ಮಾತಿನ ಮಧ್ಯೆ ಮೂಗು ತೂರಿಸಿದ ದಿವ್ಯಾ ಸುರೇಶ್‍ಗೆ ತರಾಟೆ ತೆಗೆದುಕೊಂಡ ಅರವಿಂದ್!

ಬಿಗ್‍ಬಾಸ್ ನೀಡಿದ್ದ ಗರ್ಲ್ಸ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಟಾಸ್ಕ್ ನಲ್ಲಿ ನಡೆದಿದ್ದ ಮೋಸದಿಂದ ಮನೆಯ ಸದಸ್ಯರು ನಿಧಿ, ಮಂಜು, ದಿವ್ಯಾ ಸುರೇಶ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ನಿನ್ನೆ ಮನೆಯಲ್ಲಿ ಕಳಪೆ ಸದಸ್ಯರನ್ನು ಆಯ್ಕೆ ಮಾಡುವ ವೇಳೆ, ಅರವಿಂದ್ ಹಾಗೂ ದಿವ್ಯಾ ಸುರೇಶ್ ಮಧ್ಯೆ ವಾಗ್ವಾದ ನಡೆದಿದೆ. ಮಂಜು ಗರ್ಲ್ಸ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಟಾಸ್ಕ್ ವೇಳೆ ನಾನು ಮಾಡಿದ್ದು ತಪ್ಪು. ನಾನು ನನ್ನ ತಪ್ಪನ್ನು ಹಾನೆಸ್ಟ್ ಆಗಿ ಒಪ್ಪಿಕೊಳ್ಳುತ್ತಿದ್ದೇನೆ. ನಾನು ಆಡಿದ ಆಟ ಸರಿಯಾಗಿರಲಿಲ್ಲ. ದಯವಿಟ್ಟು ಎಲ್ಲರೂ ಕ್ಷಮಿಸಿ. ಇನ್ನೂ ಮುಂದೆ ಆ ರೀತಿ ಆಟ ಆಡುವುದಿಲ್ಲ. ಈಗಾಗಲೇ ನಾನು ತುಂಬಾ ಕೊರಗಿದ್ದೀನಿ, ತುಂಬಾ ಅನುಭವಿಸುತ್ತಿದ್ದೇನೆ. ಇದರ ಮೇಲೆ ಹೆಚ್ಚಿಗೆ ಏನು ಹೇಳುವುದಕ್ಕೆ ಆಗುವುದಿಲ್ಲ ಎಂದು ಎಲ್ಲರಿಗೂ ಹೇಳುತ್ತಾರೆ. ಈ ವೇಳೆ ಮಂಜು ಮಾತು ಕೇಳಿ ಮನೆಯ ಮಂದಿ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಆದರೆ ಅರವಿಂದ್ ಮಾತಿನಲ್ಲಿ ಹೇಳುವುದರಿಂದ ನಮಗೆ ಆ ಫೀಲಿಂಗ್ ಇನ್ನೂ ಬರುವುದಿಲ್ಲ. ನಾನು ಸತ್ಯವಾಗಿ ಹೇಳುತ್ತೇನೆ ಸರಿಹೋಗುವುದಕ್ಕೆ ನನಗೆ ತುಂಬಾ ಸಮಯ ಬೇಕಾಗುತ್ತದೆ. ನಾನು ನಿನ್ನನ್ನು ಅಷ್ಟು ನಂಬಿದ್ದೇನೆ ಎಂದರೆ ಅದಕ್ಕೆ ತುಂಬಾ ತೂಕವಿರುತ್ತದೆ ಎಂದು ಹೇಳುತ್ತಾರೆ. ಆಗ ಮಂಜು ಒಂದು ಕ್ಷಣ, ಒಂದು ನಿಮಿಷ ಗೊತ್ತಿಲ್ಲದೇ ನಾನು ತಪ್ಪು ಮಾಡಿಬಿಟ್ಟಿದ್ದೇನೆ. ಅದೊಂದು ಯಾವಾಗ ಆಗ ಬಾರದಿತ್ತೋ ಆಗ ಆಗಿದೆ ಎಂದು ಅರವಿಂದ್ ಹೇಳುವ ವೇಳೆ ದಿವ್ಯಾ ಸುರೇಶ್, ಮಂಜುವನ್ನು ಮಾತನಾಡಿ ಮುಗಿಸಲು ಬಿಡಿ ಎಂದು ಹೇಳುತ್ತಾರೆ.

ಆಗ ಅರವಿಂದ್ ಅವನು ನನ್ನ ಹತ್ತಿರ ಮಾತನಾಡುತ್ತಿದ್ದಾನೆ. ನೀನು ಸುಮ್ಮನೆ ಇರಮ್ಮ ಎರಡು ನಿಮಿಷ, ನಾನು ಅವನು ಮಾತನಾಡುತ್ತಿದ್ದರೆ ನೀನಗೇನು ತೊಂದರೆಯಾಗುತ್ತಿದೆ. ನೀನು ಮಾತನಾಡಬೇಕು ಅಂದರೆ ಮಾತ್ರ ನನ್ನ ಜೊತೆ ಮಾತನಾಡು, ಅವನು ಮಾತನಾಡಬೇಕು ಅನಿಸಿದರೆ ಅವನು ಮಾತನಾಡುತ್ತಾನೆ ಎನ್ನುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ಅಲ್ಲ ಒಬ್ಬರು ಮಾತನಾಡುವಾಗ ಕೇಳಿಸಿಕೊಳ್ಳೋಣ ಅಂತ ಹೇಳುತ್ತಾರೆ.

 

ಬಳಿಕ ಅರವಿಂದ್ ಕೋಪದಿಂದ ಅವನು ನನ್ನ ಫ್ರೆಂಡೇ, ನಾನು ಅವನು ಫ್ರೆಂಡೇ ನಾವು ಮಾತನಾಡುತ್ತಿದ್ದೀವಿ ಅಲ್ವಾ. ನೀನು ಸುಮ್ಮನೆ ಕೂರು ಎಂದು ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *