ಮೈಸೂರು: ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕರಿಸಿ ಮೃಗಾಲಯಗಳನ್ನು ಆರ್ಥಿಕ ಸಂಕಷ್ಟದಿಂದ ಮುಕ್ತಗೊಳಿಸಿ ಎಂಬ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಮೃಗಾಲಯಕ್ಕೆ 3 ಕೋಟಿ ದೇಣಿಗೆ ಬಂದಿದೆ.

ವೀಡಿಯೋ ಮೂಲಕ ಪ್ರಾಣಿ ದತ್ತು ತೆಗೆದುಕೊಳ್ಳುವಂತೆ ದರ್ಶನ್ ಕರೆ ನೀಡಿದ್ದರು. ರಾಜ್ಯದ 9 ಮೃಗಾಲಯಗಳಿಗೆ ಪ್ರಾಣಿ ಪ್ರಿಯರಿಂದ ನೆರವು ಸಿಕ್ಕಿದೆ. Zoos ಆ್ಯಪ್ ಕರ್ನಾಟಕ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ನಡೆದಿದ್ದು, ಸುಮಾರು 6 ಸಾವಿರಕ್ಕೂ ಅಧಿಕ ಜನರು ಪ್ರಾಣಿ ದತ್ತು ಸ್ವೀಕಾರ ಮಾಡಿದ್ದಾರೆ. ಕೇವಲ 20 ದಿನಗಳಲ್ಲಿ ಎರಡು ಕೋಟಿ ದೇಣಿಗೆ ಸಂಗ್ರಹವಾಗಿದೆ.

ಪ್ರಾಣಿ ದತ್ತು ಪಡೆದವರಿಗೆ ದರ್ಶನ್ ಭೇಟಿ ಮಾಡುವ ಅವಕಾಶವಿದ್ದು, ಪ್ರತಿ ಮೃಗಾಲಯದಲ್ಲಿ ಆಯ್ದ 50 ಜನರಿಗೆ ದರ್ಶನ್‍ರಿಂದ ಪ್ರಶಂಸನಾ ಪತ್ರ ಸಿಗಲಿದೆ. ದರ್ಶನ್ ಮನವಿಗೆ ಓಗೊಟ್ಟು ಚಿತ್ರ ನಟರಿಂದಲೂ ದತ್ತು ಸ್ವೀಕಾರ ಆಗಿದೆ.

ನವಿಲು ಹಾಗೂ ನಾಗರಹಾವನ್ನೇ ಹೆಚ್ಚು ದತ್ತು ಪಡೆದಿದ್ದು, ಇಂದಿನಿಂದ ಬೆಳಗಾವಿ, ಗದಗ ಹಾಗೂ ಹಂಪಿ ಮೃಗಾಲಯ ಓಪನ್ ಆಗಲಿದೆ. ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ. ಸ್ಥಳದಲ್ಲೇ ಕೋವಿಡ್ ಪರೀಕ್ಷೆ ನಡೆಸಿ ಮೃಗಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 2 ಕೋಟಿ ಲಸಿಕೆ ನೀಡಿ ಇತಿಹಾಸ ನಿರ್ಮಿಸಿದ ಕರ್ನಾಟಕ: ಸುಧಾಕರ್

Leave a Reply