ದಿನಕ್ಕೆ ಕೋಟಿ ಜನರಿಗೆ ಕೋವಿಡ್‌ ಲಸಿಕೆ ಕೊಡಿ: ರಾಜ್ಯಪಾಲರಿಗೆ ಕೈ ನಾಯಕರ ಮನವಿ

ಬೆಂಗಳೂರು: ದೇಶದಲ್ಲಿ ಪ್ರತಿ ದಿನ ಒಂದು ಕೋಟಿ ಜನರಿಗೆ ಕೋವಿಡ್‌ ಲಸಿಕೆ ವ್ಯಾಕ್ಸಿನೇಷನ್‌ ಮಾಡುವಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ರಾಜ್ಯಪಾಲ‌ ವಿ.ಆರ್.ವಾಲಾ ಅವರಿಗೆ ಮನವಿ ಮಾಡಿದೆ.

ರಾಜಭವನಕ್ಕೆ ತೆರಳಿದ ಕಾಂಗ್ರೆಸ್ ನಾಯಕರ ನಿಯೋಗ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಮಾಜಿ ಸಚಿವ ರಾಮಲಿಂಗ ರೆಡ್ಡಿ, ಆರ್.ವಿ.ದೇಶಪಾಂಡೆ, ಹೆಚ್.ಕೆ.ಪಾಟೀಲ್ ಸಹಾ ನಿಯೋಗದಲ್ಲಿದ್ದರು. ಪ್ರತಿದಿನ ಒಂದು ಕೋಟಿ ವ್ಯಾಕ್ಸಿನೇಷನ್‌ ದೇಶದಲ್ಲಿ ಆಗಬೇಕು. ಉಚಿತ ವ್ಯಾಕ್ಸಿನೇಷನನ್ನ ಸರ್ಕಾರ ಜನರಿಗೆ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದರ ಜವಾಬ್ದಾರಿ ತಗೆದುಕೊಳ್ಳಬೇಕು ಎಂದು ರಾಜ್ಯಪಾಲರಿಗೆ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ‌. ಇದನ್ನೂ ಓದಿ: ಡಿಕೆಶಿ ಹೆಲಿಕಾಪ್ಟರ್‌ ಬೆಂಗಳೂರಿನಲ್ಲಿಳಿಯದೇ ನೆಲಮಂಗಲದಲ್ಲಿ ಲ್ಯಾಂಡ್‌ ಆಗಿದ್ದೇಕೆ..?

ರಾಜ್ಯಪಾಲರ ಮೂಲಕ, ರಾಷ್ಟ್ರಪತಿ ಗಳಿಗೆ ಮನವಿ ಮಾಡಿದ ಕೈ ನಾಯಕರು ಪ್ರಧಾನಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ನಮ್ಮ ಪಕ್ಷದ ಶಾಸಕರ ಪಾಲಿನ ಒಂದು ಕೋಟಿ ಪ್ರದೇಶಾಭಿವೃದ್ಧಿ ನಿಧಿ ನಮಗೆ ಕೊಡಿಸಿ ಎಂದು ರಾಜ್ಯಪಾಲರಲ್ಲಿ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *