ದಿವ್ಯಾ ಉರುಡುಗ ಬಗ್ಗೆ ಅರವಿಂದ್ ಬಾಯ್ಬಿಟ್ಟ ಸತ್ಯ ಏನು..? 

ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಹೊರಗೆ ಬಂದ ನಂತರ ಕೆ.ಪಿ ಅರವಿಂದ್‍ರವರು ಬಿಗ್‍ಬಾಸ್ ಆಟೋಗ್ರಾಫ್ ಮೂಲಕ ತಮ್ಮ ಮನದಾಳದ ಮಾತನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಇಷ್ಟು ದಿನ ದೊಡ್ಮನೆಯಲ್ಲಿ ತಮ್ಮ ಸಿಹಿ ಹಾಗೂ ಕಹಿ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಬಿಗ್‍ಬಾಸ್ ಮನೆಗೆ ಎಂಟ್ರಿ ಆದಾಗ ಫಸ್ಟ್ ಗಾರ್ಡನ್ ಏರಿಯಾದಲ್ಲಿ ಬರೀ ಲೈಟ್ಸ್ ಇತ್ತು. ನಾನು ಕನ್ಫ್ಯೂಷನ್‍ನಲ್ಲಿಯೇ ಇದ್ದೆ. ಮನೆಯ ಒಳಗಡೆ ಕಾಲಿಟ್ಟ ನಂತರ ತುಂಬಾ ಬ್ರೈಟ್ ಆಗಿ ಫೀಲ್ ಆಯ್ತು. 5 ಜನ ಕಂಟೆಸ್ಟೆಂಟ್ ಮೊದಲೇ ಒಳಗಡೆ ಇದ್ದಿದ್ದನ್ನು ಕಂಡು ತುಂಬಾ ಗೊಂದಲಗಳು ಇದ್ದವು. ಮನೆಯ ಮಂದಿ ಜೊತೆ ನಾನು ಹೇಗೆ ಬೆರೆಯುತ್ತೇನೆ ಅಂತ ಎಕ್ಸೈಟ್‍ಮೆಂಟ್ ಆಗಿದ್ದೆ. ಹಾಗೆಯೇ ಮಿಕ್ಸ್ ಫೀಲೀಂಗ್ಸ್ ಕೂಡ ಇತ್ತು.

ಸದ್ಯ ನಾಳೆಯಿಂದ ಬಿಗ್‍ಬಾಸ್ ಹಾಕುವ ಹಾಡು, ನಿಮ್ಮ ಮೈಕ್ ನ್ನು ಸರಿಯಾಗಿ ಧರಿಸಿ ವಾಯ್ಸ್, ನನ್ನ ಸಹ ಕಂಟೆಸ್ಟೆಂಟ್ ಎಲ್ಲರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಬಿಗ್‍ಬಾಸ್ ವಿನ್ನರ್ ನಾನು ಆಗುತ್ತೇನೆ ಅಂದುಕೊಂಡಿದ್ದೀನಿ. 72 ದಿನಗಳಲ್ಲಿ ನನ್ನನ್ನು ಪ್ರೀತಿಸುವಂತಹ ಜನರು ಜಾಸ್ತಿ ಇದ್ದಾರೆ ಹಾಗೂ ನನಗೆ ಒಂದು ಒಳ್ಳೆಯ ಸಪೋರ್ಟ್ ಸಿಕ್ಕಿದೆ. ಪರ್ಫಾಮೆನ್ಸ್ ಚೆನ್ನಾಗಿ ಮಾಡಿದ್ದೇನೆ ಅಂದುಕೊಂಡಿದ್ದೇನೆ ಎಂದು ಹೇಳಿದರು.

ನನಗೆ ಇಷ್ಟವಾದ ಟಾಸ್ಕ್‌ಗಳಲ್ಲಿ ಹಾವು ಸ್ಟೀಲಿನ ಹಲಗೆ ಬಳಸಿ ರಂಧ್ರಕ್ಕೆ ಹಾಕಿದ ಟಾಸ್ಕ್. ಅದು ನೋಡುವುದಕ್ಕೆ ಬಹಳ ಕಾಂಪ್ಲಿಕೆಟೆಡ್ ಆಗಿತ್ತು. ಆದರೆ ನನಗೆ ಸ್ವಲ್ಪ ಬ್ಯಾಲೆನ್ಸ್ ಹಾಗೂ ಟಾಸ್ಕ್‌ನಲ್ಲಿ ತಿಳುವಳಿಕೆ ಇದ್ದಿದ್ದರಿಂದ ತುಂಬಾ ವೇಗವಾಗಿ ಟಾಸ್ಕ್‌ನನ್ನು ಮುಗಿಸಿದೆ.

