ದಿ ಗ್ರೇಟ್ ಖಲಿಗೆ ಮಾತೃ ವಿಯೋಗ

ಶಿಮ್ಲಾ: WWE ಚಾಂಪಿಯನ್‍ಶಿಪ್‍ನ ಖ್ಯಾತ ಕುಸ್ತಿ ಪಟು ದಿ ಗ್ರೇಟ್ ಖಲಿ ಅವರ ತಾಯಿ ತಾಂಡಿ ದೇವಿ ಬಹು ಅಂಗಾಂಗ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ.

ಖಲಿ ಅವರ ತಾಯಿ ತಾಂಡಿ ದೇವಿ ಅವರಿಗೆ 75 ವರ್ಷ ವಯಸ್ಸಾಗಿತ್ತು. ಕಳೆದ ಎರಡು ವರ್ಷಗಳಿಂದ ಉಸಿರಾಟ ತೊಂದರೆ ಮತ್ತು ಹಲವು ಖಾಯಿಲೆಗಳಿಂದ ಬಳಲುತ್ತಿದ್ದರು. ಬಳಿಕ ಕಳೆದ ವಾರ ತೀವ್ರ ಅನಾರೋಗ್ಯಕ್ಕೀಡಾಗಿ ಲುಧಿಯಾನಾದ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಬಹು ಅಂಗಾಂಗದಿಂದಾಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವಿವಾಹ ಸಮಾರಂಭದಲ್ಲಿ ಖಲಿ ನೋಡಲು ಸಾವಿರಾರು ಮಂದಿ- ಕೊರೊನಾ ರೂಲ್ಸ್ ಬ್ರೇಕ್

ಮೂಲತಃ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ, ಧಿರೈನಾ ಗ್ರಾಮದವರಾದ ಖಲಿ ಅವರ ತಾಯಿ ತಾಂಡಿ ದೇವಿಯ ಅಂತ್ಯ ಸಂಸ್ಕಾರ ಧಿರೈನಾ ಗ್ರಾಮದಲ್ಲೇ ಇಂದು ನಡೆಯಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದ ‘ದಿ ಗ್ರೇಟ್’ ಖಲಿ

ದಾಲಿಪ್ ಸಿಂಗ್ ರಾಣಾ ಅಲಿಯಾಸ್ ಖಲಿ, 2000 ಇಸವಿಯಲ್ಲಿ ವೃತ್ತಿಪರ ಕುಸ್ತಿಗೆ ಪ್ರವೇಶ ಮಾಡಿದ್ದರು. ಈ ಮೊದಲು ಪಂಜಾಬ್ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದಾದ ಬಳಿಕ WWEನಲ್ಲಿ 2007ರಲ್ಲಿ ಜಾನ್ ಸಿನ ಅವರೊಂದಿಗೆ ಸೆಣಸಾಡಿ ಚಾಂಪಿಯನ್ ಎನಿಸಿಕೊಂಡಿದ್ದರು. ಇದರೊಂದಿಗೆ ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲೂ ಕೂಡ ಖಲಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್‍ನ 4 ಸಿನಿಮಾ ಮತ್ತು ಬಾಲಿವುಡ್‍ನ 2 ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಖಲಿ, 2021ರ WWE ವಾಲ್ ಆಫ್ ಫೇಮ್‍ಗೆ ಆಯ್ಕೆಯಾಗಿದ್ದಾರೆ.

Comments

Leave a Reply

Your email address will not be published. Required fields are marked *