ಬೀಜಿಂಗ್: ಉದ್ಯಮಿಯೊಬ್ಬರು ವಿಚ್ಛೇದನ ನೀಡಿದ ಪರಿಣಾಮ ಪತ್ನಿ ಈಗ ಏಷ್ಯಾದ ಶತಕೋಟ್ಯಧೀಶರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಚೀನಾದ ಶೆನ್ಜೆನ್ ನಗರದಲಿರುವ ಕಾಂಗ್ಟೈ ಬಯಲಾಜಿಕಲ್ ಪ್ರೊಡಕ್ಟ್ ಕಂಪನಿಯ ಮಾಲೀಕ ಡು ವೀಮಿನ್ 16.13 ಕೋಟಿ ಷೇರುಗಳನ್ನು ಪತ್ನಿ ಯುವಾನ್ ಲಿಪಿಂಗ್‍ಗೆ ವರ್ಗಾವಣೆ ಮಾಡಿದ್ದಾರೆ.

ಮೇ 29ರಂದು ಕಂಪನಿ ಷೇರು ಮಾರುಕಟ್ಟೆಗೆ ನೀಡಿದ ವಿವರದಲ್ಲಿ ಈ ಮಾಹಿತಿಯನ್ನು ನೀಡಿದ್ದರಿಂದ ಯುವಾನ್ ಲಿಪಿಂಗ್ ಈಗ ಶತಕೋಟ್ಯಧೀಶರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
3.2 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಹೊಂದಿರುವ 49 ವರ್ಷದ ಲಿಪಿಂಗ್ 2011ರ ಮೇ ತಿಂಗಳಿನಿಂದ 2018ರ ಆಗಸ್ಟ್ ವರೆಗೆ ಕಂಪನಿಯ ನಿರ್ದೇಶಕಿಯಾಗಿದ್ದರು.

ವಿಶ್ವದ ಅತ್ಯಂತ ದುಬಾರಿ ವಿಚ್ಛೇದನವನ್ನು ಅಮೆಜಾನ್ ಕಂಪನಿಯ ಜೆಫ್ ಬೆಜೋಸ್ ಪತ್ನಿ ಮೆಕೆಂಜಿ ಬೆಜೋಸ್ ಗೆ ನೀಡಿದ್ದಾರೆ. ವಿಚ್ಛೇದನ ಸಮಯದಲ್ಲಿ ಕಂಪನಿಯ ಶೇ.4 ರಷ್ಟು ಷೇರುಗಳನ್ನು ನೀಡಿದ್ದರು. 48 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಪಡೆಯುವ ಮೂಲಕ ವಿಶ್ವದ ಶತಕೋಟಿ ಮಹಿಳೆಯರ ಪಟ್ಟಿಯಲ್ಲಿ ಮೆಕೆಂಜಿ ನಾಲ್ಕನೇಯ ಸ್ಥಾನವನ್ನು ಪಡೆದಿದ್ದಾರೆ.

Leave a Reply