ದಿವ್ಯಾ ಉರುಡುಗ ಜೊತೆ ಆಟ ಆಡಿದ್ದರಿಂದ ಆಲ್ ಮೋಸ್ಟ್ ನಾವು ಎಲ್ಲಾ ಟಾಸ್ಕ್‌ನಲ್ಲಿಯೂ ವಿನ್ ಆಗುತ್ತಿದ್ವಿ. ಅವರು ನನಗೆ ಒಂದು ರೀತಿ ಗುಡ್ ಲಕ್ ಎಂದೇ ಹೇಳಬಹುದು. ದಿವ್ಯಾ ಉರುಡುಗಳಿಂದ ನಾನು ಕ್ಯಾಪ್ಟನ್ ಕೂಡ ಆಗುತ್ತೇನೆ. ದಿವ್ಯಾ ಉರುಡುಗ ನನ್ನ ಮೈನ್ ಸಪೋರ್ಟರ್. ನಾವಿಬ್ಬರು ಏನೇ ಇದ್ದರು ಶೇರ್ ಮಾಡಿಕೊಳ್ಳುತ್ತೇವೆ. ಯಾವುದೇ ವಿಷಯಕ್ಕಾದರೂ ನಿರ್ಧಾರ ತೆಗೆದುಕೊಳ್ಳಬೇಕಾದರೆ ಇಬ್ಬರು ಒಬ್ಬರಿಗೊಬ್ಬರು ಸಲಹೆ ತೆಗೆದುಕೊಳ್ಳುತ್ತೇವೆ. ದಿವ್ಯಾ ಉರುಡುಗ ನನ್ನ ಕ್ಲೋಸೆಸ್ಟ್ ಹಾಗೂ ಸ್ಟ್ರಾಗೆಸ್ಟ್ ಫ್ರೆಂಡ್ ಎಂದರು.

ಬಿಗ್‍ಬಾಸ್‍ನ ಇಷ್ಟು ದಿನದ ಜರ್ನಿಯಲ್ಲಿ ಮರೆಯಲಾದ್ದು ಎಂದರೆ ಒಲವಿನ ಉಡುಗೊರೆ. ಅಂತಹ ಉಡುಗೊರೆ ಸಿಗುತ್ತದೆ ಎಂದು ಅದರಲ್ಲಿ ನಾನು ಎಕ್ಸ್​ಪೆಕ್ಟ್  ಮಾಡಿರಲಿಲ್ಲ. ಅದು ಒಂದು ನನ್ನ ಮರೆಯಲಾಗದಂತಹ ಈವೆಂಟ್. ನನ್ನ ಈ ಬಿಗ್‍ಬಾಸ್ ಜರ್ನಿಯಲ್ಲಿ ದಿವ್ಯಾ ಉರುಡುಗ ಪಾತ್ರ ಬಹಳ ಇಂಪಾರ್ಟೆಟ್ ಆಗಿದೆ. ಫಸ್ಟ್ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದು ಅವರಿಂದಲೇ ಕ್ಯಾಪ್ಟನ್ ಆದೆ, ಸೆಕೆಂಡ್ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿಯೂ ಅವರ ಹೆಲ್ಪ್‍ನಿಂದಲೇ ಕ್ಯಾಪ್ಟನ್ ಆದೆ.

ಇಷ್ಟು ದಿನ ನಾನು ಬಿಗ್‍ಬಾಸ್ ಮನೆಯಲ್ಲಿ ಉಳಿಯುತ್ತೇನೆ ಎಂದು ಅಂದುಕೊಂಡಿರಲಿಲ್ಲಿ. ಆದ್ರೆ ಇಷ್ಟು ವಾರ ವೋಟ್ ಮಾಡಿ ಇಷ್ಟು ದೂರ ಕರೆದುಕೊಂಡು ಬಂದ ಅಭಿಮಾನಿಗಳಿಗೆ ನನ್ನ ಕೋಟಿ ಕೋಟಿ ಧನ್ಯವಾದಗಳು ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *