ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ಕಳೆದ ಒಂದು ವಾರದಿಂದ ಸಚಿವ ಸಂಪುಟದ ಮಾತು ಸಾರ್ವಜನಿಕ ವಲಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಯಾರಿಗೆಲ್ಲಾ ಮಂತ್ರಿಗಿರಿ ಸಿಗಲಿದೆ ಎಂಬ ಚರ್ಚೆ ಜೋರಾಗಿರುವ ಬೆನ್ನಲ್ಲೆ ಕೋಟೆನಾಡಿನ ಹಿರಿಯ ಶಾಸಕ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜಿ.ಹೆಚ್.ತಿಪ್ಪಾರೆಡ್ಡಿ ದೆಹಲಿಯಲ್ಲಿ ಮಂತ್ರಿಗಿರಿಗಾಗಿ ಭಾರೀ ಕಸರತ್ತು ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ 5 ಬಾರಿ ಶಾಸಕರಾಗಿ ಒಂದು ಬಾರಿ ವಿಧಾನ ಪರಿಷತ್ ಪ್ರವೇಶ ಪಡೆದಿದ್ದಾರೆ. ತಿಪ್ಪಾರೆಡ್ಡಿ ಅನೇಕ ಬಾರಿ ಶಾಸಕರಾದರೂ ಕೂಡ ರಾಜ್ಯದಲ್ಲಿ ತಿಪ್ಪಾರೆಡ್ಡಿ ಅವರ ವಿರೋಧ ಪಕ್ಷದ ಸರ್ಕಾರ ರಚನೆಯಾಗಿತ್ತು, ಆದರೆ ಕಳೆದ ಬಾರಿ ಅವರದೇ ಸರ್ಕಾರ ರಚನೆಯಾದರೂ ಕೂಡ ವಲಸಿಗರಿಗೆ ಅವಕಾಶ ಎಂಬ ನೆಪವೊಡ್ಡಿ ಯಡಿಯೂರಪ್ಪ ಕಳೆದ ಬಾರಿ ತಿಪ್ಪಾರೆಡ್ಡಿ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಮೂಲಕ ಸಮಾಧಾನಪಡಿಸಲು ಯತ್ನಿಸಿದ್ದರು.

ನಿಗಮ ಸ್ಥಾನವನ್ನು ತಿಪ್ಪಾರೆಡ್ಡಿ ಅವರು ಮಾತ್ರ ನೇರವಾಗಿ ತಿರಸ್ಕಾರ ಮಾಡಿದ್ದರು. ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರು ಕೆ.ಎಸ್.ಆರ್.ಡಿಸಿ ನಿಗಮ ಪಡೆದಿದ್ದರು. ತಿಪ್ಪಾರೆಡ್ಡಿಯವರು ಮಾತ್ರ ನಾನು ಸಚಿವರಾಗಬೇಕು ಎಂದು ಪಟ್ಟು ಹಿಡಿದಿದ್ದ ಕಾರಣ ಯಡಿಯೂರಪ್ಪ ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸಂಪುಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂಬ ಅಭಯ ನೀಡಿದ್ದರು. ಇದನ್ನೂ ಓದಿ:ಸಿದ್ದರಾಮಯ್ಯನವರ ಹೊಗಳಿಕೆ ನಮ್ಮ ಪಕ್ಷಕ್ಕೆ ಅಗತ್ಯ ಇಲ್ಲ: ಬಿ.ಸಿ.ಪಾಟೀಲ್
