ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ – ಮೂವರ ವಿರುದ್ಧ ಎಫ್‍ಐಆರ್

ಮೈಸೂರು: ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ದರ್ಶನ್ ಬಳಿ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಬಂದಿದ್ದ ಮಹಿಳೆ ಸೇರಿದಂತೆ ಇನ್ನಿಬ್ಬರ ಹೆಸರು ಎಫ್‍ಐಆರ್ ನಲ್ಲಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಅರುಣಾ ಕುಮಾರಿ, ಮಧುಕೇಶವ ಮತ್ತು ನಂದೀಶ್ ಎಂಬವರ ವಿರುದ್ಧವೇ ಎಫ್‍ಐಆರ್ ದಾಖಲಾಗಿದೆ. ನಿರ್ಮಾಪಕ ಉಮಾಪತಿ ಗೆಳೆಯ ಹರ್ಷ ಮೆಲಂತಾ ನೀಡಿದ ದೂರಿನಡಿ ಈ ಮೂವರ ವಿರುದ್ಧ ದೂರು ದಾಖಲಾಗಿದೆ. ಮೊದಲಿಗೆ ಕರೆ ಮಾಡಿದ ಅರುಣ ಕುಮಾರಿ ನಿಮ್ಮ ಹೆಸರಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆಸ್ತಿ ಪರಿಶೀಲನೆಗೆ ಮೈಸೂರಿಗೆ ತೆರಳುತ್ತಿದ್ದು, ಬರಬೇಕೆಂದು ಹೇಳಿದ್ದಾರೆ.

ಈ ವೇಳೆ ಅರುಣಾ ಕುಮಾರಿ ಜೊತೆಯಲ್ಲಿ ಮಧುಕೇಶವ ಮತ್ತು ನಂದೀಶ್ ಇರುತ್ತಾರೆ. ಶ್ಯೂರಿಟಿಗೆ ನೀಡಿದ್ದು ಎನ್ನಲಾದ ಕೆಲ ನಕಲಿ ಝೆರಾಕ್ಸ್ ಪ್ರತಿಗಳನ್ನು ಅರುಣಾ ಕುಮಾರಿ ತೋರಿಸಿದಾಗ, ಸಹಿ ನನ್ನ ಹಾಗೆಯೇ ಇದ್ದು, ಆದ್ರೆ ನಕಲಿ ಎಂದು ಹೇಳಿದ್ದಾರೆ. ಆಗ ಅರುಣಾ ಕುಮಾರಿ ನಕಲಿ ದಾಖಲೆ ನೀಡಿ ಸಾಲಕ್ಕೆ ಮುಂದಾಗಿದ್ದೀರಿ, ಮಾಧ್ಯಮ ಪ್ರಕಟನೆ ಹೊರಡಿಸುತ್ತೇನೆ. ಇದ್ಯಾವುದೇ ಬೇಡವಾದ್ರೆ 25 ಲಕ್ಷ ರೂ. ನಗದು ನೀಡುವಂತೆ ಕೇಳಿದಳು ಎಂದು ದೂರುದಾರರು ಉಲ್ಲೇಖಿಸಿದ್ದಾರೆ.

ದೂರುದಾರರು ಜೂನ್ 19ರಂದು ಕೆನರಾ ಬ್ಯಾಂಕಿಗೆ ತೆರಳಿದಾಗ ಅಲ್ಲಿ ಶಿವಾನಿ ಹೆಸರಿನ ಮ್ಯಾನೇಜರ್ ಇರುತ್ತಾರೆ. ನಮ್ಮಲ್ಲಿ ಅರುಣಾ ಕುಮಾರಿ, ಮಧುಕೇಶವ ಮತ್ತು ನಂದೀಶ್ ಹೆಸರಿನ ಸಿಬ್ಬಂದಿಗಳಿಲ್ಲ ಎಂದು ಮಾಹಿತಿ ನೀಡಿದ ನಂತರ ಅನುಮಾನಗೊಂಡ ದೂರುದಾರರು ದೂರು ಸಲ್ಲಿಸಿದ್ದಾರೆ.

ಅರುಣಾ ಕುಮಾರಿ ತೋರಿಸಿದ ನಕಲಿ ದಾಖಲೆಗಳಲ್ಲಿ ಯಾರ ಆಸ್ತಿ ಪತ್ರಗಳಿತ್ತು. ನಿರ್ಮಾಪಕ ಉಮಾಪತಿ ಮತ್ತು ಹರ್ಷ ಮೆಲಂತಾ ನಡುವಿನ ವ್ಯವಹಾರ ಮೈಸೂರಿಗೆ ತಲುಪಿದ್ದು ಹೇಗೆ? ದರ್ಶನ್ ಅವರನ್ನ ಅರುಣಾ ಕುಮಾರಿ ಭೇಟಿಯಾಗಿದ್ದೇಗೆ? ಯಾರು ಈ ಮೂವರು? ಎಂಬುದರ ಬಗ್ಗೆ ಉತ್ತರ ಸಿಗಬಬೇಕಿದೆ. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್

ದರ್ಶನ್ ಹೇಳಿದ್ದೇನು? ಪೊಲೀಸ್ ಅಧಿಕಾರಿಗಳು ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಸ್ವಲ್ಪ ಸಮಯ ಕೊಡಿ ನಾನು ಈ ವಿಚಾರವಾಗಿ ಸ್ಪಷ್ಟನೆ ಕೊಡುತ್ತೇನೆ. ಈ ಘಟನೆ ನಡೆದು ಒಂದು ತಿಂಗಳು ಆಗಿದೆ. ಸತ್ಯ ಏನು ಎನ್ನುವುದು ಹೊರಗೆ ಬರಲಿ. ನಾನು ಆಗ ಈ ಕುರಿತಾಗಿ ಮಾತನಾಡುತ್ತೇನೆ. ಬ್ಲ್ಯಾಕ್ ಮೇಲ್ ಏನೂ ಆಗಿಲ್ಲ. ಪೊರ್ಜರಿಯಾಗಿದೆ. ಈ ಕುರಿತಾಗಿ ಪೊಲೀಸರು ತನಿಖೆ ಮಡುತ್ತಿದ್ದಾರೆ. ಈ ವಿಚಾರಕ್ಕೆ ಬೇರೆ ರಕ್ಕೆ ಪುಕ್ಕಾ ಬಂದಾಗ ನಾನು ತಲೆಯನ್ನು ಕಟ್ಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್‍ ಹೆಸರಿನಲ್ಲಿ ವಂಚನೆಗೆ ಯತ್ನ – ಮಹಿಳೆಯ ವಿರುದ್ಧ ಯಜಮಾನ ದೂರು

youtube.com/watch?v=tTL7jdUUCok

Comments

Leave a Reply

Your email address will not be published. Required fields are marked *