಗೆ ಇಬ್ಬರು ಬ್ರೇಕ್ ಹಾಕಿದರು. ಇದನ್ನೂ ಓದಿ: ಸಂಚಾರಿ ವಿಜಯ್‍ಗೆ ಗೌರವ ಸಲ್ಲಿಸಿದ ಅಮೆರಿಕದ ಫ್ರಾಂಕ್ಲಿನ್ ಥಿಯೇಟರ್

Comments

Leave a Reply

Your email address will not be published. Required fields are marked *