ದಿವ್ಯಾ ಕಣ್ಣೀರಿಗೆ ಕರಗಿದ ಅರವಿಂದ್ ಮನಸ್ಸು

ಬಿಗ್‍ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಗುತ್ತಾ ಇರುವ ಅರವಿಂದ್, ದಿವ್ಯಾ ಉರುಡುಗ ಜೋಡಿ ಇದೀಗ ಮತ್ತೆ ಸುದ್ದಿಯಾಗಿದೆ. ದಿವ್ಯಾ ಕಣ್ಣೀರಿಗೆ ಅರವಿಂದ್ ಕರಗಿದ್ದಾರೆ.

ಬಿಗ್‍ಬಾಸ್ ಸ್ಪರ್ಧಿಗಳಿಗೆ ನಿಲ್ಲು ನಿಲ್ಲು ಕಾವೇರಿ, ತರತರ ಈ ಎತ್ತರ ಎನ್ನುವ ಎರಡು ಟಾಸ್ಕ್ ಅನ್ನು ನೀಡಿದ್ದರು. ಈ ವೇಳೆ 2 ಗುಂಪನ್ನು ಮಾಡಲಾಗಿತ್ತು. ದಿವ್ಯಾ ಅರವಿಂದ್ ಒಂದೇ ಗುಂಪಿನಲ್ಲಿ ಆಟವನ್ನು ಆಡುತ್ತಿದ್ದರು. ತರತರ ಎತ್ತರ ಟಾಸ್ಕ್ ಆಡುವ ಸಮಯದಲ್ಲಿ ಅರವಿಂದ್ ರೂಮ್ ಒಳಗೆ ಲಾಕ್ ಆಗಿ ಬಿಡುತ್ತಾರೆ. ಈ ವೇಳೆ 2 ತಂಡಗಳ ಚೆನ್ನಾಗಿ ಆಡುತ್ತಾರೆ ಗೇಮ್ ಟೈ ಆಗುತ್ತದೆ. ಈ ಹೇಗೆ ಟೈ ಆಯಿತ್ತು. ನಾವು ಗೆಲ್ಲ ಬೇಕಿತ್ತು ಎಂದು ಅರವಿಂದ್, ದಿವ್ಯಾ ಮಾತನಾಡುತ್ತಾ ಇರುವಾಗ ಗೇಮ್ ಸೋತಿರುವ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ದಿವ್ಯಾ ಏನ್ ಆಯ್ತು ಗೇಮ್‍ನಲ್ಲಿ ಎಂದು ವಿವರವಾಗಿ ಅರವಿಂದ್‍ಗೆ ಹೇಳಲು ಪ್ರಯತ್ನಿಸಿದ್ದಾರೆ. ಆದರೆ ಅರವಿಂದ್ ಆಟ ಗೆದ್ದಿಲ್ಲ ಎನ್ನುವ ಬೇಸರದಲ್ಲಿ ಇದ್ದರು. ದಿವ್ಯಾ ಕೂಡಾ ಬೇಸರವಾಗಿ ಕೂತಿದ್ದರು. ಅರವಿಂದ್ ಬಂದು ದಿವ್ಯಾ ಅವರಿಗೆ ಸಮಾಧಾನ ಮಾಡಿದ್ದಾರೆ.

ನಾವು ಗೇಮ್ ಸೋತಿಲ್ಲ, ಆದರೆ ವೀನ್ ಆಗಬೇಕಿತ್ತು ಅಷ್ಟೇ. ಎಲ್ಲರೂ ಬೇಸ್ಟ್ ಟ್ರೈ ಮಾಡಿದ್ದಾರೆ. ಎಲ್ಲರೂ ಹಸನ್ಮುಖಿಯಾಗಿರಬೇಕು ಎಂದು ಹೇಳಿ ನೀವು ಬೇಸರವಾಗಬೇಡಿ, ಮುಂದಿನ ಆಟವನ್ನು ಚೆನ್ನಾಗಿ ಆಡುವಾ ಎಂದು ದಿವ್ಯಾ ಅರವಿಂದ್‍ಗೆ ಹೇಳಿದ್ದಾರೆ. ಆಗ ಟೀಮ್‍ನ ಎಲ್ಲರನ್ನೂ ಕರೆದು ಅರವಿಂದ್ ಚೆನ್ನಾಗಿ ಅಡುವ ಎಂದು ಹೇಳಿ ಆಟಕ್ಕೆ ಹುರಿದುಂಬಿಸಿದ್ದಾರೆ.

ಬಿಗ್‍ಬಾಸ್ ಮನೆಯ ಈ ಪ್ರೀತಿ ಜೋಡಿ ಮನೆಯಲ್ಲಿ ಮುದ್ದಾಗಿ ಕಾಣಿಸಿಕೊಳ್ಳುತ್ತದೆ. ಆಗಾಗ ಸುದ್ದಿಯಾಗುತ್ತಾ ತಮ್ಮ ಕ್ಯೂಟ್ ಆಟ, ಮಾತು, ಗೇಮ್ ಮೂಲಕವಾಗಿ ಬಿಗ್‍ಬಾಸ್ ವೀಕ್ಷಕರಿಗೆ ಮೆಚ್ಚುಗೆಯಾಗುವಂತಹ ಜೋಡಿಯಾಗಿದೆ. ಇದೀಗ ದಿವ್ಯಾ ಅವರ ಬೇಸರವನ್ನು ಅರವಿಂದ್ ಮುದ್ದಾಗಿ ಸಮಾಧಾನ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *