ದಿವ್ಯಾ, ಅರವಿಂದ್ ಮಧ್ಯೆ ಏನಿದು ಉಡುಪಿ ಹೋಟೆಲ್?

ಬಿಗ್‍ಬಾಸ್ ಕೊನೆಯ ದಿನ ಮನೆ ಮಂದಿಗೆ ದಿವ್ಯಾ ಉರುಡುಗ ವಾಯ್ಸ್ ನೋಟ್ ಕಳುಹಿಸಿ ಸರ್ಪ್ರೈಸ್ ನೀಡಿದ್ರು. ಮನೆ ಮಂದಿಗೆ ಸರ್ಪ್ರೈಸ್ ನೀಡಿದ ದಿವ್ಯಾ ಈಗ ತಮ್ಮ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಜೋಡಿ ಟಾಸ್ಕ್ ನಿಂದ ಜೊತೆಯಾಗಿ ಮನೆಯಲ್ಲಿ ಅತಿ ಹೆಚ್ಚು ಸಮಯ ಕಳೆಯುತ್ತಿದ್ದ ಅರವಿಂದ್ ಅವರ ಜೊತೆ ಮಾತನಾಡಿದ ದಿವ್ಯಾ ಕೊನೆಯಲ್ಲಿ “ಉಡುಪಿ ಹೊಟೇಲ್ ಬಗ್ಗೆ ಥಿಂಕ್ ಮಾಡಿ” ಎಂದು ಹೇಳಿದ್ದರು. ಇಲ್ಲಿಯವರೆಗೆ ಇವರಿಬ್ಬರ ನಡುವಿನ ಸಂಭಾಷಣೆಯಲ್ಲಿ “ಉಡುಪಿ ಹೋಟೆಲ್” ಬಗ್ಗೆ ಪ್ರಸ್ತಾಪವಾಗಿರಲಿಲ್ಲ. ಈಗ ದಿವ್ಯಾ ಹೇಳಿದ್ದರಿಂದ ಏನಿದು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಎಲ್ಲರಿಗೂ ವಾಯ್ಸ್ ನೋಟ್ ಕಳುಹಿಸಿದ್ದ ದಿವ್ಯಾ ಕೊನೆಗೆ ಅರವಿಂದ್ ಜೊತೆ ಮಾತನಾಡಿದರು. ಹಾಯ್ ಅವಿ ಹೇಗಿದ್ದೀರಾ ಅಂದ ದಿವ್ಯಾ ಅವರ ಧ್ವನಿಯಲ್ಲೇ ತುಂಬಾ ಮಿಸ್ ಮಾಡಿಕೊಂಡ ಭಾವ ಅಡಗಿತ್ತು.”ನಿಮ್ ಬಗ್ಗೆ ಏನ್ ಹೇಳಿದ್ರು ಎಷ್ಟ್ ಹೇಳಿದ್ರು ಕಡಿಮೇನೆ. ಖುಷಿ ಬೇಜಾರ್ ಏನ್ ಆದ್ರೂ ನನ್ ಹತ್ರ ಹೇಳ್ಕೋಳ್ತಾ ಇದ್ರಿ. ನಂಗೊತ್ತು ನಾನ್ ಇಲ್ಲ ಅಂದ್ರೆ ಬೇಜಾರಾಗಿರ್ತೀರಾ. ಯಾವಾಗ್ಲೂ ನಗ್ತಾ ಇರಿ, ಗೇಮ್ ಚೆನ್ನಾಗ್ ಆಡಿ, ತುಂಬಾ ಮಿಸ್ ಮಾಡ್ಕೋಳ್ತಾ ಇದ್ದೀನಿ, ಆರಾಮಾಗಿ ಇದ್ದೀನಿ. ಉಡುಪಿ ಹೊಟೇಲ್ ಬಗ್ಗೆ ಥಿಂಕ್ ಮಾಡಿ, ಪ್ರೀತಿ ಇರ್ಲಿ. ಮಿಸ್ ಯು ಆಲ್, ಆದಷ್ಟು ಬೇಗ ಸಿಕ್ತೇನೆ” ಅಂತ ಹೇಳಿ ಟಾಟಾ ಬಾಯ್ ಬಾಯ್ ಹೇಳಿದ್ರು. ಅರವಿಂದ್ ಕಣ್ಣಲ್ಲಿ ದಿವ್ಯ ವಾಯ್ಸ್ ಕೇಳಿ ನೋಡಿದ ಖುಷಿ ಕಾಣಿಸ್ತಾ ಇತ್ತು.

