ದಿವ್ಯಾ, ಧನುಶ್ರೀ ಟಫ್ ಫೈಟ್ ನೋಡಿ ಬಿಗ್‍ಬಾಸ್ ಮಂದಿ ಶಾಕ್

ಬೆಂಗಳೂರು: ಬಿಗ್ ಬಾಸ್ ಮನೆಯ 5ನೇ ದಿನದಂದು ಸ್ಪರ್ಧಿಗಳಿಗೆ ಬಿಗ್‍ಬಾಸ್ 6ನೇ ಚಾಲೆಂಜ್ ಟಾಸ್ಕ್ ನೀಡಿದ್ದರು. ಅದರ ಅನುಸಾರ ಗಾರ್ಡನ್ ಏರಿಯಾದಲ್ಲಿ ನಿರ್ಮಿಸಿದ್ದ ಚಟುವಟಿಕೆಯಲ್ಲಿ ಭಾಗವಹಿಸುವ ಸದಸ್ಯರು ಕೋರ್ಟ್‍ನ ಎರಡು ಬದಿಯಲ್ಲಿ ನಿಂತು, ಕೋರ್ಟ್ ಮಧ್ಯಭಾಗದಲ್ಲಿ ಬಾಲ್ ಇರಿಸಲಾಗಿತ್ತು. ಪ್ರತಿ ಸಲ ಬಜರ್ ಆದಾಗ ಸದಸ್ಯರು ಕೋರ್ಟ್ ಬದಿಯಿಂದ ಓಡಿ ಬಂದು ಬಾಲ್ ತೆಗೆದುಕೊಂಡು ತಮ್ಮ ಎದುರುಗಡೆಯಿರುವ ಬಾಸ್ಕೆಟ್‍ನಲ್ಲಿ ಹಾಕಬೇಕಿತ್ತು. ಹೀಗೆ 5 ಪ್ರಯತ್ನಗಳಲ್ಲಿ ಯಾರು ಹೆಚ್ಚು ಬಾಲ್‍ಗಳನ್ನು ಬಾಸ್ಕೆಟ್ ಒಳಗೆ ಹಾಕುತ್ತಾರೋ ಅವರು ಈ ಚಟುವಟಿಕೆಯ ವಿಜೇತರಾಗಿರುತ್ತಾರೆ ಹಾಗೂ ಸೋತವರು ನಾಮಿನೇಟ್ ಆಗುತ್ತಾರೆ ಎಂದು ತಿಳಿಸಿದ್ದರು.

ಧನುಶ್ರೀ ಈ ಆಟವನ್ನು ದಿವ್ಯಾ ಸುರೇಶ್‍ಗೆ ಚಾಲೆಂಜ್ ಮಾಡಿದ್ದರು. ಅದರಂತೆ ಸ್ಪರ್ಧೆಯಲ್ಲಿ ದಿವ್ಯಾ ಸುರೇಶ್ ಹಾಗೂ ಧನುಶ್ರೀ ಭಾಗವಹಿಸಿದರು. ಟಾಸ್ಕ್‍ನ ಆರಂಭದಲ್ಲಿಯೇ ಫೋಲ್ ಆಯಿತು. ಬಳಿಕ ಮೊದಲನೇ ಬಜರ್‍ನಲ್ಲಿ ಧನು ಶ್ರೀ ಬಾಸ್ಕೆಟ್‍ಗೆ ಬಾಲ್ ಹಾಕಿದರು. ಬಳಿಕ ಸತತವಾಗಿ ನಾಲ್ಕು ಸುತ್ತಿನಲ್ಲಿ ದಿವ್ಯಾ ಬಾಸ್ಕೆಟ್‍ಗೆ ಬಾಲ್ ಹಾಕುವುದರ ಮೂಲಕ ವಿಜೇತರಾದರು ಹಾಗೂ ಧನುಶ್ರೀ ಈ ವಾರ ನೇರವಾಗಿ ನಾಮಿನೆಟ್ ಪಟ್ಟಿಗೆ ಸೇರಿದರು. ಅಲ್ಲದೆ ಆಟ ಇನ್ನೇನೂ ಕೊನೆಯ ಹಂತದಲ್ಲಿರುವಾಗ ದಿವ್ಯಾ ಕಾಲಿಗೆ ಪೆಟ್ಟಾಗಿ ರಕ್ತಸ್ರಾವವಾಗಲೂ ಪ್ರಾರಂಭವಾಯಿತು ಆದರೂ ಅದನ್ನು ಲೆಕ್ಕಿಸದೇ ದಿವ್ಯಾ ಕೊನೆಯ ಬಜರ್‍ನಲ್ಲಿ ಕೂಡ ಆಟ ಆಡಿ ಗೆದ್ದರು.

ಒಟ್ಟಾರೆ ದಿವ್ಯಾ ಹಾಗೂ ಧನುಶ್ರೀ ಮಧ್ಯೆ ಇದ್ದ ಟಫ್ ಫೈಟ್ ನೋಡಿ ಮನೆಯ ಸದಸ್ಯರು ಇದು ಬಾಸ್ಕೆಟ್ ಬಾಲ್ ಪಂದ್ಯದಂತೆ ಕಾಣಿಸುತ್ತಿಲ್ಲ ಬದಲಾಗಿ ಕಬ್ಬಡ್ಡಿ ಪಂದ್ಯದಂತೆ ಕಾಣಿಸುತ್ತಿದೆ ಎಂದು ಹೇಳುತ್ತಿದ್ದರು.

Comments

Leave a Reply

Your email address will not be published. Required fields are marked *