ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ, ಜಮೀರ್ ಪಾಕಿಸ್ತಾನದ ಪರ ಇರುವ ಕಾಂಗ್ರೆಸ್ಸಿಗರು: ಈಶ್ವರಪ್ಪ

-ಅರುಣ್ ಸಿಂಗ್ ಭೇಟಿಯ ನಂತರ ಬಿಜೆಪಿ ಅಸಮಾಧಾನ ಸರಿ ಹೋಗಲಿದೆ

ಶಿವಮೊಗ್ಗ: ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್‍ರವರುಗಳು ಪಾಕಿಸ್ತಾನದ ಪರ ಇರುವ ಕಾಂಗ್ರೆಸ್ಸಿಗರು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370ನ್ನು ರದ್ದು ಮಾಡುತ್ತೇವೆ ಎಂದು ದಿಗ್ವಿಜಯ್ ಸಿಂಗ್ ಹೇಳುತ್ತಾರೆ ಇದು ದಿಗ್ವಿಜಯ್ ಸಿಂಗ್ ಅವರ ರಾಷ್ಟ್ರದ್ರೋಹದ ಹೇಳಿಕೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವುಗಳನ್ನು ಪೂಜೆ ಮಾಡುತ್ತೇವೆ. ಅದೇ ರೀತಿ ಗೋವುಗಳನ್ನು ಹತ್ಯೆಯನ್ನು ಮಾಡುತ್ತೇವೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆ ಪರ ಇದ್ದೇವೆ ಎಂದು ಜಮೀರ್ ಅಹಮದ್ ಹೇಳುತ್ತಾರೆ. ಹಾಗಾಗಿ, ಈ ಮೂರು ಜನ ಪಾಕಿಸ್ತಾನದ ಪರ ಇರುವವರು ಎಂದು ಸಚಿವ ಈಶ್ವರಪ್ಪನವರು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಹೇಳೋರು ಕೇಳೋರು ಇಲ್ಲದ ಪಕ್ಷ. ಈ ದೇಶದ ಗೋವಿನ ಬಗ್ಗೆ, ದೇಶದ ಭೂಮಿ ಕಾಶ್ಮೀರದ ಬಗ್ಗೆ ಗೌರವವಿಲ್ಲದ ಜನ ಕಾಂಗ್ರೆಸ್‍ನವರು. ಹೀಗಾಗಿಯೇ ಅವರು ಏನು ಬೇಕಾದರೂ ಹೇಳುತ್ತಾರೆ. ಆದರೆ ಬಿಜೆಪಿಯವರಿಗೆ ಹೇಳೋರು ಕೇಳೋರು ಇದ್ದಾರೆ ಎಂದರು.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ಜೂ. 16, 17,18ಕ್ಕೆ ರಾಜ್ಯಕ್ಕೆ ಆಗಮಿಸುವ ಅರುಣ್ ಸಿಂಗ್ ಸಚಿವರು ಜೊತೆ ಹಾಗೂ ಕೋರ್ ಕಮಿಟಿ ಸಮಿತಿ ಸದಸ್ಯರ ಜೊತೆ ಸಭೆ ಮಾಡಲಿದ್ದಾರೆ. ಶಾಸಕರಿಗೂ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ಇದೆ. ಇದು ಬಿಜೆಪಿ ಪಕ್ಷದ ವಿಶೇಷ. ಬಿಜೆಪಿಯಲ್ಲಿ ಹೇಳೋರು ಕೇಳೋರು ಇದ್ದಾರೆ ಎನ್ನುವುದಕ್ಕೆ ಅರುಣ್ ಸಿಂಗ್ ಬರುತ್ತಿರುವುದೇ ಸಾಕ್ಷಿ ಎಂದರು. ಜೊತೆಗೆ ಪಕ್ಷದಲ್ಲಿ ಕೆಲ ಗೊಂದಲಗಳಿವೆ ಆದರೆ ಅರುಣ್ ಸಿಂಗ್ ಬಂದು ಹೋದ ನಂತರ ಎಲ್ಲವೂ ಸರಿಯಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಜೂ.21 ರವರೆಗೆ ಲಾಕ್‍ಡೌನ್ ಮುಂದುವರಿಕೆ: ಸಚಿವ ಕೆ.ಎಸ್.ಈಶ್ವರಪ್ಪ

Comments

Leave a Reply

Your email address will not be published. Required fields are marked *