ದುಬೈನಲ್ಲಿ ಐಪಿಎಲ್- ವಾರದಲ್ಲಿ ಗವರ್ನಿಂಗ್ ಕೌನ್ಸಿಲ್ ಸಭೆ: ಬ್ರಿಜೇಶ್ ಪಟೇಲ್

ಮುಂಬೈ: ಮುಂದಿನ ಒಂದು ವಾರದ ಒಳಗೆ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಐಪಿಎಲ್ ಆಯೋಜನೆ, ಶೆಡ್ಯೂಲ್ ಕುರಿತು ಚರ್ಚೆ ನಡೆಸಲಾಗುವುದು ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

ಭಾರತದಲ್ಲಿರುವ ಸದ್ಯದ ಕೋವಿಡ್-19 ಪರಿಸ್ಥಿತಿ ಹಿನ್ನೆಲೆಯಲ್ಲಿ ದುಬೈನಲ್ಲಿ ಟೂರ್ನಿ ಆಯೋಜಿಸುವ ಅವಕಾಶವಿದೆ. 60 ಪಂದ್ಯಗಳ ಪೂರ್ಣ ಪ್ರಮಾಣದ ಟೂರ್ನಿ ನಡೆಸುವ ಪ್ರಯತ್ನ ನಡೆಸಲಾಗುತ್ತಿದೆ. ಇನ್ನು ಪ್ರೇಕ್ಷಕರಿಗೆ ಅನುಮತಿ ಇಲ್ಲದೇ ಟೂರ್ನಿ ಆಯೋಜಿಸುತ್ತಿದ್ದು, ಹೆಚ್ಚು ನಷ್ಟ ಎದುರಾಗುವುದಿಲ್ಲ. ಸಭೆ ಬಳಿಕ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಬ್ರಿಜೇಶ್ ಪಟೇಲ್ ಸ್ಪಷ್ಟಪಡಿಸಿದರು.

ಇತ್ತ ಐಪಿಎಲ್ 2020 ಲೀಗ್ ಆಯೋಜಿಸಲು ಯುಎಇ ಸಿದ್ಧವಿದೆ ಎಂಬ ಸುದ್ದಿ ಸಾಕಷ್ಟು ಸಮಯದಿಂದ ಕೇಳಿ ಬರುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ದುಬೈ ಸ್ಪೋರ್ಟ್ಸ್ ಸಿಟಿ ಮುಖ್ಯಸ್ಥ ಸಲ್ಮಾನ್ ಹನೀಫ್, 2020ರ ಐಪಿಎಲ್ ಟೂರ್ನಿ ಆಯೋಜಿಸಲು ದುಬೈ ಸಿದ್ಧವಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಐಸಿಸಿ ಅಕಾಡೆಮಿ ಸೇರಿದಂತೆ ಕ್ರೀಡಾಂಗಣದಲ್ಲಿ 9 ಪಿಚ್‍ಗಳಿವೆ. ಕಡಿಮೆ ಸಮಯದಲ್ಲಿ ಹೆಚ್ಚು ಪಂದ್ಯಗಳನ್ನು ನಡೆಸಿದರೆ ಹೆಚ್ಚು ನಷ್ಟ ಎದುರಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಐಸಿಸಿ ಕಾಂಪ್ಲೆಕ್ಸ್ ನಲ್ಲಿ ಅಭ್ಯಾಸ ನಡೆಸಲು 38 ನೆಟ್ ಪಿಚ್ ಲಭ್ಯವಿದೆ ಎಂದು ಹನೀಫ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *