ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ನಟಿ ಮಯೂರಿ

ಬೆಂಗಳೂರು: ‘ಕೃಷ್ಣ ಲೀಲಾ’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಸೌಂಡ್ ಮಾಡಿದ ನಟಿ ಮಯೂರಿ ಕ್ಯಾತರಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಬಹುಕಾಲದ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿಯೋದಕ್ಕೆ ನಟಿ ಮಯೂರಿ ಸಜ್ಜಾಗಿದ್ದಾರೆ. ಭರ್ತಿ 10 ವರ್ಷಗಳಿಂದ ಪ್ರೀತಿಯಲ್ಲಿ ಬಂಧಿಯಾಗಿರುವ ಮಯೂರಿ ಹಾಗೂ ಅರುಣ್, ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಅಡಿಯಿಡಲು ರೆಡಿಯಾಗಿದ್ದಾರೆ. ಶುಕ್ರವಾರ ಮಯೂರಿ ಮದುವೆ ನಡೆಯಲಿದ್ದು, ಕುಟುಂಬಸ್ಥರು-ಆಪ್ತರು ಭಾಗಿಯಾಗಲಿದ್ದಾರೆ. ದೇವಸ್ತಾನದಲ್ಲಿ ಕೃಷ್ಣಲೀಲಾ ಸುಂದರಿಯ ಮದುವೆ ನೆರವೇರುತ್ತಿದೆ.

ಮಯೂರಿ ಅವರು ‘ಅಶ್ವಿನಿ ನಕ್ಷತ್ರ’ ಕಿರುತೆರೆ ಪ್ರವೇಶಿಸಿ, ಬಳಿಕ ‘ಕೃಷ್ಣ ಲೀಲಾ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟವರು. ‘ಇಷ್ಟಕಾಮ್ಯ’, ‘ರುಸ್ತುಂ’ನಂತಹ ಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸಿದ ನಂತರ, ಮಯೂರಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’, ‘ಮೌನಂ’ ಚಿತ್ರಗಳಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ.

ಸಂಪೂರ್ಣ ಹೊಸಬರೇ ಇರುವ ‘ಮೌನಂ’ ಸಿನಿಮಾದಲ್ಲಿ ಮಯೂರಿ ಅವರು ನಾಯಕಿಯಾಗಿ ನಟಿಸಿದ್ದರು. ರಾಜ್ ಪಂಡಿತ್ ನಿರ್ದೇಶನದ ಈ ಸಿನಿಮಾ ಇದೇ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು.

Comments

Leave a Reply

Your email address will not be published. Required fields are marked *