ದೀಪಾವಳಿ ಪೂಜೆ ಬಳಿಕ ಮನೆ ಲಕ್ಷ್ಮಿಯನ್ನ ಕೊಂದ ತಂದೆ-ಮಗ

– ಕೊಂದು ಬೆಡ್‍ಶೀಟ್ ನಲ್ಲಿ ಸುತ್ತಿ ಎಸೆದ್ರು
– ಎರಡೇ ದಿನದಲ್ಲಿ ಕಂಬಿ ಹಿಂದೆ ಆರೋಪಿಗಳು

ಜೈಪುರ: ದೀಪಾವಳಿಯ ಪೂಜೆ ಬಳಿಕ ಮನೆಯ ಲಕ್ಷ್ಮಿಯನ್ನ ಕೊಂದಿದ್ದ ತಂದೆ-ಮಗ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ನಾವು ಯಾರಿಗೂ ಸಿಗಲ್ಲ ಅಂತ ಓಡಾಡುತ್ತಿದ್ದ ತಂದೆ-ಮಗನನ್ನ ಪೊಲೀಸರು ಎರಡನೇ ದಿನದಲ್ಲಿ ಜೈಲಿಗಟ್ಟಿದ್ದಾರೆ. ರಾಜಸ್ಥಾನದ ರೇವಾಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

23 ವರ್ಷದ ಪೂಜಾ ಯಾದವ್ ಮಾವ ಮತ್ತು ಪತಿಯಿಂದ ಕೊಲೆಯಾದ ಮಹಿಳೆ. ಮಾವ ಲಕ್ಷ್ಮಣ್ ಯಾದವ್ ಮತ್ತು ಪತಿ ಆಶೀಷ್ ಯಾದವ್ ಮಾಡಿದ ತಪ್ಪಿಗೆ ಕತ್ತಲೆ ಕೋಣೆಯಲ್ಲಿ ಕುಳಿತು ಕಂಬಿಗಳ ಲೆಕ್ಕ ಹಾಕ್ತಿದ್ದಾರೆ. ಇದನ್ನೂ ಓದಿ:  ಜ್ಯೋತಿಷಿ ಮಾತು ಕೇಳಿ ಪತ್ನಿಗೆ ಕಿರುಕುಳ – ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ

ಪತ್ನಿ ತವರಿನವರು ಆಶೀಷ್ ಗೆ ಐದು ಲಕ್ಷ ರೂ. ನೀಡಬೇಕಿತ್ತು ಮತ್ತು ಆಶೀಷ್ ಗೆ ಪತ್ನಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ನವೆಂಬರ್ 14ರ ರಾತ್ರಿ ದೀಪಾವಳಿಯ ವಿಶೇಷ ಪೂಜೆ ಬಳಿಕ ಪತ್ನಿಯನ್ನ ತಂದೆ ಜೊತೆ ಸೇರಿ ಆಶೀಷ್ ಕೊಲೆ ಮಾಡಿದ್ದನು. ಕೊಲೆಯ ಬಳಿಕ ಮೃತದೇಹವನ್ನು ಬೆಡ್‍ಶೀಟ್ ನಲ್ಲಿ ಸುತ್ತಿ ಸೌತಾನಾವಾಲಾ ಸೇತುವೆ ಬಳಿ ಎಸೆದಿದ್ದರು. ಇದನ್ನೂ ಓದಿ: 7ನೇ ಮಹಡಿಯಲ್ಲಿರೋ ಪತಿ ಬೆಡ್ ರೂಮಿನಿಂದ ಜಿಗಿದ ನವ ವಿವಾಹಿತೆ

ನವೆಂಬರ್ 15ರಂದು ಪನಿಯಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿತ್ತು. ಶವದ ಕತ್ತಿನ ಭಾಗದಲ್ಲಿ ಗಾಯವಾಗಿದ್ದು ಕಂಡು ಬಂದಿತ್ತು. ಅಪರಿಚಿತ ಶವ ಎಂದು ದೂರು ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿರಿಸಿದ್ದರು. ನೇಣುಬಿಗಿದು ಕೊಲೆ ಮಾಡಿ ಶವ ಬಿಸಾಡಿರೋದು ಪೊಲೀಸರಿಗೆ ಮೃತದೇಹ ನೋಡಿದ ಕ್ಷಣವೇ ತಿಳಿದಿತ್ತು. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಖಾಡಕ್ಕೆ ಇಳಿದು ಎರಡೇ ದಿನದಲ್ಲಿ ಕೊಲೆ ರಹಸ್ಯ ಭೇದಿಸಿದ್ದಾರೆ. ಇದನ್ನೂ ಓದಿ: ವೀಡಿಯೋ ಮಾಡಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ– ಚಲಿಸುತ್ತಿರುವ ರೈಲಿನ ಮುಂದೆ ಹಾರಿದ್ರು

ಸೋಶಿಯಲ್ ಮೀಡಿಯಾ ಸಹಾಯ: ಮೃತದೇಹದ ಫೋಟೋ ಕ್ಲಿಕ್ಕಿಸಿ ಸುತ್ತಲಿನ ಜಿಲ್ಲೆಗಳ ಪೊಲೀಸ್ ಠಾಣೆಗೆ ರವಾನಿಸಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿರುವ ಬಗ್ಗೆ ಮಾಹಿತಿ ಕೇಳಿದ್ದರು. ಅಪರಿಚಿತ ಶವ ದೊರೆತಿರುವ ಬಗ್ಗೆ ಪತ್ರಿಕಾ ಪ್ರಕಟನೆ ಸಹ ಹೊರಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮೃತ ಮಹಿಳೆಯ ಫೋಟೋ ಅಪ್ಲೋಡ್ ಮಾಡಲಾಗಿತ್ತು. ಇದನ್ನೂ ಓದಿ: ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

ಮೃತ ಮಹಿಳೆಯ ಫೋಟೋ ಗಮನಿಸಿದ ಮಾಡೆಲ್ ಟೌನ್ ರೇವಾಡಿ ಪೊಲೀಸರು ತಮ್ಮ ಠಾಣೆಯಲ್ಲಿ ಪೂಜಾ ಯಾದವ್ ಎಂಬ ಮಹಿಳೆಯ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿರುವ ಮಹಿಳೆಯ ಶವ ಮತ್ತು ಪೂಜಾ ಯಾದವ್ ಹೋಲಿಕೆಯಲ್ಲಿ ಸಾಮ್ಯತೆ ಇರೋ ಬಗ್ಗೆ ಕಂಡು ಹಿಡಿದಿದ್ದರು. ಪೊನಿಯಾಲಾ ಪೊಲೀಸರು ಪೂಜಾ ಯಾದವ್ ಪೋಷಕರು ಕರೆಸಿದಾಗ ಮೃತದೇಹ ತಮ್ಮ ಮಗಳದ್ದು ಎಂದು ಗುರುತಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾದ 8 ದಿನಕ್ಕೆ ನವ ವಿವಾಹಿತೆ ಆತ್ಮಹತ್ಯೆ– ಹಬ್ಬಕ್ಕೆ ಕರ್ಕೊಂಡು ಬರಲು ಹೋದಾಗ ರಹಸ್ಯ ಬಯಲು

ಇನ್ನು ಪೂಜಾ ಯಾದವ್ ಪತಿ ಮತ್ತು ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ಇತ್ತ ಪೂಜಾ ಯಾದವ್ ಶವವನ್ನು ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ನವ ವಿವಾಹಿತೆ ತಾಳಿ, ಕಾಲುಂಗುರ ತೆಗೆಸಿದ ಪೊಲೀಸ್ರು?

Comments

Leave a Reply

Your email address will not be published. Required fields are marked *