ದೀಪಗಳನ್ನು ಬೆಳಗಿಸಿ ಯೋಧರಿಗೆ ಕೃತಜ್ಞತೆ ಸಲ್ಲಿಸೋಣ: ಮೋದಿ

– ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ

ನವದೆಹಲಿ: ನಾಡಿನೆಲ್ಲೆಡೆ ಇಂದು ನರಕಚತುರ್ದಶಿಯ ಸಂಭ್ರಮ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ಈ ಬೆಳಕಿನ ಹಬ್ಬದಂದು ದೇಶ ಕಾಯುವ ನಮ್ಮ ಯೋಧರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ದೀಪಗಳನ್ನು ಬೆಳಗಿಸೋಣ ಎಂದು ಕರೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ನಿಮಗೆಲ್ಲರಿಗೂ ಈ ಬೆಳಕಿನ ಹಬ್ಬವು ಮತ್ತಷ್ಟು ಬೆಳಕು ಹಾಗೂ ಸಂತೋಷವನ್ನು ನೀಡಲಿ. ಸಮೃದ್ಧ ಹಾಗೂ ಆರೋಗ್ಯವಾಗಿರಿ ಎಂದು ಆಶಿಸುವುದಾಗಿ ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ವೀಡಿಯೋ ಮೂಲಕ ಟ್ವೀಟ್ ಮಾಡಿರುವ ಮೋದಿ, ಈ ಬಾರಿಯ ದೀಪಾವಳಿ ಹಬ್ಬದಂದು ನಮ್ಮ ದೇಶವನ್ನು ಕಾಯುವ ವೀರ ಸೈನಿಕರಿಗೆ ಸೆಲ್ಯೂಟ್ ಹೊಡೆಯಲು ದೀಪಗಳನ್ನು ಬೆಳಗಿಸಿ. ಈ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಿ. ಗಡಿಯಲ್ಲಿ ನಿರ್ಭಯದಿಂದ ದೇಶವನ್ನು ಕಾಯುತ್ತಿರುವ ಯೋಧರ ಬಗ್ಗೆ ಪದಗಳಲ್ಲಿ ವರ್ಣಿಸಲು ಅಸಾಧ್ಯ. ಗಡಿ ಕಾಯುತ್ತಿರುವ ಯೋಧರ ಕುಟುಂಬಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಬರೆದುಕೊಂಡಿದ್ದರು.

ಬೆಳಕಿನ ಹಬ್ಬದ ಸಂದರ್ಭದಲ್ಲಿ ಗಡಿ ಕಾಯುತ್ತಿರುವ ಯೋಧರನ್ನು ನಾವು ನೆನಪಿಸಿಕೊಳ್ಳಲೇಬೇಕು. ಭಾರತ ಮಾತೆಗಾಗಿ ಸೇವೆ ಸಲ್ಲಿಸಿ, ಅವರು ನಮಗೆ ರಕ್ಷಣೆ ನೀಡುತ್ತಿದ್ದಾರೆ. ಈ ವೀರ ಯೋಧರನ್ನು ನೆನಪಿಸಿಕೊಂಡ ಬಳಿಕ ನಾವು ದೀಪಾವಳಿ ಹಬ್ಬವನ್ನು ಆಚರಿಸಬೇಕು ಎಂದು ಮೋದಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *