ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ, ಕೋಮಾದಲ್ಲಿಯೂ ಇಲ್ಲ: ಗೋಪಾಲ್ ರಾಜ್

– ಇಂದ್ರಜಿತ್ ಲಂಕೇಶ್ ಆರೋಪಗಳೆಲ್ಲ ಸುಳ್ಳು

ಮೈಸೂರು: ನಟ ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ. ನಾನು ಕೋಮಾದಲ್ಲಿಯೂ ಇಲ್ಲ. ನಿರ್ಮಾಪಕರಾದ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಹಲ್ಲೆಗೊಳಗಾದ ಎನ್ನಲಾದ ವ್ಯಕ್ತಿ ಗೋಪಾಲ್ ರಾಜ್ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗೋಪಾಲ್ ರಾಜ್, ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿರುವ ದಿನ ನಾನು ಅಲ್ಲಿ ಇರಲಿಲ್ಲ. ದರ್ಶನ್ ಅವರ ಜೊತೆ ನಮ್ಮ ಸ್ನೇಹ ಸುಮಾರು 30 ವರ್ಷಗಳಷ್ಟು ಹಳೆಯದು. ಇದುವರೆಗೂ ಇಂದ್ರಜಿತ್ ಲಂಕೇಶ್ ಅವರನ್ನ ಒಮ್ಮೆಯೂ ಭೇಟಿಯಾಗಿಲ್ಲ. ಆದ್ರೆ ಇಲ್ಲಿ ನನ್ನ ಹೆಸರು ಯಾಕೆ ಹೇಳಿದ್ರೂ ಅನ್ನೋದು ಗೊತ್ತಾಗುತ್ತಿಲ್ಲ. ಒಂದು ವೇಳೆ ಹಲ್ಲೆಗೊಳಗಾಗಿ, ಆಸ್ಪತ್ರೆ ಸೇರಿದ್ರೆ ಇಲ್ಲಿ ಹೇಗೆ ಮಾತನಾಡುತ್ತಿದ್ದೆ ಎಂದು ಇಂದ್ರಜಿತ್ ಲಂಕೇಶ್ ಅವರನ್ನ ಗೋಪಾಲ್ ರಾಜ್ ಪ್ರಶ್ನೆ ಮಾಡಿದರು.

ದರ್ಶನ್ ಅವರು ಯಾವುದೇ ಕಾರ್ಯಕ್ರಮಗಳಿಗೆ ಕರೆದ್ರೆ ಖಂಡಿತ ಹೋಗುತ್ತೇನೆ. ಕೊನೆಯ ಬಾರಿ ಮೃಗಾಲಯದ ಕಾರ್ಯಕ್ರಮವೊಂದರಲ್ಲಿ ಕೊನೆಯ ಬಾರಿ ಭೇಟಿಯಾಗಿದ್ದೆ. ಆ ನಂತರ ನಮ್ಮ ಭೇಟಿಯಾಗಿಲ್ಲ. ದರ್ಶನ್ ಹಲ್ಲೆ ಮಾಡ್ತಾರೆ ಅನ್ನೋ ಆರೋಪಗಳೆಲ್ಲ ಸುಳ್ಳು ಎಂದರು.

ನಮ್ಮ 30 ವರ್ಷದ ಸ್ನೇಹ ಒಡೆಯುವ ಸಂಚು ನಡೆಯುತ್ತಿದೆ. ನನ್ನ ಮೇಲೆ ಹಲ್ಲೆಯೂ ಆಗಿಲ್ಲ, ಕೋಮಾ ಪರಿಸ್ಥಿತಿಯಲ್ಲಿಯೂ ಇಲ್ಲ. ಹಾಗಾಗಿ ಇಂದ್ರಜಿತ್ ಮಾಡುತ್ತಿರುವ ಸುದ್ದಿಗೋಷ್ಠಿಗಳನ್ನು ನಿಲ್ಲಿಸಬೇಕು ಎಂದು ಗೋಪಾಲ್ ರಾಜ್ ಪಬ್ಲಿಕ್ ಟಿವಿ ಮೂಲಕ ಮನವಿ ಮಾಡಿಕೊಂಡರು.

ಹಾರ್ಸ್ ರೈಡರ್ ಹೇಳಿದ್ದೇನು?:
ನಾನು 7 ವರ್ಷಗಳ ಕಾಲ ಹಾರ್ಸ್ ರೈಡರ್ ಆಗಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಕೂಡ ದರ್ಶನ್ ನನ್ನೊಂದಿಗೆ ಏಕವಚನದಲ್ಲೂ ಮಾತನಾಡಿರಲಿಲ್ಲ ತುಂಬಾ ಚೆನ್ನಾಗಿ ಇದ್ವಿ, ಒಂದು ದಿನ ಕುದುರೆ ವಿಚಾರವಾಗಿ ನನಗೆ ಬೈದ್ರು ಅದಕ್ಕೆ ಕೆಲಸ ಬಿಟ್ಟೆ ಅದನ್ನು ಹೊರತು ಪಡಿಸಿ ನನಗೆ ಯಾವುದೇ ರೀತಿ ಹಲ್ಲೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ: ದರ್ಶನ್ ವಿರುದ್ಧ ಇಂದ್ರಜಿತ್ ಗರಂ

ದರ್ಶನ್ ಮತ್ತು ನಾನು ಚೆನ್ನಾಗಿ ಇದ್ವಿ, ಈಗಲೂ ಅವರ ಅಮ್ಮ ನನ್ನೊಂದಿಗೆ ಮಾತನಾಡಿಸುತ್ತಾರೆ. ದರ್ಶನ್ ಅವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆ ಬಳಿಕ ಒಂದು ದಿನ ಕುದುರೆ ವಿಚಾರವಾಗಿ ನನಗೆ ಬೈದರು. ಅದಕ್ಕೆ ನಾನು ಕೆಲಸ ಬಿಟ್ಟು ಬಂದೆ. ಅವರೊಂದಿಗೆ ಕೆಲಸ ಬಿಟ್ಟು ಬಂದು 3 ವರ್ಷ ಆಯ್ತು. ನಾನು ಅವರು ಸೆಲೆಬ್ರಿಟಿ ಅಂತ ಜಂಬದಿಂದ ಹೇಳುತ್ತಿಲ್ಲ. ಅವರಿಂದ ಬಿಟ್ಟು ಬಂದೆ ಎನ್ನುವ ಕೋಪಕ್ಕೂ ಹೇಳುತ್ತಿಲ್ಲ. ನಾನು ಅವರೊಂದಿಗೆ 7 ವರ್ಷ ಉತ್ತಮ ಬಾಂಧವ್ಯ ಹೊಂದಿದ್ದೆ. ಅದನ್ನು ಹೊರತು ಪಡಿಸಿ ಬೇರೆನಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಏನಯ್ಯಾ ದರ್ಶನ್‍ಗೆ ತಲೆ ಇಲ್ವೇನಯ್ಯಾ, ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ’

Comments

Leave a Reply

Your email address will not be published. Required fields are marked *