https://twitter.com/SHREEDHARB8/status/1392279704862826500

ಅರವಿಂದ್ ಅವರಿಗೆ ಖುಷಿ ಆಗಿದ್ದರೆ ಇತ್ತ ಅಭಿಮಾನಿಗಳು ಉಡುಪಿ ಹೋಟೆಲ್ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಇಲ್ಲಿಯವರೆಗಿನ ಎಪಿಸೋಡ್‍ನಲ್ಲಿ ಈ ವಿಚಾರ ಪ್ರಸ್ತಾಪವೇ ಆಗಿಲ್ಲ. ಲೈವ್‍ನಲ್ಲಿ ಈ ಬಗ್ಗೆ ಮಾತನಾಡಿರಬಹುದು ಎಂದು ಹೇಳುತ್ತಿದ್ದಾರೆ.

ಇನ್ನು ಕೆಲವರು ಹೋಟೆಲ್ ಉದ್ಯಮದಲ್ಲಿ ಉಡುಪಿ ಹೋಟೆಲ್ ಅಂದ್ರೆ ಒಂದು ಹೆಸರು ಇದೆ. ಅಷ್ಟೇ ಅಲ್ಲದೇ ಅರವಿಂದ್ ಮಣಿಪಾಲದವರು. ಹೀಗಾಗಿ ಇವರಿಬ್ಬರು ಅಡುಗೆ ಮನೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಕಾರಣ ಅದಕ್ಕೆ ಮುಂದೆ ಉಡುಪಿ ಹೋಟೆಲ್ ಇಡೋಣ ಎಂದು ಸುಮ್ನೆ ತಮಾಷೆ ಮಾಡುತ್ತಿರಬೇಕು. ಅದಕ್ಕಾಗಿ ಈ ವಿಚಾರವನ್ನು ಪ್ರಸ್ತಾಪ ಮಾಡಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅರವಿಂದ್ ಮತ್ತು ದಿವ್ಯಾ ಬಿಗ್ ಬಾಸ್‍ಗೆ ಯಾಮಾರಿಸಿ ಯಾವುದೋ ವಿಷಯವನ್ನು ನೇರವಾಗಿ ಹೇಳಲು ಸಾಧ್ಯವಾಗದ ಕಾರಣ ಕೋಡ್ ವರ್ಡ್ ನಲ್ಲಿ ಸಂಭಾಷಣೆ ಮಾಡುತ್ತಿರಬೇಕು. ಆ ಕೋಡ್ ವರ್ಡ್ ಈ ಉಡುಪಿ ಹೋಟೆಲ್ ಆಗಿರಬಹುದು ಎಂದು ಹೇಳುತ್ತಿದ್ದಾರೆ.

ಒಂದು ವೇಳೆ ಬಿಗ್ ಬಾಸ್ ಶೋ ಮುಂದುವರಿಯುತ್ತಿದ್ದರೆ ಸುದೀಪ್ ಅವರು ಈ ಪ್ರಶ್ನೆಯನ್ನು ಗ್ಯಾರಂಟಿ ಕೇಳುತ್ತಿದ್ದರು. ಆದರೆ ಶೋ ಈಗ ಅರ್ಧಕ್ಕೆ ನಿಂತಿದೆ. ಮುಂದೆ ಸಾಮಾಜಿಕ ಜಾಲತಾಣದಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಬಹುದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *