ದಿವ್ಯಾ ಉರುಡುಗ ನನ್ನ ಲಕ್ಕಿ ಚಾರ್ಮ್: ಅರವಿಂದ್

ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿ ಅರವಿಂದ್ ಮನೆಯಿಂದ ಹೊರ ಬಂದ ನಂತರ ಹಲವು ಕಡೆ ಸಂದರ್ಶನ ನೀಡಿದ್ದಾರೆ. ಅವುಗಳಲ್ಲಿ ಬಹುತೇಕ ಸಂದರ್ಶನಗಳಲ್ಲಿ ಅರವಿಂದ್ ದಿವ್ಯಾಳನ್ನು ಹಾಡಿಹೋಗಳಿರುವ ವೀಡಿಯೋಗಳು ಸಖತ್ ವೈರಲ್ ಆಗಿವೆ.

ಮನೆಯಲ್ಲಿರುವ 20 ಜನರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದ ಅರವಿಂದ್, ಜೋಡಿ ಟಾಸ್ಕ್ ನಂತರ ನಟಿ ದಿವ್ಯಾ ಉರುಡುಗ ಜೊತೆಯಾಗಿದ್ದರು. ಆಗಿನಿಂದ ಇಬ್ಬರ ನಡುವೆ ಒಂದು ಉತ್ತಮವಾದ ಸ್ನೇಹವಿತ್ತು. ಬಿಗ್‍ಬಾಸ್‍ನಲ್ಲಿ ಇಬ್ಬರು ಒಟ್ಟಿಗೆ ಇರುವ ಕೆಲವಷ್ಟು ಕ್ಯೂಟ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಆದರೆ ಇದೀಗ ಮನೆಯಿಂದ ಹೊರಬಂದ ಮೇಲೆ ಸಂದರ್ಶನ ವೀಡಿಯೋಗಳು ವೈರಲ್ ಆಗಿವೆ.

ಬಿಗ್‍ಬಾಸ್ ಮನೆಯಿಂದ ಹೊರ ಬಂದ ನಂತರ ಸ್ಪರ್ಧಿಗಳು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಚಾಟ್ ಮೂಲಕ ಅಭಿಮಾನಿಗಳ ಜೊತೆ ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಮಾತನಾಡುತ್ತಿದ್ದಾರೆ. ಪ್ರತಿ ಸಲ ಲೈವ್ ಬಂದಾಗಲೂ ಅರವಿಂದ್‍ಗೆ ದಿವ್ಯಾ ಕುರಿತಾಗಿ ಪ್ರಶ್ನೆಗಳು ಬಂದಿವೆ. ಅರವಿಂದ್ ನೀಡಿರುವ ಉತ್ತರಗಳು ಮಾತ್ರ ಸಖತ್ ವೈರಲ್ ಆಗುತ್ತಿವೆ.

ದಿವ್ಯಾ ನನಗೆ ಲಕ್ಕಿ ಚಾರ್ಮ್…ಆಕೆ ಜೊತೆಗೆ ನಾನು ಒಂದು ಟಾಸ್ಕ್ ಕೂಡ ಸೋತಿಲ್ಲ. ಒಳ್ಳೆಯ ವ್ಯಕ್ತಿ ಹಾಗೂ ತುಂಬಾನೇ ಪಾಸಿಟಿವ್ ಆಗಿರುತ್ತಾರೆ. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೂ ಕಾಂಪಿಟೇಷನ್ ಕೊಡುವ ಹುಡುಗಿ ಈಕೆ. ಇಬ್ಬರ ಸ್ನೇಹ ಹೀಗೆ ಮುಂದುವರಿದುಕೊಂಡು ಹೋಗಬೇಕು ಅಂದು ಕೊಂಡಿರುವೆ. ನೋಡೋಣ ಹೇಗೆ ಏನು ಆಗುತ್ತದೆ ಎಂದು… ನಮ್ಮನ್ನು ಜನ ಸ್ವೀಕರಿಸಿರುವ ರೀತಿ ನೋಡಿ ಶಾಕ್ ಆಗಿದೆ. ತುಂಬಾ ಸ್ಪೆಷಲ್ ಫೀಲ್ ಆಗುತ್ತಿದೆ. ಅದರಲ್ಲೂ ಆರ್ವಿಯಾ, ಆರ್ವಿ ಅಂತ ಹ್ಯಾಷ್‍ಟ್ಯಾಗ್ ಕ್ರಿಯೇಟ್ ಮಾಡಿದ್ದಾರೆ.ನಾನು 15 ವರ್ಷಗಳು ಡಾಕಾದಲ್ಲಿ ಮಾಡಿರುವ ಸಾಧನೆಯನ್ನು ಜನರು ಈಗ ಈ ಶೋ ಮೂಲಕ ಗುರುತಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೇವಲ 44 ಸಾವಿರ ಫಾಲೋವರ್ಸ್ ಇದ್ದರು ನಂಗೆ. ಇದೀಗ 2 ಲಕ್ಷ ಫಾಲೋವರ್ಸ್ ಆಗಿದ್ದಾರೆ ಎಂದು ಅರವಿಂದ್ ಹೇಳಿದ್ದಾರೆ.

ಅರವಿಂದ್, ದಿವ್ಯಾ ಜೋಡಿಯನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಇಬ್ಬರ ಜೋಡಿ ಕುರಿತಾಗಿ ನೆಟ್ಟಿಗರು ತುಂಬಾ ಪ್ರೀತಿಯಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಸಿಕ್ಕರೆ ದಿವ್ಯಾ ತರ ಹುಡುಗಿ ಸಿಗಬೇಕು ಎಂದು ಹುಡುಗರು ಹೇಳಿದರೆ, ಅರವಿಂದ್ ಸಿಗಲಿಲ್ಲಾ ಅಂದ್ರ ಓಕೆ ಆದರೆ ಅರವಿಂದ್ ತರ ಇರುವ ಹುಡುಗನೇ ಬೇಕು ಎಂದು ಹೆಂಗಳೆಯರು ಕಾಮೆಂಟ್ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *