ದಿವ್ಯಾ ಸುರೇಶ್‍ನ ಇಷ್ಟಪಡ್ತಿದ್ದೀನೆಂದು ಮನಸಾರೆ ಹೇಳಿದ ಮಂಜು

ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ದಿನಗಳು ಮುಂದೆ ಹೋಗುತ್ತಿದ್ದಂತೆ ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಕಾಲಕಳೆಯುತ್ತಿದ್ದಾರೆ. ಈ ನಡುವೆ ಕೆಲ ಸ್ಪರ್ಧಿಗಳಿಗೆ ಕೆಲವರಲ್ಲಿ ಪ್ರೀತಿ ಚಿಗುರೊಡೆದಿದೆ. ಇದೇ ಸಾಲಿನಲ್ಲಿ ಮಂಜು ಅವರು ಕೂಡ ದಿವ್ಯಾ ಸುರೇಶ್ ರನ್ನು ಕಂಡು ಮನಸಾರೆ ಇಷ್ಟಪಡುತ್ತಿದ್ದೇನೆಂದು ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ.

ಶುಭಾ, ಮಂಜು ಬಳಿ ಬಂದು ನೀನು ನನ್ನ ಹಾಗೆ ಮನಸ್ಥಿತಿಯವನು, ನಿನಗೆ ಬೇರೊಬ್ಬರೊಂದಿಗೆ ಯಾವುದನ್ನು ಮುಚ್ಚಿಡಲು ಆಗುವುದಿಲ್ಲ. ಹಾಗಾಗಿ ನಿನ್ನ ಬಳಿ ಒಂದು ಪ್ರಶ್ನೆ ಕೇಳುತ್ತೇನೆ. ಪ್ರಾಮಾಣಿಕವಾಗಿ ಉತ್ತರ ಕೊಡು ಎಂದು ಉಪಾಯದಿಂದ ನಿನಗೆ ದಿವ್ಯಾ ಸುರೇಶ್ ಮೇಲೆ ನಿಜವಾಗಿಯೂ ಲವ್ ಆಗಿಲ್ವ, ಅವಳನ್ನು ಇಷ್ಟಪಡುತ್ತೀಯಾ ಎಂದು ಕೇಳಿದ್ದಾರೆ.

ಶುಭಾ ಅವರ ಪ್ರಶ್ನೆಗೆ ಉತ್ತರಿಸಿದ ಮಂಜು 100% ಇಷ್ಟಪಡುತ್ತೇನೆ. ಆದರೆ ಆ ರೀತಿಯಲ್ಲ. ಕೆಲವೊಮ್ಮೆ ಅನಿಸುತ್ತದೆ ಆದರೆ ಅದು ನಿಜಜೀವನದಲ್ಲಿ ಆಗಲ್ಲ ಅನಿಸುತ್ತೆ. ಒಂದೊಮ್ಮೆ ಆಕೆಯೊಂದಿಗೆ ನಾನು ಪ್ರೀತಿ ವಿಷಯವಾಗಿ ಮಾತನಾಡಿದ್ದೆ. ಆಗ ದಿವ್ಯ ತನ್ನ ಕಷ್ಟಗಳನ್ನು ನನ್ನೊಂದಿಗೆ ಹೇಳಿಕೊಂಡಿದ್ದಾಳೆ. ಆಕೆ ಜೀವನದಲ್ಲಿ ತುಂಬಾ ನೊಂದಿದ್ದಾಳೆ. ಆಕೆಗೆ ನನ್ನಂತಹ ಒಬ್ಬ ಉತ್ತಮ ಸ್ನೇಹಿತ ಬೇಕಾಗಿದ್ದಾನೆ ಎಂದು ಅವಳ ಅಭಿಪ್ರಾಯವಾಗಿತ್ತು. ಹಾಗಾಗಿ ಅವಳೊಂದಿಗೆ ಸ್ನೇಹಿತನಾಗಿರುತ್ತೇನೆ. ಅವಳು ನನ್ನನ್ನು ತುಂಬಾ ಅರ್ಥ ಮಾಡಿಕೊಂಡಿದ್ದಾಳೆ. ಅದು ನನಗೆ ಖುಷಿ ಎಂದು ಶುಭಾ ಜೊತೆ ಮಂಜು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಬಿಗ್‍ಮನೆಯಲ್ಲಿ ಇರುವಷ್ಟು ದಿನ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಂಡಾಗ ಇಷ್ಟಪಡುವುದು ಸಹಜ. ಆದರೆ ಅದು ಮುಂದಿನ ದಿನಗಳಲ್ಲಿ ಯಾವ ರೀತಿ ಮುಂದುವರಿಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *