ಕಣ್ಣೊಡೆದು ಕರೆದ ದಿವ್ಯಾ ಸುರೇಶ್ – ನಾಚಿ ನೀರಾದ ಮಂಜು

ಬೆಂಗಳೂರು: ಬಿಗ್ ಮನೆಯಲ್ಲಿ ಮೊದಲ ದಿನದಿಂದಲೂ ಒಂದು ಜೋಡಿಯ ಮೇಲೆ ಬಿಗ್‍ಬಾಸ್ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ಚರ್ಚೆ ನಡೆಯುತ್ತಿದೆ.

ಮನೆಯಲ್ಲಿ ಸದ್ಯಕ್ಕೆ ಎಲ್ಲರ ಗಮನವನ್ನು ಸೆಳೆಯುತ್ತಾ ಇರುವ ಜೋಡಿ ಎಂದರೆ ಮಂಜು ಮತ್ತು ದಿವ್ಯ. ಇವರಿಬ್ಬರೂ ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಾ ಎಲ್ಲರ ಮುಖದಲ್ಲಿ ನಗುವನ್ನು ತರಿಸುತ್ತಾ ಇರುವುದಂತೂ ಸುಳ್ಳಲ್ಲ.

ಮನೆಯ ಸದಸ್ಯರು ಒಂದು ಕಡೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ದಿವ್ಯ ಅವರು ಮಂಜು ಎಂದು ಕಣ್ಣು ಹೊಡೆದು ಕರೆದಿದ್ದಾರೆ. ಮಂಜು ದಿವ್ಯಾ ಕಣ್ಣೋಟಕ್ಕೆ ನಾಚುತ್ತಾ ಹೋಗಿ ಪಕ್ಕದಲ್ಲಿ ಕುಳಿತಿದ್ದಾರೆ. ಈ ವೇಳೆ ಅಲ್ಲಿದ್ದವರು ಜೋರಾಗಿ ನಕ್ಕು ಸಂತೋಷ ಪಟ್ಟಿದ್ದಾರೆ.

ಶುಭಾ ಪೂಂಜಾ, ಮಂಜು, ದಿವ್ಯಾ, ನಿರ್ಮಲಾ ಒಂದೆಡೆ ಮಾತನಾಡುತ್ತಾ ಕುಳಿತಿರುವಾಗ ಮಂಜು ಅಯ್ಯೋ ಮಾತಿನ ಭರದಲ್ಲಿ ಇವರನ್ನು ನೋಡುವುದೆ ಮರೆತೆ ಇರಿ ನೋಡ್ಕೊಂಡು ಬಿಡುತ್ತೇನೆ ಎಂದು ಕೇಳಿ ದಿವ್ಯಾ ಅವರನ್ನು ಪ್ರೀತಿಯಿಂದ ದಿಟ್ಟಿಸಿ ನೋಡಿದ್ದಾರೆ. ದಿವ್ಯಾ ಕೂಡಾ ನಾಚಿ ನಿರಾಗಿದ್ದಾರೆ.

 ಮನೆಯ ಸದಸ್ಯರಲ್ಲಿರುವ ಒಳ್ಳೆ ವಿಚಾರಗಳನ್ನು ಹೇಳಬೇಕಿತ್ತು. ಈ ಸಮಯದಲ್ಲಿಯೂ ಕೂಡಾ ಮಂಜು ದಿವ್ಯಾ ಅವರು ಕುರಿತಾಗಿ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ನಾನು ಏನೇ ಹೇಳಿದರೂ ಬೇಸರವಾಗುವುದಿಲ್ಲ. ಹೊರಗೆ ಜನ ನೋಡುತ್ತಿದ್ದಾರೆ ಎನ್ನುವುದು ಗೊತ್ತಿದ್ದರು ಕೂಡಾ ಮೈ ಮರೆತು ನನ್ನ ಪ್ರೀತಿ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕವಾಗಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ. ಈ ಜೋಡಿ ಹಕ್ಕಿಗಳ ಮುದ್ದಾದ ಪ್ರೇಮ್ ಕಹಾನಿಯ ಮೇಲೆ ಬಿಗ್‍ಬಾಸ್ ಅಭಿಮಾನಿಗಳು ಒಂದು ಕಣ್ಣು ಇಟ್ಟಿದ್ದಾರೆ.

Comments

Leave a Reply

Your email address will not be published. Required fields are marked *