ದೇವತೆ ನಾನು ನಾನು ಎಂದು ಕಿತ್ತಾಡಿಕೊಂಡ ನಿಧಿ, ಶುಭಾ

ಬಿಗ್‍ಬಾಸ್ ಮನೆಯಲ್ಲಿ ನಿಧಿ, ಶುಭಾ ಒಳ್ಳೆಯ ಸ್ನೇಹಿತರು ಎಂಬುದು ಗೊತ್ತಿರುವ ವಿಷಯವಾಗಿದೆ. ಆದರೆ ದೇವತೆ ನಾನು ನಾನು ಎಂದು ಕಿತ್ತಾಡಿಕೊಂಡಿದ್ದಾರೆ.

ಸೊಳ್ಳೆ, ನೊಣ, ಒಳಗಡೆ ಎಸಿ ಎಲ್ಲಿಯೂ ಕುಳಿತುಕೊಳ್ಳಲು ಆಗಲ್ಲ ಎಂದು ನಿಧಿ ಹೇಳಿದ್ದಾರೆ. ಆಗ ಶುಭಾ ಹೌದು ಎಂದಿದ್ದಾರೆ. ಎಲ್ಲೋದ್ರು ಶುಭಾ ಕಾಟ ಎಂದು ನಿಧಿ ಹೇಳಿದ್ದಾರೆ. ಆಗ ಮಧ್ಯಪ್ರವೇಶಿಸಿದ ಮಂಜು ಇಬ್ಬರು ಏನು ಹೊಡೆದುಕೊಳ್ಳುವ ಮಟ್ಟಿಗೆ ಜಗಳ ಮಾಡಿಕೊಳ್ಳುತ್ತಿರುತ್ತೀರಾ? ಎಂದು ಹೇಳಿದ್ದಾರೆ. ನಾವು ಪ್ರತಿನಿತ್ಯ ಜಗಳ ಆಡುತ್ತೇವೆ ಎಂದಿದ್ದಾರೆ. ಆಗ ಮತ್ತೇ ಶುಭಾ, ನಿಧಿ ಜಗಳವಾಡಲು ಪ್ರಾರಂಭಿಸಿದ್ಧಾರೆ.

ಹೌದು ನಿಧಿ ನನಗೆ ಇರಿಟೇಟ್ ಮಾಡುತ್ತಾಳೆ ಎಂದು ಶುಭಾ ಹೇಳುವಾಗ ನಿಧಿ ಹೌದು ನಿನಗೆ ಹೋಲಿಸಿದರೆ ನಾನು ದೇವತೆ ಎಂದಿದ್ದಾರೆ. ಆಗ ಶುಭಾ ನಾನು ದೇವತೆ ಎಂದಿದ್ದಾರೆ. ಬೇರೆ ವಿಧಿ ಇಲ್ಲ ಅಂತಾ ನಿನ್ನ ಜೊತೆಗೆ ಇದ್ದೇನೆ ಎಂದು ನಿಧಿ ಹೇಳಿದ್ದಾರೆ. ಆಗ ಶುಭಾ ಬೇಕಾಗಿಲ್ಲ ಹೋಗು ನಿನಗೆ ಯಾರು ಜೊತೆಯಲ್ಲಿ ಇರು ಎಂದು ಹೇಳಿದ್ದರು ಎಂದು ಶುಭಾ ಹೇಳಿದ್ದಾರೆ.

ಬೇರೆಯವರ ಬಗ್ಗೆ ನೀನು ಜೋಕ್ ಮಾಡುತ್ತೀಯಾ ಆದರೆ ನಿನ್ನ ಬಗ್ಗೆ ಯಾರು ಜೋಕ್ ಮಾಡಬಾರದು ಎಂದು ನಿಧಿ ಹೇಳಿದಾಗ ಶುಭಾ ಇಲ್ಲ ನನಗೆ ನೀನು ತುಂಬಾ ಇರಿಟೇಟ್ ಮಾಡುತ್ತೀಯಾ ಎಂದು ಹೇಳಿದ್ದಾರೆ. ಹೀಗೆ ಇಬ್ಬರು ಮಾತಿಗೆ ಮಾತು ಆಡಿಕೊಂಡು ತುಂಬಾ ಕ್ಯೂಟ್ ಆಗಿ ಜಗಳ ಮಾಡಿಕೊಂಡಿದ್ದಾರೆ. ನಿಧಿ, ಶುಭಾ ಮೊದಲದಿನದಿಂದಲೂ ತಮ್ಮ ಕ್ಯೂಟ್‍ನೆಸ್ ಮೂಲಕವಾಗಿಯೇ ಸುದ್ದಿಯಾಗುತ್ತಿರುವ ಸ್ಪರ್ಧಿಗಳಾಗಿದ್ದಾರೆ.

Comments

Leave a Reply

Your email address will not be published. Required fields are marked *