ಆದರೀಗ ಯಡಿಯೂರಪ್ಪ ಬದಲಾವಣೆಯಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ತಿಪ್ಪಾರೆಡ್ಡಿ ಉತ್ತಮ ಸಂಬಂಧ ಹೊಂದಿದ್ದಾರೆ. ಇದರ ಜೊತೆಗೆ ಜಿಲ್ಲೆಯಲ್ಲಿ ಹಿರಿಯರು ಮುಂದಿನ ಬಾರಿಗೆ 75 ವರ್ಷ ವಯೋಮಿತಿ ಮೀರಿದವರಿಗೆ ಅಧಿಕಾರ ಇಲ್ಲ ಎಂಬ ಬಿಜೆಪಿ ನಿಯಮದ ಅನ್ವಯ ಹಾಗೂ ಜಿಲ್ಲೆಯ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆ, ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ದೃಷ್ಟಿಯಿಂದ ಶ್ರೀರಾಮುಲು ಜೊತೆಗೆ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಅನುಭವದ ಜೊತೆಗೆ ಜಿಲ್ಲೆಯ ಸಮಸ್ಯೆಗಳನ್ನು ಅರಿತಿರುವ ತಿಪ್ಪಾರೆಡ್ಡಿಗೆ ಈ ಬಾರಿ ಮಣೆ ಹಾಕುತ್ತಾರೆ ಎಂಬ ನಂಬಿಕೆಯ ಜೊತೆಗೆ ತಿಪ್ಪಾರೆಡ್ಡಿ ಅವರು, ರಾಜ್ಯ ನಾಯಕರೊಂದಿಗೆ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರನ್ನು ಸಹ ಭೇಟಿ ಮಾಡಲು ಇದೇ ಮೊದಲ ಬಾರಿಗೆ ದೆಹಲಿಗೆ ಹಾರಿದ್ದು, ವರಿಷ್ಠರಿಗೆ ಜಿಲ್ಲೆಯ ಬಗ್ಗೆ ಮನವರಿಕೆ ಮಾಡಿಸಿ, ಈ ಬಾರಿ ಸಚಿವಗಿರಿ ಕೈ ತಪ್ಪದಂತೆ ನೋಡಿಕೊಳ್ಳುವ ಎಲ್ಲಾ ಪ್ರಕ್ರಿಯೆಯನ್ನು ದೆಹಲಿಯಲ್ಲಿ ಕುಳಿತು ಪಕ್ಕ ಮಾಡಿದ್ದು, ರಾಷ್ಟ್ರೀಯ ನಾಯಕರ ಗ್ರೀನ್ ಸಿಗ್ನಲ್ ಪಡೆದುಕೊಂಡು ಬರುತ್ತಾರೆ ಎಂಬ ಮಾತುಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆ ಆಗತೊಡಗಿದೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿರುವ ತಿಪ್ಪಾರೆಡ್ಡಿ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ತಾವು ಕೂಡ ಸಚಿವ ಸ್ಥಾನ ಪಡೆದು ಜಿಲ್ಲೆ ಹಾಗೂ ರಾಜ್ಯದ ಸೇವೆ ಮಾಡಬೇಕು ಎಂಬುದಾಗಿ ಆಸೆಯನ್ನು ಹೊಂದಿದ್ದೇನೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದೇನೆ. ಸಂಬಂಧ ಪಟ್ಟ ನಾಯಕರನ್ನು ಭೇಟಿ ಮಾಡಲಾಗಿದೆ. ರಾಷ್ಟ್ರೀಯ ನಾಯಕರು ಬಿಡುಗಡೆ ಮಾಡಲಿರುವ ಸಚಿವರ ಪಟ್ಟಿಯಲ್ಲಿ ನನ್ನ ಹೆಸರು ಕೂಡ ಇರುವ ಭರವಸೆ ನನಗಿದೆ. ಇಂದು ರಾತ್ರಿ ದೆಹಲಿಯಿಂದ ಹೊರಡಲಿದ್ದು, ಜಿಲ್ಲೆಗೆ ಈ ಬಾರಿ ಸಿಹಿಸುದ್ದಿ ತರುವ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಕೋವಿಡ್ ಬರೋಕೆ ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ: ಸಿದ್ದರಾಮಯ್ಯ

Leave a Reply